ಬೆಂಗಳೂರು: ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವವನ್ನು ಮಲ್ಲೇಶ್ವರಂನ ರಾಯರ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.
ಮಧ್ಯಾರಾಧನೆಯ ದಿನವಾದ ಇಂದೂ ಸಹ ರಾಯರ ಮಠದಲ್ಲಿ ನೂರಾರು ಭಕ್ತರು, ಭಕ್ತಿ ಶ್ರದ್ಧೆಯಿಂದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಬೆಳಗ್ಗೆಯೇ ವಿವಿಧ ಪಂಚಾಮೃತ ಅಭಿಷೇಕ ಮತ್ತು ಮಂಗಳಾರತಿ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ವಿಶೇಷ ಪೂಜೆ, ರಥೋತ್ಸವ ಹಾಗೂ ದೇವರನಾಮ ಸ್ಮರಣೆ, ಭಜನೆ, ಅನ್ನಸಂತರ್ಪಣೆಗಳು ನಡೆಯುತ್ತಿವೆ.
ಉತ್ತರಾರಾಧನೆಯಿಂದ ಅದ್ಧೂರಿಯ ರಥೋತ್ಸವವನ್ನು ನಡೆಸಲಾಗುವುದು. ಈ ವೇಳೆ ಭಜನಾ ಮಂಡಳಿಯೂ ಇರಲಿದ್ದು, ನಾಲ್ಲೈದು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ರಥೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ ಎಂದು ಅರ್ಚಕರು ಮಾಹಿತಿ ನೀಡಿದರು.