ETV Bharat / state

ಕೊರೊನಾ ವಾರಿಯರ್ಸ್‌ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಕ್ಷಾ ಕವಚ ನೀಡಲು ಮುಂದಾದ ಸರ್ಕಾರ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಕೊರೊನಾದ ವಿರುದ್ಧ ಹೋರಾಟ ನಡೆಸುತ್ತಿರುವ ಪೊಲೀಸ್​ ಸಿಬ್ಬಂದಿ, ವೈದ್ಯಕೀಯ ಇಲಾಖೆ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ನೀಡುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊರೊನಾ ವಾರಿಯರ್ಸ್​ಗೆ ನೀಡಲಾಗುತ್ತಿದೆ ಈಟಿವಿ ಭಾರತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ತಿಳಿಸಿದ್ದಾರೆ.

Sudhakar
ಡಾ.ಸುಧಾಕರ್
author img

By

Published : Apr 20, 2020, 4:16 PM IST

ಬೆಂಗಳೂರು: ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್(ಹೆಚ್​ಸಿಕ್ಯು) ಮಾತ್ರೆಗಳ ರಕ್ಷಾ ಕವಚ ನೀಡುವ ಮೂಲಕ ಕೊರೊನಾ ವಾರಿಯರ್ಸ್‌ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

ಹೊರ ರಾಜ್ಯ, ಹೊರ ದೇಶಗಳಲ್ಲಿ ವೈದ್ಯರಿಗೆ ಸೋಂಕು ತಗುಲಿರುವ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ರಾಜ್ಯದಲ್ಲಿಯೂ ವೈದ್ಯರಿಗೆ ಸೋಂಕು ತಗುಲಿರುವ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕೊರೊನಾ‌ ಚಿಕಿತ್ಸಕರು, ಆರೈಕೆ ಮಾಡುವವರನ್ನು ಇದರ ಸುಳಿಯಿಂದ ಪಾರು ಮಾಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಅಸ್ತ್ರದ ಮೊರೆ ಹೋಗಿದೆ.

ಕೊರೊನಾ ಸೋಂಕಿತರನ್ನು ತಪಾಸಣೆ ನಡೆಸುವ, ಚಿಕಿತ್ಸೆ ನೀಡುವ ವೈದ್ಯರು, ಆರೈಕೆ ಮಾಡುವ ದಾದಿಯರು, ಪೊಲೀಸರಿಗೆ ಕೊರೊನಾ ಸೋಂಕು ತಗುಲುವ ಆತಂಕ ಎದುರಾಗಿದೆ. ಇವರನ್ನೆಲ್ಲ ರಕ್ಷಿಸಲು ಕೊರೊನಾ ರೋಗಿಗಳಿಗೆ ನೀಡುವ ಪ್ರಮುಖ ಔಷಧವನ್ನೇ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿಗೆ ನೀಡಲಾಗುತ್ತಿದೆ. ಆ ಮೂಲಕ ಕೊರೊನಾ ಸೋಂಕು ಹರಡದಂತೆ ತಡೆಯುವ ಪ್ರಯತ್ನ ನಡೆದಿದೆ.

ಇಡೀ ಜಗತ್ತು ಇಂದು ಕೊರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೆಚ್ಚಿಕೊಂಡಿದ್ದು, ಆ ಔಷಧಕ್ಕಾಗಿ ಅನೇಕ ದೇಶಗಳು ಭಾರತದತ್ತ ನೋಡುತ್ತಿವೆ. ಕೊರೊನಾ ಚಿಕಿತ್ಸೆಗೆ ಮಲೇರಿಯಾ ಬಾರದಂತೆ ತಡೆಯಲು ಬಳಸುವ ಮಾತ್ರೆಗಳನ್ನೇ ನೀಡುತ್ತಿದ್ದು, ವೈರಾಣು ವಿರುದ್ಧ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿಯೂ ಇದೇ ಔಷಧ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕ ಹೊಂದಿರುವ ಹಾಗೂ ಮನೆಯಲ್ಲಿರುವ ವ್ಯಕ್ತಿಗಳಿಗೆ ಮಾತ್ರೆಗಳನ್ನು ಐಸಿಎಂಆರ್ ಮಾರ್ಗಸೂಚಿಯ ಪ್ರಕಾರ ನೀಡಲಾಗುತ್ತಿದೆ.

ಈ ಕುರಿತು ಈಟಿವಿ ಭಾರತ್​​ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಆರೋಗ್ಯ ಇಲಾಖೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ವರ್ಗದವರು ಮತ್ತು ಮೊದಲ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರು ಈ ರೀತಿ ಎಲ್ಲರಿಗೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಹೈಡ್ರೋಕ್ಲೋರೋಕ್ವಿನ್​ ಮಾತ್ರೆಗಳನ್ನು ಏಳು ವಾರಗಳ ಕಾಲ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.

ಕೊರೊನಾಗೆ ಸ್ಪಷ್ಟವಾದ ಚಿಕಿತ್ಸಾ ವಿಧಾನ ಇಲ್ಲ. ಆದರೆ ಈ ಔಷಧ ಬಳಸುವುದರಿಂದ ಸೋಂಕು ಅಷ್ಟು ಸುಲಭವಾಗಿ ಬರುವುದಿಲ್ಲ ಎನ್ನುವುದು ಇವತ್ತು ವಿಶ್ವದಲ್ಲಿ ಮೂಡಿರುವ ನಂಬಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನಮ್ಮ ದೇಶದ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರೆಲ್ಲಾ ಅಧ್ಯಯನ ಮಾಡಿ ಮಾರ್ಗಸೂಚಿ ಕೊಟ್ಟಿದ್ದಾರೆ. ಈ ಮಾತ್ರೆಯನ್ನು ಮಲೇರಿಯಾಗೆ ತೆಗೆದುಕೊಳ್ಳಲಾಗುತ್ತಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ಬರದಂತೆ ತೆಗೆದುಕೊಳ್ಳಲಾಗುತ್ತಿತ್ತು. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ. ಹಾಗಾಗಿ ಕೊರೊನಾಗೂ ಇದು ಉಪಯುಕ್ತವಾಗಲಿದೆ. ಹಾಗಾಗಿ ಇದನ್ನು ಕೊರೊನಾ ವಾರಿಯರ್ಸ್‌ ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಹೆಚ್​ಸಿಕ್ಯು ಮಾತ್ರೆಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಲಿವೆ. ಸೋಂಕಿತರ‌ ಚಿಕಿತ್ಸೆಗೆ ಅಗತ್ಯ ದಾಸ್ತಾನು ಇರಿಸಿಕೊಳ್ಳಬೇಕಿದೆ. ಈಗ ಕೊರೊನಾ ವಾರಿಯರ್ಸ್​ಗೂ ಇದೇ ಮಾತ್ರೆಗಳನ್ನು ಕೊಡುತ್ತಿರುವ ಕಾರಣ ಮಾತ್ರೆಗಳ ಕೊರತೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚುವರಿ ದಾಸ್ತಾನಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, 50 ಲಕ್ಷ ಮಾತ್ರೆಗಳ ಪೂರೈಕೆಗೆ ಬೇಡಿಕೆ ಸಲ್ಲಿಸಿದೆ. ಈಗಾಗಲೇ ಮೂರರಿಂದ ನಾಲ್ಕು ಲಕ್ಷ ಮಾತ್ರೆಗಳ ದಾಸ್ತಾನು ಮಾಡಿಕೊಂಡು ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.