ETV Bharat / state

ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆಯೇ ರಾಜ್ಯ ಸರ್ಕಾರ ? - ಈಟಿವಿ ಭಾರತ ಕನ್ನಡ ನ್ಯೂಸ್​​

ರಾಜ್ಯ ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್​ ರಾವ್ ಅವರ ನೇತೃತ್ವದಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವ ಸಲುವಾಗಿ ಏಳನೇ ವೇತನ ಆಯೋಗ ರಚಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್​ ಕೊಡುಗೆ ಕೊಡಲು ನಿರ್ಧರಿಸಿದೆ.

govt-constituted-seventh-pay-commission
ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆಯೇ ರಾಜ್ಯ ಸರ್ಕಾರ ?
author img

By

Published : Nov 9, 2022, 7:28 PM IST

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳದ ಸಲುವಾಗಿ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರ ನೇತೃತ್ವದಲ್ಲಿ ಈ ವೇತನ ಆಯೋಗವನ್ನು ರಚಿಸಲಾಗಿದೆ.

ಏಳನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ತರಿಸಿ, ಮುಂದಿನ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ಸರ್ಕಾರ ರಚಿಸಬೇಕಿದ್ದು, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆರನೇ ವೇತನ ಆಯೋಗವನ್ನು ರಚಿಸಿತ್ತು. ಈ ಆಯೋಗದ ಶಿಫಾರಸಿನ ಮೇಲೆ 2018ರ ಬಜೆಟ್ ಮೂಲಕ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಳ ಮಾಡಿದ್ದರು. ಇದೀಗ ಅವಧಿ ಪೂರೈಸುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳನೇ ವೇತನ ಆಯೋಗವನ್ನು ರಚಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 5.23 ಲಕ್ಷ ಮಂದಿ ಹಾಲಿ ಸರ್ಕಾರಿ ನೌಕರರಿದ್ದು, ಉಳಿದಂತೆ ಮೂರು ಲಕ್ಷಕ್ಕೂ ಅಧಿಕ ಮಂದಿ ಪಿಂಚಣಿದಾರರು ಮತ್ತು ನಿಗಮ,ಮಂಡಳಿ, ಪ್ರಾಧಿಕಾರಗಳ ನೌಕರರು ಇದ್ದು, ಈ ಎಲ್ಲರಿಗೂ ಏಳನೇ ವೇತನ ಆಯೋಗದಿಂದ ಅನುಕೂಲವಾಗಲಿದೆ. ಏಳನೇ ವೇತನ ಆಯೋಗದ ಶಿಫಾರಸು ಪ್ರತಿ ವರ್ಷ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ 12 ಸಾವಿರ ಕೋಟಿ ರೂ.ಗಳ ಹೊರೆ ಹೇರಲಿದೆ ಎಂಬುದು ಉನ್ನತ ಮೂಲಗಳ ಮಾಹಿತಿ ನೀಡಿದೆ. ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವಂತೆ ಸರ್ಕಾರಿ ನೌಕರರು ಬೇಡಿಕೆ ಇರಿಸಿದ್ದು, ಹಾಗಾದರೆ ತಮ್ಮ ಮೂಲ ವೇತನದ ಪ್ರಮಾಣ ಶೇ. 30 ರಿಂದ 40 ರಷ್ಟು ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ವಿಧಾನಸಭೆ ಚುನಾವಣೆ ಮುಂದಿನ ಮೇ ತಿಂಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಮಂಡನೆಯಾಗಲಿರುವ ರಾಜ್ಯದ 2023-24 ನೇ ಸಾಲಿನ ಬಜೆಟ್ ತಮಗೆ ವೇತನ ಹೆಚ್ಚಳದ ಕೊಡುಗೆ ನೀಡಲಿದೆ ಎಂಬ ಆಶಾಭಾವನೆಯಲ್ಲಿ ಸರ್ಕಾರಿ ನೌಕರರಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ : ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ.. ಸಿಎಂಗೆ ಪತ್ರ ಬರೆದ ಸತೀಶ್​ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.