ETV Bharat / state

ಸಿದ್ಧಾರ್ಥ ಕಾಲೇಜಿಗೆ ನೋಟಿಸ್ ನೀಡಿದ ಸರ್ಕಾರದ ಕ್ರಮಕ್ಕೆ ಜಿ. ಪರಮೇಶ್ವರ್ ಅಸಮಾಧಾನ

ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ -19 ತಪಾಸಣೆಗಾಗಿ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ. ಕೇವಲ 2 ಖಾಸಗಿ ಕಾಲೇಜುಗಳಿಗೆ ಮಾತ್ರ ನೋಟಿಸ್ ಕಳುಹಿಸುವ ಕ್ರಮವನ್ನು ನಾನು ಪ್ರಶ್ನಿಸುತ್ತೇನೆ ಎಂದು ಪರಮೇಶ್ವರ್​ ಟ್ವೀಟ್​ ಮಾಡಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
author img

By

Published : Jul 15, 2020, 11:18 PM IST

ಬೆಂಗಳೂರು: ಕೋವಿಡ್​ ಟೆಸ್ಟಿಂಗ್​ ಲ್ಯಾಬ್​ ಕುರಿತಂತೆ ರಾಜ್ಯ ಸರ್ಕಾರ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ನೀಡಿರುವ ನೋಟಿಸ್​​ಗೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಅವರು, ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ -19 ತಪಾಸಣೆಗಾಗಿ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂಬುದನ್ನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ. ಜೂನ್ 16 ರಂದು ಆದೇಶ ಸ್ವೀಕರಿಸಿದ ನಂತರ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ಲ್ಯಾಬ್ ಸಿದ್ಧವಾಗಲಿದೆ. ಇಲ್ಲಿನ ಎರಡೂ ಆಸ್ಪತ್ರೆಗಳಲ್ಲಿ ತಲಾ 100 ಹಾಸಿಗೆಗಳನ್ನು ಹೊಂದಿರುವ ಕೋವಿಡ್ ಕೇರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

  • However, I question the move to send notice to only 2 private colleges. Why not the rest? Request the Govt to not play petty political tricks amidst the pandemic.

    We are complying with all orders. And will continue to serve the public as we always have.

    — Dr. G Parameshwara (@DrParameshwara) July 15, 2020 " class="align-text-top noRightClick twitterSection" data=" ">

ಆದರೆ, ಕೇವಲ 2 ಖಾಸಗಿ ಕಾಲೇಜುಗಳಿಗೆ ಮಾತ್ರ ನೋಟಿಸ್ ಕಳುಹಿಸುವ ಕ್ರಮವನ್ನು ನಾನು ಪ್ರಶ್ನಿಸುತ್ತೇನೆ. ಉಳಿದವರಿಗೆ ಏಕಿಲ್ಲ? ಸಾಂಕ್ರಾಮಿಕ ರೋಗದ ನಡುವೆ ಸಣ್ಣ ರಾಜಕೀಯ ತಂತ್ರಗಳನ್ನು ಆಡಬೇಡಿ ಎಂದು ಸರ್ಕಾರವನ್ನು ವಿನಂತಿಸುತ್ತೇನೆ. ನಾವು ಎಲ್ಲಾ ಆದೇಶಗಳನ್ನು ಅನುಸರಿಸುತ್ತಿದ್ದೇವೆ. ಸಾರ್ವಜನಿಕರ ಸೇವೆಯನ್ನು ಎಂದಿನಂತೆ ನಿರಂತರವಾಗಿ ಮುಂದುವರಿಸುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.