ETV Bharat / state

ಪೊಲೀಸ್ ವರ್ಗಾವಣೆ ಪಟ್ಟಿಗೆ ಸರ್ಕಾರ ತಡೆ ನೀಡಿರುವುದು ಕಾನೂನು ಬಾಹಿರ: ಅಶ್ವತ್ಥನಾರಾಯಣ - ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಬಿಜೆಪಿ ವರಿಷ್ಠರ ನಿರ್ಧಾರ

ರಾಜ್ಯ ಸರ್ಕಾರ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸ್ ಮಂಡಳಿ ವರ್ಗಾವಣೆ ಪಟ್ಟಿಗೆ ತಡೆ ಹಿಡಿದಿರುವುದು ಖಂಡನೀಯ. ಸಂಪೂರ್ಣ ಕಾನೂನಿಗೆ ವಿರುದ್ಧ ಹಾಗೂ ಭಂಡತನದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಹಣಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ: ಮಾಜಿ ಡಿಸಿಎಂ ಅಶ್ವತ್ಥನಾರಾಯಣ

Former DCM Ashwathnarayan spoke to the reporters.
ಸುದ್ದಿಗಾರರೊಂದಿಗೆ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಅವರು ಮಾತನಾಡಿದರು.
author img

By

Published : Aug 3, 2023, 6:09 PM IST

ಬೆಂಗಳೂರು: ಪೊಲೀಸ್ ಮಂಡಳಿ ನಿಶ್ಚಯಿಸಿದ್ದ ಪೊಲೀಸರ ವರ್ಗಾವಣೆ ಪಟ್ಟಿಗೆ ಕಾನೂನು ಬಾಹಿರವಾಗಿ ರಾಜ್ಯ ಸರ್ಕಾರ ತಡೆ ನೀಡಿದೆ. ಇದರ ಹಿಂದೆ ವರ್ಗಾವಣೆ ದಂಧೆಯ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸ್ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಸಂಪೂರ್ಣ ಅಧಿಕಾರ ಪೊಲೀಸ್ ಮಂಡಳಿಗೆ ಇದೆ. ಪೊಲೀಸ್ ಮಂಡಳಿ ನಿರ್ಧರಿಸುವ ವರ್ಗಾವಣೆಗೆ ಸರ್ಕಾರ ಯಾವ ಕಾರಣಕ್ಕೂ ತಡೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ತಡೆ ನೀಡಬೇಕಾದರೆ ಪೊಲೀಸ್ ಮಂಡಳಿಯವರ ವಿರುದ್ಧ ಆರೋಪಗಳಿರಬೇಕು ಅಥವಾ ಅಧಿಕಾರ ದುರ್ಬಳಕೆಯಾಗಿರಬೇಕು ಎಂದು ತಿಳಿಸಿದ್ದಾರೆ.

ಇಲ್ಲವೇ ಕಾನೂನು ರೀತಿ ಕ್ರಮ ವಹಿಸಿಲ್ಲ. ಸರ್ಕಾರ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸ್ ಮಂಡಳಿ ಮಾಡಿದ್ದ ವರ್ಗಾವಣೆ ತಡೆ ಹಿಡಿದಿರುವುದು ಖಂಡನೀಯ. ಸಂಪೂರ್ಣ ಕಾನೂನಿಗೆ ವಿರುದ್ಧವಾಗಿ ತನ್ನ ಕಾರ್ಯ ಮಾಡಿದೆ. ಇಷ್ಟೆಲ್ಲಾ ಬೆಳಕಿಗೆ ಬಂದಿದ್ದರೂ ಭಂಡತನದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕ್ಕಾಗಿ ವರ್ಗಾವಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸರ್ಕಾರ ಬಂದ ದಿನದಿಂದಲೂ ಕಾನೂನು ಸುವ್ಯವಸ್ಥೆ ಕುಸಿದಿದೆ, ಸರ್ಕಾರ ವರ್ಗಾವಣೆ ದಂಧೆಯಲ್ಲಿ ಬ್ಯುಜಿಯಾಗಿದೆ. ಕಾಮಗಾರಿಗಳ ಬಿಲ್ ಪಾವತಿ ಮಾಡಲು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಇದೇ ರೀತಿ ಪೊಲೀಸ್ ಮಂಡಳಿಯಲ್ಲಿ ನಡೆದ ವರ್ಗಾವಣೆ ಪಟ್ಟಿಗೆ ತಡೆ ನೀಡಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ, ನಡೆಯುತ್ತಿರುವ ಹಾಲಿ ಅಭಿವೃದ್ದಿ ಕಾಮಗಾರಿಗಳಲ್ಲಿ ದೂರುಗಳು ಕೇಳಿ ಬಂದಾಗ ತನಿಖೆಗೆ ವಹಿಸುವುದು ಸಹಜ. ಆದರೆ ಹಿಂದಿನ ಸರ್ಕಾರದ ಎಲ್ಲ ಕಾಮಗಾರಿಗಳನ್ನು ಸಾರಾಸಗಟಾಗಿ ತಡೆ ಹಿಡಿದು ಎಲ್ಲ ಗುತ್ತಿಗೆದಾರರಿಗೆ ಕಿರುಕುಳ ನೀಡಿ, ಉಸಿರುಗಟ್ಟುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಎಲ್ಲರಿಗೂ ಉಸಿರುಗಟ್ಟುವ ವಾತಾವರಣ ನಿರ್ಮಿಸಿ ಕಿರುಕುಳದ ವಾತಾವರಣ ಸೃಷ್ಟಿಸಿದ್ದಾರೆ.

ಜನರಿಗೆ ಭಾಗ್ಯ ಕೊಟ್ಟು ತೃಪ್ತಿ ಮಾಡಿದ್ದೇವೆ. ಲೂಟಿ ಮಾಡಲು ನಮಗೆ ಲೈಸೆನ್ಸ್ ಇದೆ ಎನ್ನುವ ಧೋರಣೆ ತಳೆದಿದ್ದಾರೆ. ಇಂತಹ ವ್ಯಕ್ತಿಗಳು ಅಧಿಕಾರಕ್ಕೆ ಬಂದಿರುವುದು ನಿಜಕ್ಕೂ ದುರಾದೃಷ್ಟಕರ. ಸಿದ್ದರಾಮಯ್ಯ ಸರ್ಕಾರ, ಡಿ ಕೆ ಶಿವಕುಮಾರ್​​ಗೆ ಬ್ರ್ಯಾಂಡ್ ಬೆಂಗಳೂರು ಏನು ಎಂದು ಗೊತ್ತಿಲ್ಲ. ಇವರ ಬ್ರ್ಯಾಂಡ್ ಏನು ಎಂದರೆ ಬರೀ ಮಾತು ಅಷ್ಟೆ ಎಂದು ಲೇವಡಿ ಮಾಡಿದರು.

ಬೆಂಗಳೂರು ಕೂಡ ಇವರಿಂದ ನಯಾ ಪೈಸೆ ಅಭಿವೃದ್ಧಿ ಆಗಲ್ಲ. ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ, ಪ್ರಬಲ ಸಚಿವರಂತೆ ಇವರು
ಯಾಕೆ ಇವರ ಕೈಯಲ್ಲಿ ಏನು ಆಗುತ್ತದೆ..? ಬೆಂಗಳೂರು ಅಭಿವೃದ್ಧಿ ಆಗುತ್ತಾ ಇವರಿಂದ..? ಇವರಿಂದ ಪಾಪ ಬೆಂಗಳೂರು ಶಾಸಕರಿಗೆ ಶಕ್ತಿ, ಉಸಿರು ಇಲ್ಲದೇ ಮೌನ ವಾಗಿದ್ದಾರೆ. ಅವರು ಏನೇ ಕಾಟ ಕೊಟ್ಟರೂ ಸಹಿಸಿಕೊಂಡು ಇದ್ದಾರೆ. ಪಾಪ ಈ ಮಹನೀಯರಿಂದ ಏನು ಅಭಿವೃದ್ಧಿ ಆಗಲ್ಲ. ಎಲ್ಲವನ್ನೂ ತಡೆ ಹಿಡಿದು, ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ಸಾರೆ ಈ ಸರ್ಕಾರದ ಸ್ಥಿತಿ ಮುಂದೆ ದೇವರೆ ಗತಿ ಎಂದು ವ್ಯಂಗ್ಯವಾಡಿದರು.

ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಬಿಜೆಪಿ ವರಿಷ್ಠರ ನಿರ್ಧಾರ ಅಂತಿಮ: ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನಗೆ ಮಾಹಿತಿ ಇಲ್ಲ, ವರಿಷ್ಠರು ಯಾರು ಅಧ್ಯಕ್ಷರಾಗಬೇಕೆಂಬುವುದನ್ನು ನಿರ್ಧರಿಸುತ್ತಾರೆ. ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕರು ಯಾರಾಗುತ್ತಾರೆ ಎನ್ನುವುದನ್ನು ಕಾದು ನೋಡೋಣ. ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡುತ್ತೇವೆ. ಬಹಳ ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವುದು ಪ್ರಮುಖ ಗುರಿಯಾಗಿದೆ.

ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಿದೆ. ಸ್ಪಷ್ಟ ನಾಯಕತ್ವ ಇಲ್ಲದ ಪಕ್ಷದ ಪ್ರಯತ್ನಕ್ಕೆ ಫಲ ಸಿಗಲ್ಲ. ಅಂದು ಈಸ್ಟ್ ಇಂಡಿಯಾ ಇತ್ತು, ಇಂದು ಇಂಡಿಯಾ ವೇದಿಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಮಾನ್ಯತೆಯನ್ನು ನಮ್ಮ ದೇಶದ ಜನ ನೀಡಲ್ಲ. ಒಂದು ಕಡೆ ಅತಿ ಎತ್ತರದ ನಾಯಕತ್ವ ಉಳ್ಳ ನರೇಂದ್ರ ಮೋದಿ ಇದ್ದಾರೆ. ಮತ್ತೊಂದು ಕಡೆ ರಾಹುಲ್ ಗಾಂಧಿ ಇದ್ದಾರೆ. ರಾಹುಲ್ ಪ್ರಚಾರಕ್ಕೆ ಬಾರದಿದ್ದರೆ ಒಳ್ಳೆಯದು ಎನ್ನುವ ವ್ಯಕ್ತಿ ಈಟ್ ಇಂಡಿಯಾದ ನಾಯಕತ್ವ ವಹಿಸುತ್ತಿದ್ದಾರೆ. ಇದನ್ನು ಜನ ಒಪ್ಪಲ್ಲ. ಕಳೆದ ಬಾರಿ 25 ಪ್ಲಸ್ 1 ಗೆದ್ದಿದ್ದೆವು. ಈ ಬಾರಿ ನೂರಕ್ಕೆ ನೂರು 28 ಕ್ಷೇತ್ರವನ್ನೂ ಗೆಲ್ಲುತ್ತೇವೆ ಎಂದು ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ಇಂಡಿಯಾ ವೇದಿಕೆಗೆ ಬಂದಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳ ಬಳಕೆಯನ್ನೇ ಕಂಡಿದ್ದೇವೆ. ಸರ್ಕಾರದ ಆತಿಥ್ಯ ಸ್ವೀಕರಿಸಿದರು. ಸರ್ಕಾರದ ಹಣದಲ್ಲಿ ಕಾರ್ಯಕ್ರಮ ನಡೆಸಿದರು. ಭ್ರಷ್ಟಾಚಾರ ಇವತ್ತು ತಾಂಡವವಾಡುತ್ತಿದೆ. ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕ ಇವರಿಗೆ ಎಟಿಎಂ ಆಗಿದೆ. ಮೇಲ್ನೋಟಕ್ಕೆ ರಾಹುಲ್ ಗಾಂಧಿ ಭ್ರಷ್ಟಾಚಾರದ ಬಗ್ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಭ್ರಷ್ಟಾಚಾರ ಮಾಡುತ್ತೀರೋ, ಅನಾಚಾರ ಮಾಡುತ್ತೀರೋ ಏನಾದರೂ ಮಾಡಿ ಒಟ್ಟಿನಲ್ಲಿ ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆಲ್ಲಿ ಎಂದು ರಾಹುಲ್ ಗಾಂಧಿ ರಾಜ್ಯದ ನಾಯಕರಿಗೆ ಹೇಳಿದ್ದಾರೆ. ಇಂತವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಜನ ಈಗಾಗಲೇ ಸಂಪೂರ್ಣ ನಿರಾಸೆಗೊಂಡಿದ್ದಾರೆ. ಕಾಂಗ್ರೆಸ್​ಗೆ ಅವಕಾಶ ಕೊಟ್ಟಿದ್ದಕ್ಕೆ ಜನ ಕೈ ಕೈ ಹಿಸುಕಿಕೊಳ್ಳುತ್ತಾ ನಿರಾಶರಾಗಿದ್ದಾರೆ, ಮುಂದೆ ಪಾಠ ಕಲಿಸಲಿದ್ದಾರೆ ಎಂದು ಅಶ್ವತ್ಥನಾರಾಯಣ್ ಭವಿಷ್ಯ ನುಡಿದರು.

ಇದನ್ನೂ ಓದಿ : ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿಯಲ್ಲಿ ಹೊಸ ಚರ್ಚೆ ಆರಂಭ: ಯಾರಾಗ್ತಾರೆ ರಾಜ್ಯ ಬಿಜೆಪಿ ಸಾರಥಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.