ETV Bharat / state

ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ.. ಬೆಂಗಳೂರಲ್ಲಿ ತಾತನಿಗೆ 20 ವರ್ಷ ಶಿಕ್ಷೆ ಆದೇಶ - ETV Bharat kannada News

ಮೊಮ್ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ- ಆರೋಪಿ ವೃದ್ಧನಿಗೆ 20 ವರ್ಷ ಸೆರೆವಾಸ ಶಿಕ್ಷೆ - 1 ಲಕ್ಷದ 30 ಸಾವಿರ ದಂಡ

Sexual assault
ಲೈಂಗಿಕ ದೌರ್ಜನ್ಯ
author img

By

Published : Feb 8, 2023, 1:36 PM IST

ಬೆಂಗಳೂರು : ಮೊಮ್ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಆಕೆಯ 70 ವರ್ಷ ವಯಸ್ಸಿನ ತಾತನಿಗೆ 20 ವರ್ಷ ಸೆರೆವಾಸ 1 ಲಕ್ಷದ 30 ಸಾವಿರ ದಂಡ ವಿಧಿಸಿ ಬೆಂಗಳೂರಿನ ಫಾಸ್ಟ್ ಟ್ಯ್ರಾಕ್ ಸೆಷನ್ ಕೋರ್ಟ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಅಶ್ಲೀಲ ವಿಡಿಯೋ ವೀಕ್ಷಿಸುವ ಗೀಳು.. ನಗರದ ಕುಮಾರಸ್ವಾಮಿ ಲೇಔಟ್​ನಲ್ಲಿ ಪೋಷಕರೊಂದಿಗೆ ಬಾಲಕಿ ವಾಸವಿದ್ದಳು. ಆರೋಪಿ ವೃದ್ಧ ಸಹ ಅವರೊಂದಿಗೆ ವಾಸವಿದ್ದರು. ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸುವ ಅಭ್ಯಾಸ ಹೊಂದಿದ್ದ ಆರೋಪಿ, ಬಾಲಕಿಯ ಪೋಷಕರು ಕೆಲಸಕ್ಕೆ ಹೋದಾಗ ಮೊಮ್ಮಗಳನ್ನ ಆಟವಾಡಿಸುವ ನೆಪದಲ್ಲಿ ಆಕೆಯ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರಂತೆ.

ಸತತ ಐದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ.. 3ನೇ ತರಗತಿಯಿಂದ 8ನೇ ತರಗತಿವರೆಗೂ ಮೊಮ್ಮಗಳಿಗೆ ಅಶ್ಲೀಲ ವಿಡಿಯೋ ತೋರಿಸಿ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರಂತೆ. ಮಾತ್ರವಲ್ಲ, ಕೃತ್ಯದ ಕುರಿತು ಯಾರಿಗಾದರೂ ತಿಳಿಸಿದರೆ ಬಾಲಕಿಯ ತಂದೆಯನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಂತೆ.

ಮೂರು ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದ ಪ್ರಕರಣ.. ಸತತ ಐದು ವರ್ಷಗಳ ಕಾಲ ಬಾಲಕಿ ತನ್ನ ಮೇಲೆ ನಡೆದಿದ್ದ ದೌರ್ಜನ್ಯ ಸಹಿಸಿಕೊಂಡಿದ್ದಳು. ಬಳಿಕ 2020ರಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿ ಕೃತ್ಯದ ಕುರಿತು ಕೊನೆಗೂ ತನ್ನ ಪೋಷಕರಿಗೆ ಈ ಕುರಿತು ತಿಳಿಸಿದ್ದಳು.

ಪೊಲೀಸರಿಗೆ ದೂರು ನೀಡಿದ್ದ ಪೋಷಕರು.. ಬಳಿಕ ಆಕೆಯ ಪೋಷಕರು ಕುಮಾರಸ್ವಾಮಿ ಲೇಔಟ್ ಠಾಣೆಗೆ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದೂರುದಾರರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.

ಇದನ್ನೂ ಓದಿ :ಇನ್ಸ್ಟಾಗ್ರಾಮ್​ನಲ್ಲಿ ಉದ್ಯೋಗದ ಆಸೆ ತೋರಿಸಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; ಟೆಕ್ಕಿ ಅರೆಸ್ಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.