ETV Bharat / state

ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಮುಕ್ತಾಯ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ - ಪದವೀಧರ ಕ್ಷೇತ್ರದ ಚುನಾವಣೆ

ರಾಜ್ಯದ ಎರಡು ಶಿಕ್ಷಕರ ಮತ್ತು ಎರಡು ಪದವೀಧರರ ಕ್ಷೇತ್ರಗಳಿಗೆ ಇಂದು‌ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ಮತದಾನ ನಡೆಯಿತು. ಮತಗಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸವುದರೊಂದಿಗೆ ಮತದಾನ ಪ್ರಕ್ರಿಯೆ ನಡೆದಿದೆ.

graduate-and-teachers-constituency-elections-voting-ended
ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಮುಕ್ತಾಯ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ
author img

By

Published : Jun 13, 2022, 9:32 PM IST

ಬೆಂಗಳೂರು: ರಾಜ್ಯದ ಎರಡು ಶಿಕ್ಷಕರ ಕ್ಷೇತ್ರ ಮತ್ತು ಎರಡು ಪದವೀಧರರ ಕ್ಷೇತ್ರದ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರ,ವಾಯುವ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ.

ರಾಜ್ಯದ ಎರಡು ಶಿಕ್ಷಕರ ಮತ್ತು ಎರಡು ಪದವೀಧರರ ಕ್ಷೇತ್ರಗಳಿಗೆ ಇಂದು‌ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ಮತದಾನ ನಡೆಯಿತು. ಮತಗಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸವುದರೊಂದಿಗೆ ಮತದಾನ ಪ್ರಕ್ರಿಯೆ ನಡೆದಿದೆ. ಬೆಳಗ್ಗೆ ಚುರುಕಿನಿಂದ ಆರಂಭಗೊಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನ ಮಂದಗತಿಯಲ್ಲಿ ಸಾಗಿ, ಬಳಿಕ ಸಂಜೆ ಚುರುಕು ಪಡೆದಿತ್ತು.

ಮತದಾನದ ಪ್ರಮಾಣ:

  • ವಾಯವ್ಯ ಪದವೀಧರರ ಕ್ಷೇತ್ರ: ಶೇ. 59
  • ದಕ್ಷಿಣ ಪದವೀಧರರ ಕ್ಷೇತ್ರ:ಶೇ. 70
  • ವಾಯವ್ಯ ಶಿಕ್ಷಕರ ಕ್ಷೇತ್ರ: ಶೇ. 80
  • ಪಶ್ಚಿಮ ಶಿಕ್ಷಕರ ಕ್ಷೇತ್ರ: ಶೇ. 84

ಸದ್ಯ ಸಂಜೆ 5 ಗಂಟೆವರೆಗೂ ಕ್ಷೇತ್ರಗಳಿಂದ ಬಂದ ಅಂಕಿ, ಅಂಶಗಳ ಆಧಾರದಲ್ಲಿ ಮತದಾನದ ಶೇಕಡಾವಾರು ವಿವರವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ನಾಳೆ ನಿಖರವಾದ ಅಂಕಿ ಅಂಶವನ್ನು ಆಯೋಗ ಬಿಡುಗಡೆಗೊಳಿಸಲಿದೆ.

ಇದನ್ನೂ ಓದಿ: ವಿಶೇಷಚೇತನರಿಗೆ ಬಿಎಂಟಿಸಿಯಿಂದ ಶೀಘ್ರದಲ್ಲೇ ವಿಶೇಷ ಬಸ್ ಸೇವೆ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.