ETV Bharat / state

ಭ್ರಷ್ಟಾಚಾರ ಆರೋಪಿಗಳಿಗೆ ರಾಜ್ಯಪಾಲರಿಂದ ರಕ್ಷಣೆ: ವಿ.ಎಸ್ ಉಗ್ರಪ್ಪ - Former M P V S Ugrappa

ಈ ಹಿಂದೆ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ವಿಜಿಲೆನ್ಸ್ ಕಮಿಷನ್ ತೀರ್ಪಿನ ಪ್ರಕಾರ, ಯಾವುದೇ ಅನುಮತಿಯನ್ನು ನೀಡಬೇಕಾದವರು 3+1 ತಿಂಗಳ ಒಳಗಾಗಿ ಅನುಮತಿ ನೀಡಬೇಕು. ಒಂದು ವೇಳೆ ಈ ಕಾಲಮಿತಿಯಲ್ಲಿ ತನ್ನ ತೀರ್ಮಾನ ತಿಳಿಸದಿದ್ದರೆ ಅದನ್ನು ವಿಚಾರಣೆ ನಡೆಸಲು ಪರೋಕ್ಷ ಒಪ್ಪಿಗೆ ಎಂದು ಪರಿಗಣಿಸಬೇಕು ಎಂದು ಹೇಳಿತ್ತು. ಆದರೆ ನಮ್ಮ ರಾಜ್ಯ ಪಾಲರು ಈ ವಿಚಾರವಾಗಿ ಏಳುವರೆ ತಿಂಗಳ ನಂತರ ಅನುಮತಿ ನಿರಾಕರಿಸಿದ್ದಾರೆ ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ತಿಳಿಸಿದ್ದಾರೆ.

v s ugrappa
ಮಾಜಿ ಸಂಸದ ವಿ. ಎಸ್. ಉಗ್ರಪ್ಪ
author img

By

Published : Jul 2, 2021, 8:08 PM IST

ಬೆಂಗಳೂರು: ‘ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಕೋರಿದ್ದ ಅನುಮತಿಯನ್ನು ರಾಜ್ಯಪಾಲರು ಕಾನೂನುಬಾಹಿರವಾಗಿ ನಿರಾಕರಿಸಿ, ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ‘ಶ್ರೀರಾಮುಲು ಅವರಿಗೆ ಮಾನ ಮರ್ಯಾದೆ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಮಾಜಿ ಸಂಸದ ವಿ. ಎಸ್. ಉಗ್ರಪ್ಪ

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಮೊಮ್ಮಗ ಹಾಗೂ ಇತರ ಸದಸ್ಯರ ವಿರುದ್ಧ ಬಿಡಿಎ ಅಪಾರ್ಟ್ಮೆಂಟ್ ನಿರ್ಮಾಣ ವಿಚಾರದಲ್ಲಿ 25 ಕೋಟಿ ರೂ ಲಂಚವನ್ನು ಶೆಲ್ ಕಂಪನಿಗಳಿಂದ ಆರ್‌ಟಿಜಿಎಸ್ ಮೂಲಕ ಪಡೆದಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಿಮ್ಮ ಮುಂದೆ ಹಾಗೂ ವಿಧಾನ ಸಭೆಯಲ್ಲಿ ಇಟ್ಟಿದ್ದರು.

ಭದ್ರಾ ಮೇಲ್ದಂಡೆ ಹಾಗೂ ನೀರಾವರಿ ಇಲಾಖೆ ಟೆಂಡರ್​ನಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ಅವರದೇ ಪಕ್ಷದ ಶಾಸಕರು ಹೇಳಿದ್ದಾರೆ. ಇಂದು ರಾಜ್ಯದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದ್ದು, ಇದರ ಉಗಮ ಸ್ಥಾನ ರಾಜ್ಯದ ಮುಖ್ಯಮಂತ್ರಿಗಳ ನಿವಾಸವಾಗಿದೆ. ನಮ್ಮ ಸರ್ಕಾರ ಇದ್ದಾಗ ಕಮಿಷನ್ ಸರ್ಕಾರ ಎಂದಿದ್ದರು. ಆದರೆ ಇಂದು ಅವರದೇ ಪಕ್ಷದ ಶಾಸಕರು ಇವರ ಕಮಿಷನ್ ಕಥೆಗಳನ್ನು ಬಿಚ್ಚಿಡುತ್ತಿದ್ದಾರೆ’ ಎಂದರು.

ಮಾಧ್ಯಮಗಳೇ ವರದಿ ಮಾಡಿವೆ: ‘ಆರ್​ಟಿಜಿಎಸ್ ಮೂಲಕ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ. ಅಬ್ರಾಹಂ ಎಂಬುವವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಇಡಿ ಆ ದೂರಿನ ಅನ್ವಯ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರ ವಿಚಾರಣೆ ನಡೆಸುತ್ತಿದೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ಇದರ ಜೊತೆಗೆ ಕ್ರಿಮಿನಲ್ ಪ್ರೊಸಿಜರ್​ 200 ಅಡಿಯಲ್ಲಿ ಈ ದೂರನ್ನು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪಿಸಿಆರ್ 40/2021 ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 19ನೇ ಸೆಕ್ಷನ್ ಅಡಿಯಲ್ಲಿ ವಿಚಾರಣೆ ನಡೆಸಲು ಅನುಮತಿಯನ್ನು ರಾಜ್ಯಪಾಲರು ನೀಡಬೇಕು ಎಂದು ಅಬ್ರಾಹಂ ಅವರು ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಸುಮಾರು ಏಳುವರೆಯಿಂದ ಎಂಟು ತಿಂಗಳು ಸಮಯಾವಕಾಶ ತೆಗೆದುಕೊಂಡಿದ್ದಾರೆ’ ಎಂದು ವಿವರಿಸಿದರು.

‘ಈ ಹಿಂದೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ವಿಜಿಲೆನ್ಸ್ ಕಮಿಷನ್ ತೀರ್ಪಿನ ಪ್ರಕಾರ, ಯಾವುದೇ ಅನುಮತಿಯನ್ನು ನೀಡಬೇಕಾದವರು 3+1 ತಿಂಗಳ ಒಳಗಾಗಿ ಅನುಮತಿ ನೀಡಬೇಕು. ಒಂದು ವೇಳೆ ಈ ಕಾಲಮಿತಿಯಲ್ಲಿ ತನ್ನ ತೀರ್ಮಾನ ತಿಳಿಸದಿದ್ದರೆ ಅದನ್ನು ವಿಚಾರಣೆ ನಡೆಸಲು ಪರೋಕ್ಷ ಒಪ್ಪಿಗೆ ಎಂದು ಪರಿಗಣಿಸಬೇಕು ಎಂದು ಹೇಳಿತ್ತು. ಆದರೆ ನಮ್ಮ ರಾಜ್ಯ ಪಾಲರು ಈ ವಿಚಾರವಾಗಿ ಏಳುವರೆ ತಿಂಗಳ ನಂತರ ಅನುಮತಿ ನಿರಾಕರಿಸಿದ್ದಾರೆ. ರಾಜ್ಯಪಾಲರು ತಮ್ಮ ಆದೇಶವನ್ನು ಅರ್ಜಿದಾರರಿಗೆ ನೀಡದೇ, ನೇರವಾಗಿ ಪೊಲೀಸ್ ಅಧಿಕಾರಿ ಹಾಗೂ ಪ್ರಾಸಿಕ್ಯೂಷನ್ ಅವರಿಗೆ ಕಳುಹಿಸಿದ್ದಾರೆ’ ಎಂದು ತಿಳಿಸಿದರು.

ಅಧಿಕಾರ ದುರುಪಯೋಗ: ‘ಯಾವುದೇ ರಾಜ್ಯಪಾಲರ ಅಧಿಕಾರ ಅವಧಿ 5 ವರ್ಷ. ಒಂದು ವೇಳೆ ಅವರ ಅಧಿಕಾರ ಮುಂದುವರಿಯಬೇಕಾದರೆ ಅಧಿಕಾರ ವಿಸ್ತರಣೆ ಆಗಬೇಕು. ಆದರೆ ನಮ್ಮ ರಾಜ್ಯಪಾಲರು ಅಧಿಕಾರಕ್ಕೆ ಬಂದು 7 ವರ್ಷವಾಗಿದೆ. ಅಧಿಕಾರ ಅವಧಿ ಮುಗಿದಿದ್ದರೂ ಅಧಿಕಾರ ವಿಸ್ತರಣೆಯನ್ನು ಪಡೆದಿಲ್ಲ, ರಾಜಿನಾಮೆ ಕೊಟ್ಟು ಹೋಗಿಲ್ಲ. ರಾಜ್ಯಪಾಲರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿಗಳು ಯಡಿಯೂರಪ್ಪ ಹಾಗೂ ಅವರ ಸಂಪುಟದ ಮಂತ್ರಿಗಳ ಮೇಲೆ ಇರುವ ಪ್ರಕರಣದ ವಿಚಾರಣೆ ನಡೆಸಲು ಏಳುವರೆ ತಿಂಗಳ ನಂತರ ಅನುಮತಿ ನಿರಾಕರಿಸಿದೆ. ಇದು ಬೇಲಿನೆ ಎದ್ದು ಹೊಲ ಮೇಯುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸಾಕ್ಷಿ ಎಂದರು.

‘ಇಷ್ಟು ತಡವಾಗಿ ವಿಚಾರಣೆ ನಿರಾಕರಿಸಿರುವುದೇಕೆ?: ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ವಿಜಿಲೆನ್ಸ್ ಸಮಿತಿ ನಿರ್ದೇಶನದಂತೆ 4 ತಿಂಗಳವರೆಗೂ ತೀರ್ಮಾನ ಪ್ರಕಟಿಸದಿದ್ದರೆ ಅದನ್ನು ವಿಚಾರಣೆಗೆ ಒಪ್ಪಿಗೆ ಎಂದೇ ಪರಿಗಣಿಸಬೇಕು. ಆದರೆ ಏಳುವರೆ ತಿಂಗಳ ನಂತರ ವಿಚಾರಣೆ ನಿರಾಕರಿಸಿರುವುದೇಕೆ? ಈ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ, ಪ್ರಾಸಿಕ್ಯೂಟರ್ ಅವರಿಗೆ, ರಾಜ್ಯ ಸರ್ಕಾರಕ್ಕೆ ನೋಟೀಸ್ ಇಲ್ಲ.

ಆದರೂ ಮುಖ್ಯಮಂತ್ರಿಗಳ ಪರವಾಗಿ ಪ್ರಾಸಿಕ್ಯೂಟರ್ ಹಾಗೂ ಎಸಿಬಿಯ ಡಿವೈಎಸ್ ಪಿ ಅವರು ವಿಚಾರಣೆಗೆ ಹಾಜರಾಗಿ, ರಾಜ್ಯಪಾಲರು ವಿಚಾರಣೆ ಅನುಮತಿ ನಿರಾಕರಿಸುವ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ನ್ಯಾಯಾಧೀಶರು ವಿಚಾರಣೆ ಪ್ರಕ್ರಿಯೆ ವೇಳೆ ಹೇಳಿರುವ ದಾಖಲೆ ಇದೆ. ರಾಜ್ಯಪಾಲರು ಅರ್ಜಿದಾರರಿಗೆ ತಮ್ಮ ನಿರಾಕರಣೆ ಆದೇಶವನ್ನು ರವಾನಿಸದೇ, ಪ್ರಾಸಿಕ್ಯೂಟರ್ ಹಾಗೂ ಡಿವೈಎಸ್ ಪಿ ಅವರಿಗೆ ಕಳುಹಿಸಿದ್ದೇಕೆ? ಅಂದರೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕಚೇರಿ ಅಥವಾ ರಾಜ್ಯಪಾಲರ ಕಚೇರಿಯ ಅಧಿಕಾರ ದುರ್ಬಳಕೆಯಾಗಿರುವುದು ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.

ದೂರು ನೀಡಿರುವವರು ಬೇರಾರೂ ಅಲ್ಲ: ‘ಶ್ರೀರಾಮುಲು ಅವರು ಮಂತ್ರಿ ಆದ ನಂತರ ಅವರ ಆಪ್ತ ಸಹಾಯಕರು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಆ ಆಪ್ತಸಹಾಯಕರು ಇದ್ದ ಸ್ಥಳದಲ್ಲೇ ರಾಮುಲು ಅವರ ಮತ್ತೊಬ್ಬ ಆಪ್ತರು ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗುತ್ತಾರೆ. ನಿನ್ನೆ ಬಂಧನಕ್ಕೆ ಒಳಗಾಗಿರುವ ರಾಜಣ್ಣ ಎಂಬುವವರು, ಶ್ರೀರಾಮುಲು ಅವರು ಮಂತ್ರಿಯಾದಾಗಲೆಲ್ಲಾ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಈತ ಮುಖ್ಯಮಂತ್ರಿಗಳು, ಅವರ ಪುತ್ರರ ಹೆಸರು ಬಳಸಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಇವರ ವಿರುದ್ಧ ವಂಚನೆ ಪ್ರಕರಣದಲ್ಲಿ ದೂರು ನೀಡಿರುವವರು ಬೇರಾರೂ ಅಲ್ಲ ಸ್ವತಃ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಎಂದು ಆರೋಪಿಸಿದರು.

ವಾಲ್ಮೀಕಿ ಸಮಾಜದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಲಾಗಿದೆ: ‘ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಆಸೆ ತೋರಿಸಿದ ಬಿಜೆಪಿ ನಾಯಕರು ಇಬ್ಬರು ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುತ್ತಿದ್ದಾರೆ. ಕುರಿಯನ್ನು ಕೊಬ್ಬಿಸಿ ಬಲಿ ಕೊಡುವ ಹಾಗೆ ಇವರನ್ನು ಈಗ ಬಲಿಕೊಟ್ಟಿದ್ದಾರೆ. ಬಳ್ಳಾರಿ ದಣಿಗಳು ಎಂದು ಶ್ರೀರಾಮುಲು ಅವರನ್ನು, ಬೆಳಗಾವಿ ಸಾಹುಕಾರ್ ಎಂದು ರಮೇಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದವರು, ಈಗ ಅವರನ್ನು ಹಂತಹಂತವಾಗಿ ಮುಗಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.

ಅಪ್ಪ ಮಕ್ಕಳ ಡಬಲ್ ಡೆಕ್ಕರ್ ಸರ್ಕಾರ: ನಂತರ ಮಾತನಾಡಿದ ಮಾಜಿ ಸಚಿವ ಹೆಚ್. ಎಂ ರೇವಣ್ಣ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಈ ರೀತಿ ಭ್ರಷ್ಟಾಚಾರ ಆರೋಪ ಹೊತ್ತಿದ್ದನ್ನು ನಾವು ನೋಡಿದ್ದೇವೆ. ಅಂದು ಚೆಕ್ ಮೂಲಕ ಇದ್ದ ವ್ಯವಹಾರ, ಇಂದು ಆರ್ ಟಿಜಿಎಸ್ ಮೂಲಕ ನಡೆಯುತ್ತಿದೆ. ಆದರೆ ಇಂದು ಚರ್ಚೆ ಆಗುತ್ತಿರುವುದು ರಾಮುಲು ಅವರ ಆಪ್ತರ ವಿರುದ್ಧ ಮುಖ್ಯಮಂತ್ರಿ ಅವರ ಪುತ್ರರು ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ದೂರು ನೀಡಿರುವುದು. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಸಾಬೀತಾಗುತ್ತದೆ. ಅವರ ಪಕ್ಷದ ನಾಯಕರೇ ಕೊಟ್ಟಿರುವ ಹೇಳಿಕೆ ನೋಡಿದರೆ ಇದು ಅಪ್ಪ ಮಕ್ಕಳ ಡಬಲ್ ಡೆಕ್ಕರ್ ಸರ್ಕಾರವಾಗಿದೆ. ಅದಕ್ಕೆ ಪೂರಕವಾಗಿ ಈ ಪ್ರಕರಣವೂ ಸಾಕ್ಷಿಯಾಗಿದೆ’ ಎಂದರು.

ಮಾಜಿ ಸಚಿವ ಹೆಚ್. ಎಂ ರೇವಣ್ಣ

‘ಈಶ್ವರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಅವರ ಮಾತುಗಳಿಗೆ ಹಾಗೂ ಅವರ ನಡೆಗೆ ಸಂಬಂಧವೇ ಇಲ್ಲದಂತಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದ ಈಶ್ವರಪ್ಪ ಅವರು ನಂತರ ನಾನು ರಾಜ್ಯಪಾಲರ ಜತೆ ಚರ್ಚೆ ಮಾಡಲು ಹೋಗಿದ್ದೆ ಎಂದರು. ಈ ರೀತಿ ಅಸಂಬದ್ಧ ಹೇಳಿಕೆ ನೀಡುವುದರಲ್ಲಿ ಯಾರಾದರು ಮೊದಲಿಗರಿದ್ದರೆ ಅದು ಈಶ್ವರಪ್ಪನವರು. ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ.

ಅರ್ಥಪೂರ್ಣವಾದ ಹೇಳಿಕೆ ನೀಡಲಿ: ಈ ಹಿಂದೆ ಯಡಿಯೂರಪ್ಪನವರು ಇದೇ ರೀತಿ ಹೇಳಿಕೆ ಕೊಟ್ಟಿದ್ದರು, ಆದರೆ ಜನ ಮಾತ್ರ ಪದೇ ಪದೆ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ಅವರ ಆಡಳಿತ, ನಡುವಳಿಕೆ, ಭ್ರಷ್ಟಾಚಾರವನ್ನು ಜನ ನೋಡುತ್ತಿದ್ದಾರೆ. ಅವರೇ ತೀರ್ಮಾನಿಸುತ್ತಾರೆ. ಉಪಮುಖ್ಯಮಂತ್ರಿಯಾಗಿದ್ದ ಅವರು ಈಗ ಮಂತ್ರಿಸ್ಥಾನಕ್ಕೆ ತೃಪ್ತರಾಗಿರುವುದನ್ನು ನಾನು ಅಭಿನಂದಿಸುತ್ತೇನೆ. ಇನ್ನು ಮುಂದಾದರೂ ಅವರು ಅರ್ಥಪೂರ್ಣವಾದ ಹೇಳಿಕೆ ನೀಡಲಿ’ ಎಂದು ತಿರುಗೇಟು ನೀಡಿದರು.

ಓದಿ: ಸರ್ಕಾರದ ಬಳಿ ಲಸಿಕೆನೇ ಇಲ್ಲ, ಸುಳ್ಳು ಹೇಳ್ತಿದ್ದಾರೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.