ETV Bharat / state

ಗ್ರಾಮ ಪಂಚಾಯತಿ ಚುನಾವಣೆ ಮತಎಣಿಕೆ... ಇದು ಹಾವು-ಏಣಿಯಾಟ!

ಗ್ರಾಮ ಪಂಚಾಯಿತಿ ಚುನಾವಣೆಯು ಹಾವು-ಏಣಿ ಆಟದಂತಿರುತ್ತದೆ. ಅಭ್ಯರ್ಥಿಗಳ ಚುನಾವಣಾ ಫಲಿತಾಂಶ ಊಹಿಸಿದ ರೀತಿಯಲ್ಲಿ ಬರುವುದಿಲ್ಲ. ಮತದಾನ ನಡೆದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಅಚ್ಚರಿ ಕಾದಿರುತ್ತದೆ.

ಗ್ರಾಮ ಪಂಚಾಯತಿ ಚುನಾವಣೆ ಮತಎಣಿಕೆ
ಗ್ರಾಮ ಪಂಚಾಯತಿ ಚುನಾವಣೆ ಮತಎಣಿಕೆ
author img

By

Published : Dec 30, 2020, 1:50 PM IST

ಬೆಂಗಳೂರು : ಹಳ್ಳಿಗಳಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಚಿತ್ರವಾದ ರೀತಿಯಲ್ಲಿ ಅಭ್ಯರ್ಥಿಗಳು ಸೋಲು-ಗೆಲುವು ಕಾಣುವುದುಂಟು. ಕಾರಣ, ಹಳ್ಳಿಗಳಲ್ಲಿ ಕಡಿಮೆ ಮತದಾರರು ಇರೋದು. ಒಂದೇ ಊರಿನಲ್ಲಿ ಮೂರ್ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸುವುದರಿಂದ ಮತಗಳು ಸಹ ಹರಿದು ಹಂಚಿ ಹೋಗುತ್ತವೆ.

ವಿಚಿತ್ರ ಫಲಿತಾಂಶ: ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಚುನಾವಣಾ ಫಲಿತಾಂಶ ಊಹಿಸಿದ ರೀತಿಯಲ್ಲಿ ಬರುವುದಿಲ್ಲ. ಮತದಾನ ನಡೆದು ಚುನಾವಣಾ ಫಲಿತಾಂಶ ಹೊರಬಿದ್ದಾಗ ಅಚ್ಚರಿ ಕಾದಿರುತ್ತದೆ. ಕೆಲವು ಅಭ್ಯರ್ಥಿಗಳು ಗೆಲುವಿನ ಸನಿಹಕ್ಕೆ ಬಂದು ದಡ ಸೇರಲಾಗದೆ ವಾಪಸಾಗಿರುವ ಉದಾಹರಣೆಗಳಿವೆ. ಕೆಲ ಕಡೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಬಹುದು. ಇನ್ನು ಕೆಲ ಕಡೆ ಒಂದು ಅಥವಾ ಎರಡು ಮತಗಳ ಅಂತರದಿಂದ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಉದಾಹರಣೆಗಳು ಇವೆ. ಇನ್ನು ಎರಡೂ ಕಡೆ ಅಭ್ಯರ್ಥಿಗಳಿಗೆ ಸಮನಾದ ಮತಗಳು ಬಂದಾಗ ಮಾತ್ರ ವಿಚಿತ್ರ ಫಲಿತಾಂಶ ಹೊರಬೀಳುತ್ತದೆ. ಅದು ಲಾಟರಿ ಎತ್ತುವ ಮೂಲಕ ಗೆಲುವಿನ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಎರಡೂ ಕಡೆಯ ಅಭ್ಯರ್ಥಿಗಳ ಮನಸ್ಸಿನ ತುಡಿತ, ಆತಂಕ ಊಹಿಸಲು ಸಾಧ್ಯವಿರುವುದಿಲ್ಲ. ಇದರಲ್ಲಿ ಗೆದ್ದು ಸೋತವರೆಷ್ಟೋ, ಸೋತು ಗೆದ್ದವರೂ ಅಷ್ಟೆ. ಬಿಂಬ ಪ್ರತಿಬಿಂಬಗಳಂತೆ ತಿರುಗುಮುರುಗು ಆಗುತ್ತದೆ.

ಮತ ಎಣಿಕೆ ಹೇಗೆ? :

ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಯಂತ್ರ ಬಳಕೆ ಮಾಡಿರೋದು. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿದೆ. ಆಯಾ ತಾಲೂಕುಗಳಲ್ಲಿ ನಿಗದಿಪಡಿಸಿರುವ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ನಡೆಯುತ್ತಿದೆ. ಮತಪತ್ರಗಳ ಮೂಲಕ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿವರೆಗೂ ಮತ ಎಣಿಕೆ ನಡೆಯುವ ಸಾಧ್ಯತೆಗಳಿವೆ. ಪ್ರತಿ ಪಂಚಾಯಿತಿಯ ಒಟ್ಟು ಸ್ಥಾನಗಳನ್ನು ವಿಭಜಿಸಿ 3 ಕ್ಷೇತ್ರಗಳಿಗೆ ಒಂದು ಟೇಬಲ್‌ನಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಟೇಬಲ್‌ಗೆ ಇಬ್ಬರು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಜಿಲ್ಲಾಧಿಕಾರಿಯವರು ಮೇಲುಸ್ತುವಾರಿ ವಹಿಸಿಕೊಂಡಿರುತ್ತಾರೆ. ಮತ ಎಣಿಕೆ ಮತ್ತು ಫ‌ಲಿತಾಂಶ ಘೋಷಣೆಯ ನಿಯಮಗಳ ಪ್ರಕಾರ ಚುನಾವಣೆ ನಡೆದ ಎಲ್ಲಾ ಸ್ಥಾನಗಳ ಫ‌ಲಿತಾಂಶವನ್ನು ಅಂತಿಮಗೊಳಿಸಿ ಅದನ್ನು ಆಯೋಗಕ್ಕೆ ಕಳಿಸಿಕೊಡಲಾಗುತ್ತದೆ. ಇದು ಪಕ್ಷಾತೀತ ಚುನಾವಣೆ ಆಗಿದ್ದರೂ ಆಯಾ ಪಕ್ಷಗಳು ಅಭ್ಯರ್ಥಿಗಳನ್ನು ಬೆಂಬಲಿಸಿ ಗ್ರಾಮ ಮಟ್ಟದಲ್ಲಿ ತಮ್ಮ ಬೇರು ಬಿಗಿಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಈ ಚುನಾವಣೆ ಫಲಿತಾಂಶ ಅತ್ಯಂತ ಮಹತ್ವದ್ದು. ಜೊತೆಗೆ ಮುಂದಿನ ವಿಧಾನಸಭೆ ಚುನಾವಣಾ ದಿಕ್ಸೂಚಿಯಾಗಲಿದೆ.

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಿದೆ. 2.22, 814 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈಗಾಗಲೇ 8074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.