ಬೆಂಗಳೂರು: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಆಡಳಿತದಲ್ಲಿ ಮೇಜರ್ ಸರ್ಜರಿ ಜೊತೆಗೆ ಅಧಿಕಾರಿಗಳಿಗೆ ಸಿಹಿ ಸುದ್ದಿ ನೀಡಿದೆ. 42 ಐಎಎಸ್ ಹಾಗೂ 27 ಐಎಫ್ಎಸ್ ಅಧಿಕಾರಿಗಳನ್ನು ಪದೋನ್ನತಿ ಮತ್ತು ವರ್ಗಾವಣೆ ಮಾಡಿ ಹೊಸ ವರ್ಷದ ಉಡಿಗೊರೆ ನೀಡಿದೆ. ಕೆಲವರನ್ನು ವರ್ಗಾವಣೆ ಮಾಡಿದ್ದರೆ, ಬಹುತೇಕರಿಗೆ ಪದೋನ್ನತಿ ಮಾಡಿ ಆದೇಶಿಸಿದೆ. ಸಾಮಾನ್ಯವಾಗಿ ಹೊಸ ವರ್ಷದ ವೇಳೆ ಅಧಿಕಾರಿಗಳಿಗೆ ಪದೋನ್ನತಿ ಭಾಗ್ಯ ಲಭಿಸುತ್ತೆ. ಈ ಬಾರಿಯೂ ರಾಜ್ಯ ಸರ್ಕಾರ ಹಲವು ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ.
ಈ ಕೆಳಕಂಡ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ:
ತುಷಾರ್ ಗಿರಿನಾಥ್, ಉಮಾಶಂಕರ್ ಎಸ್.ಆರ್, ರಿತ್ವಿಕ್ ರಾಜನಂಪಾಂಡೆ, ಮಣಿವಣ್ಣನ್ ಪಿ, ನವೀನ್ ರಾಜ್, ಮೌನಿಶ್ ಮೌದ್ಗಲ್, ಡಾ.ತ್ರಿಲೋಕಚಂದ್ರ, ಡಾ. ಮೋಹನ್ ರಾಜ್, ರಿಚರ್ಡ್ ವಿನ್ಸೆಂಟ್ ಡಿಸೋಜ, ಯಶವಂತ್ ವಿ. ಗುರುಕರ್, ನಕುಲ್.ಎಸ್.ಎಸ್, ವಿದ್ಯಾ.ಪಿ.ಐ, ಕನಗವಲ್ಲಿ, ಶಿವಕುಮಾರ್.ಕೆ.ಬಿ, ಡಾ.ರಾಮ್ ಪ್ರಸಾದ್ ಮನೋಹರ್, ವಾಸಿರೆಡ್ಡಿ ವಿಜಯ ಜೋತ್ಸ್ನಾ, ಮಂಜುಶ್ರೀ ಎನ್,
ವೆಂಕಟೇಶ್ ಕುಮಾರ್.ಆರ್, ವಿನೋದ್ ಪ್ರಿಯ, ಕೃಷ್ಣ ಬಜ್ಪೈ, ಡಾ.ರಾಜೇಂದ್ರ.ಕೆ, ರಮೇಶ್ ಬಿ.ಎಸ್, ಮಂಜುನಾಥ್ ಜೆ, ಗಿರೀಶ್ .ಆರ್, ಡಾ.ಮಮತ.ಬಿ.ಆರ್, ಹಿರೇಮಠ, ದಿವ್ಯಾ ಪ್ರಭು, ಶುಭ ಕಲ್ಯಾಣ್, ಶಿಲ್ಪಾ ನಾಗ್, ನಲ್ಮಿ ಅತುಲ್, ಪ್ರಶಾಂತ್ ಕುಮಾರ್ ಮಿಶ್ರ, ಗುರುದತ್ತ ಹೆಗಡೆ, ರಘುನಂದನ್ ಮೂರ್ತಿ, ಗಂಗಾಧರಸ್ವಾಮಿ, ವಿದ್ಯಾಕುಮಾರಿ, ವರ್ಣಿತ್ ನೇಗಿ, ಡಾ. ಆಕಾಶ್, ಪ್ರತೀಕ್ ಬಾಯಲ್, ಅಶ್ವಿಜ.ಬಿ.ವಿ,
ಮೋನಾ ರೋತ್, ಆನಂದ್ ಪ್ರಕಾಶ್ ಮೀನಾ, ರಾಹುಲ್ ಶರಣಪ್ಪ ಸಂಕನೂರು ಸೇರಿ ಒಟ್ಟು 42 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಕೆಲವರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಐಎಫ್ಎಸ್ ಅಧಿಕಾರಿಗಳು:
ಮೀನಾಕ್ಷಿ ನೇಗಿ, ಸುಭಾಶ್ ಕೆ. ಮಾಲ್ಕೆಡೆ, ಜಗತ್ ರಾಮ್, ಬಿಷ್ವಜಿತ್ ಮಿಶ್ರಾ, ವಿಪಿನ್ ಸಿಂಗ್, ವನಶ್ರೀ ವಿಪಿನ್ ಸಿಂಗ್, ಸುನಿಲ್ ಪವಾರ್, ಹನುಮಂತಪ್ಪ, ಕಮಲಾ, ಕರಿಕಲನ್, ದೀಪಿಕಾ ಬಾಜಪೈ, ರವಿಶಂಕರ್, ಸಿವಶಂಕರ್, ಆಂಥೊನಿ ಮರಿಯಪ್ಪ, ಸಿವರಾಮ್ ಬಾಬು, ಪ್ರಶಾಂತ್ ಶಂಕಿನ್ಮಟ್, ಶಂಕರ್ ಕಳ್ಳೊಲಿಕರ್, ಕಾವ್ಯ ಚತುರ್ವೇದಿ ಸೇರಿ ಒಟ್ಟು 27 ಅಧಿಕಾರಿಗಳಿಗೆ ಪದೋನ್ನತಿ ಮಾಡಿ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ಈಗಷ್ಟೇ ಮದುವೆಯಾಗಿದೆ, ಆಗಲೇ ಮಕ್ಕಳಾಗಿಲ್ಲ ಅಂದ್ರೆ ಹೇಗೆ ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ