ETV Bharat / state

KSFC ಸಾಲ ಮರುಪಾವತಿಗಾಗಿ ಒನ್ ಟೈಮ್ ಸೆಟ್ಲ್‌ಮೆಂಟ್‌ ಅವಕಾಶ ‌ನೀಡಲು ಸರ್ಕಾರ ನಿರ್ಧಾರ

ಕೆಎಸ್ಎಫ್​​ಸಿಯಿಂದ ಸಾವಿರಾರು ಉದ್ದಿಮೆದಾರರು ಸಾಲ‌ ಪಡೆದಿದ್ದಾರೆ. ಆದರೆ ಸಾಲ ಪಡೆದ ಹಲವು ಉದ್ದಿಮೆದಾರರು ಅನೇಕ ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಉದ್ದಿಮೆದಾರರಿಗೆ ಒನ್ ಟೈಂ ಸೆಟ್ಲ್ಮೆಂಟ್​ಗೆ ಅವಕಾಶ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

KSFC
ಕೆಎಸ್ಎಫ್​​ಸಿ
author img

By

Published : Jul 15, 2021, 7:13 PM IST

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC)ದಿಂದ ಸಾಲ ಪಡೆದ ಉದ್ದಿಮೆದಾರರಿಗೆ ಸಾಲ‌ ಮರುಪಾವತಿಗಾಗಿ ಒನ್ ಟೈಮ್ ಸೆಟ್ಲ್ಮೆಂಟ್​ಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಕೆಎಸ್ಎಫ್​​ಸಿಯಿಂದ ಸಾವಿರಾರು ಉದ್ದಿಮೆದಾರರು ಸಾಲ‌ ಪಡೆದಿದ್ದಾರೆ. ಆದರೆ ಸಾಲ ಪಡೆದ ಹಲವು ಉದ್ದಿಮೆದಾರರು ಅನೇಕ ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಸಂಬಂಧ ಸರ್ಕಾರ ಸಾಲ ಪಡೆದ ಉದ್ದಿಮೆದಾರರಿಗೆ ಒನ್ ಟೈಂ ಸೆಟ್ಲ್ಮೆಂಟ್​ಗೆ ಅವಕಾಶ ನೀಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

2015ರಲ್ಲಿ ಸಾಲ ಮರುಪಾವತಿಗಾಗಿ ಕೆಎಸ್ಎಫ್​​​ಸಿ ಒನ್ ಟೈಂ ಸೆಟ್ಲ್ಮೆಂಟ್ ಯೋಜನೆಯನ್ನು ಜಾರಿಗೆ ತಂದಿತ್ತು.‌ ಈ ವೇಳೆ ಸುಮಾರು 10,000 ಉದ್ದಿಮೆದಾರರು ಇದರ ಲಾಭ ಪಡೆದಿದ್ದರು. ಇದೀಗ ಮತ್ತೆ ಅದೇ ಯೋಜನೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸುಮಾರು 2,500 ಉದ್ದಿಮೆದಾರರು ಲಾಭ ಪಡೆಯಲಿದ್ದಾರೆ. ಸಾಲ ಪಡೆದ ಉದ್ದಿಮೆದಾರರು ನಾನಾ ಸಮಸ್ಯೆಗಳನ್ನು ಹೇಳುವ ಮೂಲಕ ಸಾಲ‌ ಮರುಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ಕೈ ಸಾರಥಿ: ಮತ್ತೆ ಮೊಳಗಿತು 'ಭಾವಿ ಸಿಎಂ' ಘೋಷಣೆ

ಹಲವು ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಒನ್ ಟೈಂ ಸೆಟ್ಲ್ಮೆಂಟ್​ ಮೂಲಕ ಸಾಲ‌ ಮರುಪಾವತಿಗೆ ಅವಕಾಶ ನೀಡಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಾಧ್ಯವಾದಷ್ಟು ಸಂಪನ್ಮೂಲ ಸಂಗ್ರಹಕ್ಕೆ ನಿರ್ಧರಿಸಲಾಗಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.