ETV Bharat / state

'ಬೆಂಗಳೂರು ಒನ್' ಮಾದರಿಯಲ್ಲಿ 'ಗ್ರಾಮ ಒನ್' ಸೇವೆ ಜಾರಿಗೆ ತರಲು ಮುಂದಾದ ಸರ್ಕಾರ

ಗ್ರಾಮೀಣ ಪ್ರದೇಶಗಳಲ್ಲಿ 'ಗ್ರಾಮ ಒನ್ ಕೇಂದ್ರ' ಸ್ಥಾಪಿಸುವ ಮಹತ್ವದ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ತಮ್ಮ ಆಯವ್ಯಯದಲ್ಲಿ ಘೋಷಿಸಿದ್ದರು.‌ ಇದೀಗ ಸರ್ಕಾರ 'ಬೆಂಗಳೂರು ಒನ್' ಮಾದರಿಯಲ್ಲೇ 'ಗ್ರಾಮ ಒನ್' ಸೇವೆಗೆ ಚಾಲನೆ ನೀಡಲು ಮುಂದಾಗಿದೆ.

gram-one-scheme-like-bengaluru-one-to-launch
'ಬೆಂಗಳೂರು ಒನ್' ಮಾದರಿಯಲ್ಲಿ 'ಗ್ರಾಮ ಒನ್' ಸೇವೆ ಜಾರಿಗೆ ತರಲು ಮುಂದಾದ ಸರ್ಕಾರ
author img

By

Published : Nov 8, 2020, 7:38 PM IST

ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೌಲಭ್ಯ ಮತ್ತು ಇತರೆ ಸೇವೆ ಒದಗಿಸುವ ಉದ್ದೇಶದೊಂದಿಗೆ 'ಬೆಂಗಳೂರು ಒನ್' ಮಾದರಿಯಲ್ಲೇ 'ಗ್ರಾಮ ಒನ್' ಸೇವೆಗೆ ಚಾಲನೆ ನೀಡಲು ಸರ್ಕಾರ ಇದೀಗ ನಿರ್ಧರಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ 'ಗ್ರಾಮ ಒನ್ ಕೇಂದ್ರ' ಸ್ಥಾಪಿಸುವ ಮಹತ್ವದ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ತಮ್ಮ ಆಯವ್ಯಯದಲ್ಲಿ ಘೋಷಿಸಿದ್ದರು.‌ ಇದೀಗ ಸರ್ಕಾರ 'ಗ್ರಾಮ ಒನ್' ಸೇವೆಗೆ ಚಾಲನೆ ನೀಡಲು ಮುಂದಾಗಿದೆ. ಮಾರ್ಚ್ ನಲ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ಸಿಎಂ 'ಗ್ರಾಮ ಒನ್' ಯೋಜನೆ ಪ್ರಾರಂಭಿಸುವುದಾಗಿ ಪ್ರಕಟಿಸಿದ್ದರು. ಕರ್ನಾಟಕ ಒನ್, ಬೆಂಗಳೂರು ಒನ್ ಕೇವಲ ನಗರ ಪ್ರದೇಶಗಳ ಜನರಿಗೆ ಮಾತ್ರ ಕೇಂದ್ರೀಕೃತವಾಗಿದ್ದು, ನಗರ ನಿವಾಸಿಗಳಿಗೆ ಮಾತ್ರ ಸಮಗ್ರ ನಾಗರಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಅದೇ ಮಾದರಿ ಗ್ರಾಮೀಣ ಪ್ರದೇಶದ ಜನರಿಗೂ ಸಮಗ್ರ ನಾಗರಿಕ ಸೇವೆಗಳನ್ನು ಒದಗಿಸಲು 'ಗ್ರಾಮ‌ ಒನ್' ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಇದೀಗ 'ಗ್ರಾಮ ಒನ್' ಯೋಜನೆ ಕಾರ್ಯರೂಪಕ್ಕೆ ಬರಲು ಕಾಲ ಕೂಡಿ ಬಂದಿದೆ. ಇ-ಆಡಳಿತ ಇಲಾಖೆ ಅಧಿಕಾರಿಗಳು ಈ ಯೋಜನೆಗೆ ಚಾಲನೆ ನೀಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ಆರ್ಥಿಕ ಸಂಕಷ್ಟ, ಕೊರೊನಾ ಹಿನ್ನೆಲೆ 'ಗ್ರಾಮ ಒನ್' ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರ 'ಗ್ರಾಮ ಒನ್' ಸೇವೆ ಗೆ ಚಾಲನೆ ನೀಡಲು ಮುಂದಾಗಿದೆ.

ಏನಿದು 'ಗ್ರಾಮ ಒನ್' ಸೇವೆ:

ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲೇ ಗ್ರಾಮೀಣ ಭಾಗದ ಜನರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಸೇವೆಗಳನ್ನು ಒದಗಿಸುವುದು 'ಗ್ರಾಮ‌ ಒನ್' ಸೇವಾ ಯೋಜನೆಯಾಗಿದೆ.

ಖಾಸಗಿ ಸಹಭಾಗಿತ್ವದಲ್ಲಿ ಪ್ರತಿ ಗ್ರಾಮದಲ್ಲಿ 'ಗ್ರಾಮ ಒನ್' ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. 5,000 ಜನಸಂಖ್ಯೆ ಇರುವ ಪ್ರತಿ ಗ್ರಾಮಗಳಲ್ಲಿ 'ಗ್ರಾಮ ಒನ್' ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಕೇಂದ್ರಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ವಿವಿಧ ಕೃಷಿ ಮಾರುಕಟ್ಟೆ, ಮಂಡಿ ದರಗಳನ್ನು ಪ್ರಚಾರಪಡಿಸುವುದಲ್ಲದೆ, ಸಕಾಲ ಹಾಗೂ ಸೇವಾಸಿಂಧು ಯೋಜನೆಗಳು, ಸಾರ್ವಜನಿಕ ಕುಂದು ಕೊರತೆಗಳ ಸ್ವೀಕಾರ, ಸೇವಾ ಸಿಂಧು ಯೋಜನೆಗಳು, ಕಂದಾಯ ಇಲಾಖೆ ಸೇವೆಗಳು, ಮಾಹಿತಿ ಹಕ್ಕು ಕಾಯ್ದೆಯಡಿ ಆನ್‍ಲೈನ್ ಪೋರ್ಟಲ್ ನಲ್ಲಿ ಅರ್ಜಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು.

'ಬೆಂಗಳೂರು ಒನ್' ಕೇಂದ್ರಗಳಂತೆಯೇ ಎಲ್ಲಾ ಸರ್ಕಾರಿ ಸೇವೆಗಳನ್ನು 'ಗ್ರಾಮ ಒನ್' ಮೂಲಕ ಗ್ರಾಮೀಣ ಭಾಗದ ಜನರು ಪಡೆಯಬಹುದಾಗಿದೆ. ಆ ಮೂಲಕ ಗ್ರಾಮೀಣ ಜನರು ವಿವಿಧ ಸರ್ಕಾರಿ ಕೆಲಸ, ಸೇವೆಗಳಿಗಾಗಿ ವಿವಿಧ ಕಚೇರಿಗಳಿಗೆ ಸುತ್ತಾಡುವುದಕ್ಕೆ ಬ್ರೇಕ್ ಬೀಳಲಿದೆ. 'ಗ್ರಾಮ ಒನ್' ಕೇಂದ್ರದ ಮೂಲಕ ಒಂದೇ ಸೂರಿನಡಿ ಸರ್ಕಾರದ ವಿವಿಧ ಯೋಜನೆ, ಸೇವೆಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ.

ದಾವಣಗೆರೆಯಲ್ಲಿ ಪ್ರಾಯೋಗಿಕ 'ಗ್ರಾಮ ಒನ್' ಕೇಂದ್ರ:

ಇ-ಆಡಳಿತ ಇಲಾಖೆ ಈಗಾಗಲೇ ದಾವಣಗೆರೆಯ ಜಿಲ್ಲೆಯ ಗ್ರಾಮಗಳಲ್ಲಿ 'ಗ್ರಾಮ ಒನ್' ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸೇವಾ ಸಿಂಧು ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಪ್ರಾಯೋಗಿಕವಾಗಿ 'ಗ್ರಾಮ ಒನ್' ಸೇವೆಗೆ ಚಾಲನೆ ನೀಡಲಾಗುತ್ತದೆ. ಈ ತಿಂಗಳಾಂತ್ಯಕ್ಕೆ ಸಿಎಂ ಕೈಯ್ಯಲ್ಲಿ 'ಗ್ರಾಮ ಒನ್' ಯೋಜನೆಗೆ ಚಾಲನೆ ನೀಡಲು ಯೋಜಿಸಲಾಗಿದೆ. ಈಗಾಗಲೇ ಎಲ್ಲಾ ತಯಾರಿಗಳನ್ನು ನಡೆಸಲಾಗಿದ್ದು, ಈ ಯೋಜನೆಗಾಗಿ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ 'ಗ್ರಾಮ ಒನ್' ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಹಂತ ಹಂತವಾಗಿ 5,000 ಜನಸಂಖ್ಯೆ ಹೊಂದಿರುವ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ 'ಗ್ರಾಮ ಒನ್' ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ ಗ್ರಾಮೀಣ ಪ್ರದೇಶದ ಜನರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ಇತರೆ ಸೇವೆಗಳನ್ನು ಒಂದೇ ಸೂರಿನಡಿ ಕಲ್ಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.