ಬೆಂಗಳೂರು : ಕಳೆದ ಸಂವತ್ಸರದಲ್ಲಿ ಬೆಲ್ಲಕ್ಕಿಂತ ಬೇವೇ ಹೆಚ್ಚಾಯಿತು. ಈಗ ಹೊಸ ಆಸೆ-ಭರವಸೆಗಳೊಂದಿಗೆ ನೂತನ ಸಂವತ್ಸರವನ್ನು ಬರಮಾಡಿಕೊಳ್ಳೋಣ. ನಾಡಿನ ಎಲ್ಲ ಜನತೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ನಾವು ಈಗ ಹೊಸ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಪ್ಲವ ನಾಮ ಸಂವತ್ಸರ ಆರಂಭವಾಗುತ್ತಿದೆ. ಕಳೆದ ಶಾರ್ವರಿ ಸಂವತ್ಸರದಲ್ಲಿ ನಾಡಿನ ಹಾಗೂ ರಾಷ್ಟ್ರದ ಜನತೆ ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಹೆಮ್ಮಾರಿಯಂತೆ ಅಪ್ಪಳಿಸಿದ ಕೊರೊನದಿಂದಾಗಿ ಇಡೀ ದೇಶದ ಜನರ ಬದುಕೇ ಅಸ್ತವ್ಯಸ್ತಗೊಂಡಿತು. ಬಡವರು, ಕೂಲಿ ಕಾರ್ಮಿಕರು, ವಲಸಿಗರ ಪಾಡಂತೂ ಹೇಳತೀರದಾಯಿತು ಎಂದು ಹೇಳಿದ್ದಾರೆ.
-
ಯುಗಾದಿ ಹಬ್ಬದ ಶುಭಾಶಯ- pic.twitter.com/17tVnhTDV7
— H D Devegowda (@H_D_Devegowda) April 12, 2021 " class="align-text-top noRightClick twitterSection" data="
">ಯುಗಾದಿ ಹಬ್ಬದ ಶುಭಾಶಯ- pic.twitter.com/17tVnhTDV7
— H D Devegowda (@H_D_Devegowda) April 12, 2021ಯುಗಾದಿ ಹಬ್ಬದ ಶುಭಾಶಯ- pic.twitter.com/17tVnhTDV7
— H D Devegowda (@H_D_Devegowda) April 12, 2021
ಪ್ಲವ ಸಂವತ್ಸರ ಕಳೆದ ಸಂವತ್ಸರದ ನೋವುಗಳನ್ನು ಮರೆಸಿ ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ತರಲಿ, ಹಳಿ ತಪ್ಪಿರುವ ಎಲ್ಲ ರಂಗಗಳೂ ಮತ್ತೆ ಸರಿಹಾದಿಗೆ ಬಂದು ದೇಶ ಹಾಗೂ ನಾಡಿಗೆ ಒಳಿತಾಗಲಿ. ಯುಗಾದಿ ಎಲ್ಲರ ಪಾಲಿಗೆ ಹರ್ಷದಾಯಕವಾಗಲಿ ಎಂದು ಟ್ವೀಟ್ ನಲ್ಲಿ ಪ್ರಾರ್ಥಿಸಿದ್ದಾರೆ.