ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶಾರಾಮಿ ಪಾರ್ಟಿ ಆಯೋಜಕಿ ಅರ್ಜೂ ಸೇಠ್‌ಗೆ ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿ ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದಾರೆ.
ಡ್ರಗ್ಸ್ ಕೇಸ್‌ನಲ್ಲಿ ಆಯೋಜಕಿ ಅರ್ಜೂ ಸೇಠ್ ಹೆಸರು ತಳುಕು ಹಾಕಿಕೊಂಡಿದೆ. ಐಶಾರಾಮಿ ಪಾರ್ಟಿಗಳಿಗೆ ಈಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಇದರ ಬೆನ್ನಲ್ಲೇ ಈ ಹಿಂದೆಯೇ ವಿಚಾರಣೆಗೆ ಹಾಜರಾಗುವಂತೆ ಮೊದಲು ನೋಟಿಸ್ ನೀಡಿದ್ದರು. ಆದರೆ, ನೋಟಿಸ್ ಕೈ ಸೇರುತ್ತಿದ್ದಂತೆ ಅರ್ಜೂ ಸೇಠ್ ಮುಂಬೈಗೆ ಪರಾರಿಯಾಗಿದ್ದರು.
ಇದೀಗ 2ನೇ ಬಾರಿ ಅರ್ಜೂ ಸೇಠ್‌ಗೆ ನೋಟಿಸ್ ನೀಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆಕೆಯ ಮೊಬೈಲ್‌ಗೆ ಪೊಲೀಸರು ಕರೆ ಮಾಡಿದಾಗ ಅರ್ಜೂ ತಾಯಿ ಕರೆ ಸ್ವೀಕರಿಸಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ.
ಈ ಹಿಂದೆ ಬಂಧಿತನಾಗಿದ್ದ ಡ್ರಗ್ ಪೆಡ್ಲರ್ ಥಾಮಸ್ ಕಾಲು ಜೊತೆ ಸಂಪರ್ಕ ಹೊಂದಿದ್ದ ಎಂಬ ವಿಚಾರವಾಗಿ ಗೋವಿಂದಪುರ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದ ಪ್ರೆಸ್ಟೀಜ್ ಗ್ರೂಪ್‌ನ ಸಿಇಒ ಅಂಜುಂ ರಜಾಕ್ ಅವರ ವೈದ್ಯಕೀಯ ವರದಿ ನೆಗೆಟಿವ್ ಬಂದಿತ್ತು.
ಇದನ್ನೂ ಓದಿ: ರಾಜ್ಯದಲ್ಲಿಂದು 300 ಮಂದಿಗೆ ಕೋವಿಡ್ ಸೋಂಕು ದೃಢ, ಒಬ್ಬ ಮೃತ..