ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ತೆರೆಯಲಿದ್ದು, ಭಕ್ತರು ಹಾಗೂ ಆಡಳಿತ ಮಂಡಳಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ.
ಈಗಾಗಲೇ ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಇದೀಗ ಚರ್ಚ್, ಬೌದ್ಧ ದೇವಾಲಯ, ಜೈನ ಮಂದಿರ ಹಾಗೂ ಗುರು ದ್ವಾರಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ, ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರತಿ ಧಾರ್ಮಿಕ ಕೇಂದ್ರಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ಚರ್ಚ್ಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು:
- ಶನಿವಾರದಿಂದ ಸಂಡೇ ಮಾಸ್ ಆಚರಣೆ ಆರಂಭಿಸಬೇಕು. ಜನ ಹೆಚ್ಚಿದ್ದರೆ ವಾರದ ಇತರೆ ದಿನ ಸಂಡೇ ಮಾಸ್ ಆಚರಿಸಬೇಕು.
- ಸಾಮಾಜಿಕ ಅಂತರ ಕಾಯ್ದುಕೊಂಡು ಚರ್ಚ್ ನಲ್ಲಿ ಆಸನ ವ್ಯವಸ್ಥೆ.
- ಬೆಲ್ ಅಥವಾ ಇತರೆ ಪವಿತ್ರ ಸ್ಥಾನಗಳನ್ನು ಮುಟ್ಟುವ ಹಾಗಿಲ್ಲ.
- ಪ್ರಾರ್ಥನಾ ಕಿರುಪುಸ್ತಕ, ಸ್ತುತಿ ಗೀತೆಗಳ ಬಳಕೆ ಸದ್ಯಕ್ಕೆ ಬೇಡ. ಅದರ ಬದಲು ಎಲ್‌ಸಿಡಿ ಪ್ರೊಜೆಕ್ಟರ್ ಬಳಸಿ.
- ಪವಿತ್ರ ಕಮ್ಯುನಿಯನ್ ಗಳನ್ನು ಕೈಯಲ್ಲಿ ಪಡೆಯಬೇಕು. ನಾಲಗೆಯಲ್ಲಿ ನೇರವಾಗಿ ಸ್ವೀಕರಿಸಬಾರದು.
- 'ಸೈನ್ ಆಪ್ ಪೀಸ್' ನ್ನು ತಲೆ ಬಾಗಿ, ಕೈ ಮುಗಿದು ವ್ಯಕ್ತಪಡಿಸಬೇಕು.
- ಯೂಕರಿಸ್ಟ್ ಪ್ರಾರ್ಥನೆಯನ್ನು ಮಾತ್ರ ಆಚರಿಸಲು ಅವಕಾಶ ನೀಡಬೇಕು. ಇತರೆ ಪ್ರಾರ್ಥನೆಗಳಿಗೆ ಅವಕಾಶ ಇಲ್ಲ.
- ಹೆಚ್ಚು ಸಮಯ ಚರ್ಚ್ನಲ್ಲಿ ನಲ್ಲಿ ಕಳೆಯುವ ಹಾಗಿಲ್ಲ.
- ಪ್ರಾರ್ಥನೆಯ ಲೈವ್ ಸ್ಟ್ರೀಮ್ ಮಾಡಬಹುದು.ಸರ್ಕಾರದ ಮಾರ್ಗಸೂಚಿಗಳು
ಗುರುದ್ವಾರದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು:
- ಗುರುದ್ವಾರದಲ್ಲಿ ಸೇರಬಹುದಾದ ಗರಿಷ್ಠ ಸಂಖ್ಯೆಯ ಭಕ್ತರ ವಿವರವನ್ನು ಡಿಸ್‌ಪ್ಲೇ ಮಾಡಬೇಕು. ಗರಿಷ್ಠ ಸಂಖ್ಯೆ ತಲುಪಿದಂತೆ ಗೇಟ್ ಹಾಕಬೇಕು.
- ಎರಡು ಮೀಟರ್ ಅಂತರದಲ್ಲಿ ಕುಳಿತು ಪ್ರಾರ್ಥಿಸಲು ನೆಲದಲ್ಲಿ ಗುರುತು ಹಾಕಬೇಕು.
- ಕನಿಷ್ಠ ಸಮಯದಲ್ಲಿ ಪ್ರಾರ್ಥನೆಯನ್ನು ಮುಗಿಸಬೇಕು.
- ಭಾನುವಾರದ ಪ್ರಾರ್ಥನೆಯನ್ನು ಬೆಳಗ್ಗೆ 8-9 ಗಂಟೆ, 11.30-12.30 ಗಂಟೆ ಮತ್ತು ಸಂಜೆ 6.30-7.30 ಗಂಟೆಗೆ ನಿಗದಿ ಪಡಿಸಬೇಕು.
- ಭಕ್ತರು ಆಲಿಂಗನ, ಹಸ್ತಲಾಘವ ಮಾಡಬಾರದು.ಸರ್ಕಾರದ ಮಾರ್ಗಸೂಚಿಗಳುಸರ್ಕಾರದ ಮಾರ್ಗಸೂಚಿಗಳು
ಜೈನ ಮಂದಿರದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು:
- ಬಸದಿಯಲ್ಲಿ ಸೇರಬಹುದಾದ ಗರಿಷ್ಠ ಸಂಖ್ಯೆಯ ಭಕ್ತರ ವಿವರವನ್ನು ಡಿಸ್‌ಪ್ಲೇ ಮಾಡಬೇಕು. ಗರಿಷ್ಠ ಸಂಖ್ಯೆ ತಲುಪಿದಂತೆ ಗೇಟ್ ಹಾಕಬೇಕು.
- ಕನಿಷ್ಠ ಅವಧಿಯಲ್ಲಿ ಪೂಜೆ ಮುಗಿಸಬೇಕು.
- ಪೂಜೆ ಅವಧಿಯನ್ನು ಬೆಳಗ್ಗೆ 7-9 ಗಂಟೆಗೆ ನಿಗದಿಗೊಳಿಸಬೇಕು.
- ಪೂಜೆಯನ್ನು ಲೈವ್ ಸ್ಟ್ರೀಮ್ ಮಾಡಬಹುದು.ಸರ್ಕಾರದ ಮಾರ್ಗಸೂಚಿಗಳು
ಬೌದ್ಧ ದೇವಾಲಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು:
- ಗೌಥಮ್ ಪ್ರಸಾದಿ ವಿತರಿಸಬಾರದು.
- ಮಂದಿರದ ಗೋಡೆಗೆ ಅಳವಡಿಸಿರುವ ಪೂಜಾ ಚರಕವನ್ನು ಮುಟ್ಟ ಬಾರದು.
- ಕನಿಷ್ಠ ಅವಧಿಯಲ್ಲಿ ಪೂಜೆ ಮುಗಿಸಬೇಕು.
- ಪೂಜೆ ಸಮಯವನ್ನು ಡಿಸ್ ಪ್ಲೇ ಮಾಡಬೇಕು.ಸರ್ಕಾರದ ಮಾರ್ಗಸೂಚಿಗಳು
- ಗರಿಷ್ಠ ಸಂಖ್ಯೆಗಿಂತ ಹೆಚ್ಚಿನ ಭಕ್ತರನ್ನು ಒಳಕ್ಕೆ ಬಿಡಬಾರದು.