ETV Bharat / state

ಅಂತರ್ಜಲ ಮಟ್ಟ ಪಾತಾಳಕ್ಕೆ! 2 ಸಾವಿರ ಅಡಿ ಕೊರೆಸಿದರೂ ಬೊಗಸೆ ನೀರಿಲ್ಲ! - kannada news

ವರ್ಷಪೂರ್ತಿ ಜೀವಜಲ ಒದಗಿಸುತ್ತಿದ್ದ ಕೆರೆಗಳು ಬತ್ತಿಹೋದರೆ ಅವುಗಳನ್ನು ಅವಲಂಬಿಸಿ ಬದುಕುವ ಜನ, ಜಾನುವಾರುಗಳ ಬದುಕು ದುಸ್ತರವಾಗುತ್ತದೆ ಎನ್ನುವುದಕ್ಕೆ ಜೀವಂತ ಉದಾಹರಣೆ ದೇವನಹಳ್ಳಿ.

ಕೆರೆಯನ್ನು ಅವಲಂಬಿಸಿದ್ದ ಪ್ರದೇಶಗಳ ಜನರ ಜೀವನದ ಮೇಲೆ ಬರೆ
author img

By

Published : May 2, 2019, 9:35 PM IST

ಬೆಂಗಳೂರು: ನೀರು ಮನುಷ್ಯ ಸೇರಿದಂತೆ ಭೂಮಿ ಮೇಲಿರುವ ಸಕಲ ಜೀವರಾಶಿಗಳಿಗೆ ಅದೆಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಜಲಮೂಲಗಳಲ್ಲಿ ನೀರು ಮಾಯವಾದರೆ ಜೀವರಾಶಿಗಳ ಪಾಡು ದುಸ್ತರವಾಗುತ್ತವೆ. ಇಂಥದ್ದೇ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳು ಬತ್ತಿ ಹೋಗಿವೆ. ಇಲ್ಲಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಶುದ್ಧ ಕುಡಿಯುವ ನೀರಿಲ್ಲದೇ, ತೊಂದರೆ ಅನುಭವಿಸುತ್ತಿರುವ ಜನರಿಗೆ ಬೇಸಿಗೆಯ ಬಿಸಿ ಹೈರಾಣು ಮಾಡುತ್ತಿದೆ. ದಶಕಗಳ ಹಿಂದೆ ಇಲ್ಲಿನ ಸುತ್ತಮುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬಂದ ನೀರು ನೂರಾರು ಎಕರೆ ಪ್ರದೇಶಗಳ ಈ ಕೆರೆಗಳಲ್ಲಿ ಸಂಗ್ರಹಗೊಂಡು ಜನರ ಜೀವನಾಡಿಯಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ದೇವನಹಳ್ಳಿಯ ದೊಡ್ಡ ಕೆರೆಯ ಒಡಲು ಬರಿದಾಗಿ ಕೆರೆ ಸುತ್ತಲಿನ ಸುಮಾರು ಐವತ್ತು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ.

ಅಚ್ಚರಿ ಅಂದ್ರೆ, 1,500 ರಿಂದ 2,000 ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ಇಲ್ಲಿ ಹನಿ ನೀರು ಸಿಗುವುದು ಡೌಟು. ಹೀಗಾಗಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಕಳೆದ ಹತ್ತು ವರ್ಷಗಳಿಂದೀಚೆಗೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಬೇಸಿಗೆ ಆರಂಭಕ್ಕೂ ಮುನ್ನವೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಕೆರೆಯನ್ನು ಅವಲಂಬಿಸಿದ್ದ ಪ್ರದೇಶಗಳ ಜನರ ಜೀವನದ ಮೇಲೆ ಬರೆ

ಕೆರೆ ಬತ್ತಿದ ಬಳಿಕ ಕೆರೆ ಸುತ್ತಲಿನ ಗ್ರಾಮಗಳ ಒಂದೆರಡು ಕಿ.ಮೀ ದೂರದ ಪ್ರದೇಶದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಿಡಗಳು, ರೈತರ ‌ಬೆಳೆ ಸೇರಿದಂತೆ ದಾಖಲೆಯ ಪ್ರಮಾಣದಲ್ಲಿ ಪರಿಸರದಲ್ಲಿನ ಮರಗಳು ಒಣಗಿ ನಾಶವಾಗುತ್ತಿದೆ. ಕೆರೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ.

ಈ ವರ್ಷದಲ್ಲೇ ದೇವನಹಳ್ಳಿ ತಾಲೂಕಿನಾದ್ಯಾಂತ 150 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು ಶೇಕಡ 10 ರಷ್ಟು ಬೋರ್‌ ವೆಲ್‌ಗಳಲ್ಲಿ ಮಾತ್ರ ನೀರು ಸಿಕ್ಕಿದೆ. ಉಳಿದೆಲ್ಲವೂ ಖಾಲಿ! ನೀರು ಸಿಕ್ಕಿದ್ದು‌ ಕೂಡಾ 1,500 ಅಡಿಗಳಿಗಿಂತ ಕೆಳಗೆ. ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಪೂರೈಸುವ ನಿಯಮಿತ ನೀರು ಜನರಿಗೆ ಆಧಾರವಾಗಿದೆ. ‌ಇನ್ನು ದನಕರುಗಳ ಪಾಡು ಹೇಳತೀರದು. ನೀರಿಲ್ಲದೆ ದನಕರುಗಳನ್ನು ರೈತರು ಮಾರಾಟ ಮಾಡುತ್ತಿದ್ದಾರೆ.

ಈ ನಡುವೆ ರಾಜ್ಯ ಸರಕಾರ ಎತ್ತಿನ ಹೊಳೆ, ಎನ್.ಎಚ್ ವ್ಯಾಲಿ, ಕೆಸಿ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಬಯಲು ಸೀಮೆಗೆ ನೀರು ಹರಿಸುವ ಯೋಜನೆಯ ಕಾಮಗಾರಿ ಆರಂಭಿಸಿತ್ತು. ಈ ಯೋಜನೆಗಳೇನೋ ರೈತರಲ್ಲಿ ಬದುಕುವ ಆಸೆ ಮೂಡಿಸಿದೆ. ಸುತ್ತಲಿನ 20 ಕ್ಕೂ ಹೆಚ್ಚು ಕೆರೆಗಳಿಗೆ 13 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ತುಂಬಿಸುವ ಯೋಜನೆ ಶುರುವಾಗಿ ಹತ್ತು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ, ನೀರೂ ಬಂದಿಲ್ಲ. ಹಾಗಾಗಿ ಆದಷ್ಟು ಬೇಗ ಈ ಯೋಜನೆಗಳ ಕಾಮಗಾರಿ ಮುಗಿದಿದ್ದೇ ಆದಲ್ಲಿ ಸುತ್ತಲಿನ ಭೂಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.

Intro:KN_BNG_01_020519_Lined lake_script_Ambarish_7203301
Slug: ದೇವನಹಳ್ಳಿ ಅಂತರ್ಜಲ ಪಾತಾಳಕ್ಕೆ!
ಎರಡು ಸಾವಿರ ಅಡಿ ಕೊರೆಸಿದರೂ ನೀರಿಲ್ಲ..!

ಬೆಂಗಳೂರು: ನೀರು ಮನುಷ್ಯ ಸೇರಿದಂತೆ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಗೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು.. ನೀರಿನ ಮೂಲಗಳಲ್ಲಿ ನೀರು ಮಾಯವಾದರೆ ಜೀವರಾಶಿಗಳ ಪಾಡು ಏನು..? ಇದೀಗ ಅಂತದ್ದೇ ಪರಿಸ್ಥಿತಿ ಒದಗಿ ಬಂದಿದೆ..

ನೀರನ್ನು ಜನರಿಗೆ ಒದಗಿಸುತ್ತಿದ್ದ ಕೆರೆಗಳು ಬತ್ತಿಹೋದ ನಂತರ ಕೆರೆಯನ್ನು ಅವಲಂಬಿಸಿದ್ದ ಪ್ರದೇಶಗಳ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳು.. ದೇವನಹಳ್ಳಿ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳು ಬತ್ತಿ ಹೋಗಿದ್ದು, ನೀರಿಗಾಗಿ ಅಲ್ಲಿನ ಜನರು ಪರದಾಡುವಂತಾಗಿದೆ.. ಕುಡಿಯಲು ನೀರಿಲ್ಲದೇ, ತೊಂದರೆ ಅನುಭವಿಸುತ್ತಿರುವ ಜನರಿಗೆ ಬೇಸಿಗೆಯ ಬಿಸಿ ಮತ್ತಷ್ಟು ಹೈರಾಣಾಗುವಂತೆ ಮಾಡಿದೆ..

ಬೈಟ್: ಪ್ರಶಾಂತ್ , ಸ್ಥಳೀಯ ನಿವಾಸಿ

ಒಂದು ಎರಡು ದಶಕಗಳ ಹಿಂದೆ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳು, ಸುತ್ತಮುತ್ತಲಿನ ಎತ್ತರದ ಪ್ರದೇಶದಿಂದ ಹರಿದು ಬಂದ ನೀರು ನೂರಾರು ಎಕರೆ ವಿಸ್ತೀರ್ಣದ ಕೆರೆ ಅಂಗಳದಲ್ಲಿ ಸಂಗ್ರಹಗೊಂಡು ಸುತ್ತಲಿನ ಪ್ರದೇಶಗಳ ಜನರ ಜೀವನಾಡಿಯಾಗಿತ್ತು. ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದಾಗಿ ದೇವನಹಳ್ಳಿಯ ದೊಡ್ಡ ಕೆರೆ ಬರಡಾಗಿದುದರಿಂದ ಕೆರೆ ಸುತ್ತಲಿನ ಸುಮಾರು ಐವತ್ತು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಈಗ ಪಾತಾಳಕ್ಕಿಳಿದಿದೆ.. ೧೫೦೦ ರಿಂದ ೨೦೦೦ ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ಹನಿ ನೀರು ಸಿಗುವುದು ಡೌಟ್.. ಹೀಗಾಗಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳೂ ಕಳೆದ ಹತ್ತು ವರ್ಷಗಳಿಂದ ನಿಧನವಾಗಿ ಕಡಿಮೆಯಾಗುತ್ತಿದೆ... ಇದರ ಜೊತೆಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಬೇಸಿಗೆ ಆರಂಭಕ್ಕೂ ಮುನ್ನ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ.

ಬೈಟ್: ಲಲಿತ, ಸ್ಥಳೀಯ ನಿವಾಸಿ

ಒಣಗುತ್ತಿವೆ ರೈತರ ಬೆಳೆಗಳು

ದೇವನಹಳ್ಳಿಯ ಈ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದ ನೀರಿನಿಂದಾಗಿ ಸುತ್ತಲಿನ ಭೂ ಪ್ರದೇಶದಲ್ಲಿದ್ದ ನೂರಾರು ಕೊಳವೆ ಬಾವಿಗಳಲ್ಲಿ ಈ ಹಿಂದೆ ಹೆಚ್ಚು ನೀರು ಇರುತ್ತಿದ್ದವು.. ಆದರೆ ಕೆರೆ ಬತ್ತಿದ ಬಳಿಕ ಕೆರೆ ಸುತ್ತಲಿನ ಗ್ರಾಮಗಳಿರಲಿ ಒಂದೆರಡು ಕಿ.ಮೀ ದೂರದ ಪ್ರದೇಶದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ.. ಕಳೆದ ಎರಡು ಮೂರು ವರ್ಷಗಳಲ್ಲಿ ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಿಡಗಳು, ರೈತರ ‌ಬೆಳೆಗಳು ಸೇರಿದಂತೆ ದಾಖಲೆಯ ಪ್ರಮಾಣದಲ್ಲಿ ಪರಿಸರದಲ್ಲಿನ ಮರಗಳು ಒಣಗಿ ನಾಶವಾಗುತ್ತಿದೆ..

ಕುಡಿಯುವ ನೀರಿಗೂ ಹಾಹಾಕಾರ

ಕೆರೆ ಬತ್ತಿ ಹೋದ ನಂತರ ಕೆರೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಈ ವರ್ಚದಲ್ಲೇ ದೇವನಹಳ್ಳಿ ತಾಲೂಕಿನಾದ್ಯಾಂತ ೧೫೦ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು ಶೇಕಡ ೧೦ ರಷ್ಟು ಕೊಳೆವೆ ಬಾವಿಗಳಲ್ಲಿ ಮಾತ್ರ ನೀರು ಸಿಕ್ಕಿದೆ.. ಉಳಿದೆಲ್ಲಾ ಪೈಲುರ್.. ನೀರು ಸಿಕ್ಕಿದ್ದು‌೧೫೦೦ ಅಡಿಗಳಿಗಿಂತ ಕೆಳಗೆ.. ಕಲವೊಂದು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಪೂರೈಸುವ ನಿಯಮಿತ ನೀರೇ ಜನರಿಗೆ ಆಧಾರವಾಗಿದೆ..‌ಇನ್ನು ದನಕರುಗಳ ಪಾಡು ಕೇಳೋರಿಲ್ಲ.. ಜನರಿಗೆ ಕುಡಿಯಲು ನೀರಿಲ್ಲದಾಗ ದನಕರುಗಳನ್ನು ರೈತರು ಮಾರಾಟ ಮಾಡುತ್ತಿದ್ದಾರೆ..

ಭರವಸೆ ಮೂಡಿಸಿದ ಎತ್ತಿನ ಹೊಳೆ ಯೋಜನೆ

ಈ ನಡುವೆ ರಾಜ್ಯ ಸರಕಾರ ಎತ್ತಿನ ಹೊಳೆ,, ಎನ್ ಎಚ್ ವ್ಯಾಲಿ, ಕೆಸಿ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಬಯಲು ಸೀಮೆಗೆ ನೀರು ಹರಿಸುವ ಯೋಜನೆಯ ಕಾಮಗಾರ ಆರಂಭಗೊಂಡಿತ್ತು.. ಇದರಿಂದ ರೈತರು ಸೇರಿದಂತೆ ಜನರಲ್ಲೂ ಮಂದಹಾಸ ಮೂಡಿತು.. ಸುತ್ತಲಿನ ೨೦ ಕ್ಕು ಹೆಚ್ಚು ಕೆರೆಗಳಿಗೆ ೧೩ ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ತುಂಬಿಸುವ ಯೋಜನೆಯನ್ನು ರಾಜ್ಯ ಸರಕಾರ ಕೈಗೆತ್ತಿಕೊಂಡಿದ್ದು, ಕಳೆದ ಹತ್ತು ವರ್ಷಗಳಾದರೂ ಇನ್ನು ಕಮಗಾರಿ ಮುಗಿದಿಲ್ಲ.. ನೀರು ಬಂದಿಲ್ಲ.. ಕಾಮಗಾರಿ ಜಾರಿಗೊಂಡಿದ್ದು, ಅದು ಆದಷ್ಟು ಬೇಗ ಮುಗಿದಿದ್ದೇ ಆದಲ್ಲಿ ಸುತ್ತಲಿನ ಭೂಪ್ರದೇಶದಲ್ಲಿ ಅಂತರ್ಜಲ ಹೆಚ್ಚಳದ ಮೂಲಕ ಮತ್ತೆ ಕೃಷಿ ಚಟುವಟಿಕೆಗಳು ಮುಂದುವರೆಯಲಿವೆ..
Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.