ETV Bharat / state

ಎತ್ತಿನಹೊಳೆ ಯೋಜನೆ ಈಗದು ಹಣ ಎತ್ತುವಳಿ ಯೋಜನೆಯಂತಾಗಿದೆ ಅಂತಾರೆ ಹೆಚ್ ಡಿ ಕುಮಾರಸ್ವಾಮಿ

ನಾನು ಮೊದಲೇ ಹೇಳಿದಂತೆ ಎತ್ತಿನಹೊಳೆ ಯೋಜನೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ತರುವುದಾಗಿ ಹೇಳಿ ಜನಗಳಿಗೆ ಟೋಪಿ ಹಾಕಿ ಹಣವನ್ನು ಲೂಟಿ ಮಾಡುತ್ತಿದ್ದಾರೆ..

H D Kumaraswamy
ಹೆಚ್​ಡಿ ಕುಮಾರಸ್ವಾಮಿ
author img

By

Published : Aug 20, 2021, 10:31 PM IST

ನೆಲಮಂಗಲ : 3 ವರ್ಷದಲ್ಲಿ ಪೂರ್ಣವಾಗಬೇಕಿದ್ದ ಎತ್ತಿನಹೊಳೆ ಯೋಜನೆ 12 ವರ್ಷವಾದರೂ ಪೂರ್ಣವಾಗಿಲ್ಲ. 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ. ಮುಂದೆ 50 ಸಾವಿರ ಕೋಟಿ ಆದರೂ ಆಶ್ಚರ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಎತ್ತಿನಹೊಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ, ಶ್ರೀಕೃಷ್ಣ ರುಕ್ಮಿಣಿ ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು ಭಾಗವಹಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.

ಮೊದಲಿಗೆ ದೇವರಾಯನದುರ್ಗದಲ್ಲಿ 10 ಟಿಎಂಸಿ ಸಾಮಾರ್ಥ್ಯದ ಜಲಾಶಯ ನಿರ್ಮಾಣದ ಬಗ್ಗೆ ಹೇಳಿದರು, ದೇವರಾಯನ ದುರ್ಗದಲ್ಲಿ ಜಲಾಶಯ ನಿರ್ಮಾಣ ಕಷ್ಟ ಸಾಧ್ಯವೆಂದು ಕೊರಟಗೆರೆ ಬಳಿಯ ಬೈರಗೊಂಡ್ಲು ಬಳಿ 5 ಟಿಎಂಸಿ ಸಾಮಾರ್ಥ್ಯದ ಜಲಾಶಯವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು, ಈಗ 2 ಟಿಎಂಸಿ ಜಲಾಶಯಕ್ಕೆ ಇಳಿಸಿಕೊಂಡಿದ್ದಾರೆ. ಜಲಾಶಯದ ಬಳಿ ಯಾವುದೇ ಕಾಮಗಾರಿ ನಡೆಯದಿದ್ದರೂ ಮುಖ್ಯಮಂತ್ರಿ ಬದಲಾಗುವ ಹಿಂದಿನ ದಿನ 1,500 ಕೋಟಿಗಳ ಮತ್ತೊಂದು ಯೋಜನೆಗೆ ಅಂಕಿತ ಹಾಕಲಾಗಿದೆ ಎಂದರು.

ನಾನು ಮೊದಲೇ ಹೇಳಿದಂತೆ ಎತ್ತಿನಹೊಳೆ ಯೋಜನೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ತರುವುದಾಗಿ ಹೇಳಿ ಜನಗಳಿಗೆ ಟೋಪಿ ಹಾಕಿ ಹಣವನ್ನು ಲೂಟಿ ಮಾಡುತ್ತಿದ್ದಾರೆ.

3 ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದರು. 12 ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸುವ ಕೆಲಸ ಮಾಡಿಲ್ಲ. 8 ಸಾವಿರದಿಂದ 23 ಸಾವಿರ ಕೋಟಿಗೆ ಹೋಗಿರುವ ಯೋಜನೆ ಮುಂದೆ 50 ಸಾವಿರ ಕೋಟಿಗೂ ಹೋದರೂ ಆಶ್ಚರ್ಯವಿಲ್ಲ ಎಂದರು.

ಓದಿ: ದೇವನಹಳ್ಳಿ : ದಲಿತ ಬಾಲಕನ ಮೇಲೆ ಸವರ್ಣಿಯ ಯುವಕನಿಂದ ಹಲ್ಲೆ ಆರೋಪ : ನ್ಯಾಯಕ್ಕಾಗಿ ಕುಟುಂಬಸ್ಥರ ಕಣ್ಣೀರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.