ETV Bharat / state

ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ: ಹಣ ಕೊಡಿಸುವಂತೆ ಹೂಡಿಕೆದಾರರ ಧರಣಿ

author img

By

Published : Sep 16, 2021, 6:25 PM IST

ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡ ಗ್ರಾಹಕರು ಇಂದು ವಿಧಾನಸೌಧದ ಮುಂಭಾಗ ಧರಣಿ ನಡೆಸಿದರು.

nvestors protested in vidhana soudha
ಹಣ ಕೊಡಿಸುವಂತೆ ವಿಧಾಸೌಧದ ಮುಂಭಾಗ ಹೂಡಿಕೆದಾರರ ಧರಣಿ

ಬೆಂಗಳೂರು: ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಶಾಸಕರ ಭವನ ಪ್ರವೇಶದ್ವಾರದ ಮುಂಭಾಗ ಹೂಡಿಕೆದಾರರು ಧರಣಿ ನಡೆಸಿದರು.

ವಿಧಾಸೌಧದ ಮುಂಭಾಗ ಹೂಡಿಕೆದಾರರ ಧರಣಿ

ಪ್ರತಿಭಟನಾನಿರತರು ಪೊಲೀಸ್ ವಶಕ್ಕೆ:

ಹೂಡಿಕೆದಾರರು ಬಿತ್ತಿಪತ್ರ ಹಿಡಿದು ಸಿಐಡಿ ಕಚೇರಿ ರಸ್ತೆಯಿಂದ ವಿಧಾನಸೌಧದವರೆಗೆ ವಿಧಾನಸೌಧ ಚಲೋ ನಡೆಸಿದರು. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಸೆಕ್ಷನ್ 144 ಜಾರಿಯಾಗಿದೆ. ಹೀಗಾಗಿ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ನಾವು ಸರ್ಕಾರಕ್ಕೆ ವಿಧಾನಸೌಧ ಪ್ರವೇಶಿಸಿ ಮನವಿ ಸಲ್ಲಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದಾಗ ಹಿರಿಯ ನಾಗರಿಕರಸಮೇತ ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದರು.

investors protested in vidhana soudha
ಪ್ರತಿಭಟನಾನಿರತರು ಪೊಲೀಸ್ ವಶಕ್ಕೆ

ನೊಂದ ಗ್ರಾಹಕರ ಮನವಿ:

ಅಧಿವೇಶನದಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನಮಗೆ ಕೂಡಲೇ ಹಣ ವಾಪಸ್ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಈ ಹಿಂದೆ ಭೇಟಿ ಮಾಡಿ ಅಧಿವೇಶನದಲ್ಲಿ ಈ ಬಗ್ಗೆ ನಮ್ಮ ಪರ ಧ್ವನಿ ಎತ್ತುವಂತೆ ಮನವಿ ಮಾಡಿದ್ದೇವೆ. ಹೀಗಾಗಿ ಈಗ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುವಂತೆ ಹೂಡಿಕೆದಾರರು ಮನವಿ ಮಾಡಿದರು.

ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ: ಅಂತಿಮ ನಮನ ಸಲ್ಲಿಸಲು ಬೆಂಗಳೂರಿಗೆ ರಾಹುಲ್ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.