ETV Bharat / state

Covid 3ನೇ ಅಲೆಯೊಂದಿಗೆ ಎದುರಾಗುತ್ತೆ ನೆರೆ ಹಾವಳಿ ಭೀತಿ: ಸರ್ಕಾರಕ್ಕೆ ಎದುರಾಗುತ್ತಾ ಹಣಕಾಸು ಸಮಸ್ಯೆ? - ಕರ್ನಾಟಕ ಇತ್ತೀಚಿನ ಸುದ್ದಿ

ಮೂರನೇ ಅಲೆ ಹಾಗೂ ನೆರೆಹಾನಿ ಎರಡನ್ನೂ ಏಕಕಾಲಕ್ಕೆ ಎದುರಿಸಬೇಕಾದ ಸನ್ನಿವೇಶ ಬಂದೊದಗಲಿರುವ ಸಾಧ್ಯತೆಯಿಂದ ಸರ್ಕಾರಕ್ಕೆ ಹಣಕಾಸು ಕೊರತೆ ಎದುರಾಗಲಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಮೂರನೇ ಅಲೆ ಬರುವ ಮುನ್ಸೂಚನೆಯನ್ನು ತಜ್ಞರ ಸಮಿತಿ ನೀಡಿದ್ದು, ಇಷ್ಟು ಕಡಿಮೆ ಸಮಯದಲ್ಲಿ ತಜ್ಞರ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕಾದ ಸನ್ನಿವೇಶ ಸರ್ಕಾರಕ್ಕೆ ಎದುರಾಗಿದೆ.

government
ಕೋವಿಡ್ 3ನೇ ಅಲೆ
author img

By

Published : Jun 23, 2021, 5:41 PM IST

ಬೆಂಗಳೂರು: ರಾಜ್ಯದಲ್ಲಿ ಮೂರನೇ ಅಲೆ ಎದುರಿಸಲು ಹೊಸದಾಗಿ ಆಸ್ಪತ್ರೆ ನಿರ್ಮಾಣ, ವೈದ್ಯರ ಕೊರತೆ ನೀಗಿಸುವುದು ಸವಾಲಿನ ಕೆಲಸವಾಗಿದ್ದು, ಮತ್ತೊಂದು ಕಡೆ ಆಸ್ಪತ್ರೆ ಕಟ್ಟಡ, ಸಲಕರಣೆ, ಯಂತ್ರೋಪಕರಣ ಇದ್ದರೂ ಅವುಗಳ ಬಳಕೆಗೆ ತಜ್ಞ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗುವ ಸಾಧ್ಯತೆ ಸ್ಪಷ್ಟವಾಗಿದೆ.

ಮೂರನೇ ಅಲೆಯಿಂದ ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಬಾಧಿತರಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಳ್ಳುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ದೊಡ್ಡವರಿಗೆ ಆರಂಭಿಸಿದ್ದ ಕೋವಿಡ್ ಕೇರ್ ಸೆಂಟರ್ ಮಕ್ಕಳಿಗೆ ಸರಿ ಹೊಂದುವುದಿಲ್ಲ. ಹಾಗಾಗಿ ಮಕ್ಕಳ ಚಟುವಟಿಕೆಗೆ ಪೂರಕ ರೀತಿಯ ಮಕ್ಕಳ ಆರೈಕೆ ಕೇಂದ್ರಗಳ ಆರಂಭ ಮಾಡಬೇಕಿದ್ದು, ಪೋಷಕರೂ ಮಕ್ಕಳ ಜೊತೆ ಇರುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ, ಇದು ಕಷ್ಟ ಸಾಧ್ಯವಾಗಿದೆ.

ವೈದ್ಯಕೀಯ ಕಾಲೇಜುಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಕೊರೊನಾ ನಂತರ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಈಗ ನವಜಾತ ಶಿಶುಗಳಿಗೆ ಐಸಿಯು, ಪೀಡಿಯಾಟ್ರಿಕ್ ವಾರ್ಡ್ ಹಾಸಿಗೆ, ಪಿಐಸಿಯು ಹಾಸಿಗೆ ಹೆಚ್ಚಿಸಬೇಕಿದ್ದು,‌ ಮಕ್ಕಳಿಗೆ ಸೀಮಿತವಾಗಿ ರಾಜ್ಯಾದ್ಯಂತ 27,000 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ಜಿಲ್ಲಾಸ್ಪತ್ರೆಗಳಲ್ಲಿ 10 -25 ಮಕ್ಕಳ ಐಸಿಯು, 25-50 ಆಕ್ಸಿಜನ್ ಹಾಸಿಗೆಗಳು, 10-20 ಎನ್‌ಐಸಿಯು ಹಾಸಿಗೆಗಳಿವೆ. ತಾಲೂಕು ಆಸ್ಪತ್ರೆಗಳಲ್ಲಿ 10-15 ಮಕ್ಕಳ ಐಸಿಯು, 20-50 ಆಕ್ಸಿಜನ್ ಹಾಸಿಗೆಗಳು ಇವೆ. ಇತರ ಆಸ್ಪತ್ರೆಗಳಲ್ಲಿ ಶೇ.10 ರಿಂದ ಶೇ. 20ರಷ್ಟು ಐಸಿಯು ಮತ್ತು ಸಾಮಾನ್ಯ ಹಾಸಿಗೆಗಳನ್ನು ಮೀಸಲಿಡಬೇಕಿದೆ. ಆಡಳಿತಾತ್ಮಕ ಸಮಸ್ಯೆಗಳ ಕಾರಣ ತಕ್ಷಣಕ್ಕೆ ಇದು ಸಾಧ್ಯವಾಗುವುದು ಅನುಮಾನವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಮಕ್ಕಳ ತಜ್ಞರಿರಬೇಕು

ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬ, ಜಿಲ್ಲಾಸ್ಪತೆಯಲ್ಲಿ ನಾಲ್ಕು ಮಂದಿ ಮಕ್ಕಳ ವೈದ್ಯರು ಇರಬೇಕು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್‌ಗಳು, ಸಹಾಯಕ ಸಿಬ್ಬಂದಿ ಅಗತ್ಯಕ್ಕೆ ತಕ್ಕಂತೆ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ಇಂಟರ್ನಿ ವೈದ್ಯರನ್ನು ಕೊರೊನಾ ಕೇರ್ ಸೆಂಟರ್ ಸೇವೆಗೆ ಮೀಸಲಿಡಬೇಕು. ಅಗತ್ಯಕ್ಕೆ ತಕ್ಕಂತೆ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರ ಹುದ್ದೆ ಭರ್ತಿ ಮಾಡಿಬೇಕು ಇಲ್ಲವೇ ತಾತ್ಕಾಲಿಕ ಭರ್ತಿ ಮಾಡಿಕೊಳ್ಳಬೇಕು.

ಅಗತ್ಯವಿದ್ದರೆ ಸಮುದಾಯ ವೈದ್ಯರ ಸೇವೆಯನ್ನು ಬಳಸಿಕೊಳ್ಳಬೇಕು. ವೈದ್ಯಕೀಯ ಕಾಲೇಜುಗಳು, ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗಗಳಲ್ಲಿರುವ ಹುದ್ದೆಗಳ ಭರ್ತಿ, ವೈದ್ಯಕೀಯ ಕಾಲೇಜುಗಳಲ್ಲಿ ಹುದ್ದೆಗಳಿಗೆ ಸಹಾಯಕ ಪ್ರಾಧ್ಯಾಪಕರ ಭರ್ತಿ, ಟ್ರಯಾಜ್ ಸೆಂಟರ್‌ಗಳನ್ನು ಕಿರಿಯ ವೈದ್ಯರಿಂದ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಮೂರನೇ ಅಲೆ ಎದುರಿಸಲು ಹೆಚ್ಚುವರಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು.

ಆದರೆ ಖಾಸಗಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ವೇತನ ಸಿಗುವ ಕಾರಣ ವೈದ್ಯಕೀಯ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಸೇವೆಗೆ ಬರಲು ಒಪ್ಪುವುದಿಲ್ಲ. ಖಾಯಂ ನೇಮಕಾತಿಗೆ ಮಾರ್ಗಸೂಚಿಯಂತೆ ನೇಮಕ ಮಾಡಲು ವಿಳಂಬವಾಗಲಿದೆ.

ಪೀಡಿಯಾಟ್ರಿಕ್ ಐಸಿಯುಗೆ ಅಪ್‌ಗ್ರೇಡ್ ಮಾಡೋ ಅವಶ್ಯಕತೆ

ಅಸ್ತಿತ್ವದಲ್ಲಿರುವ ಎಚ್‌ಡಿಯು ಅನ್ನು ಪೀಡಿಯಾಟ್ರಿಕ್ ಐಸಿಯುಗೆ ಅಪ್‌ಗ್ರೇಡ್ ಮಾಡಬೇಕು. ಆದರೆ ಇದನ್ನು ನಿರ್ವಹಣೆ ಮಾಡುವ ಸಿಬ್ಬಂದಿ ಕೊರತೆ ಇದೆ. ಈ ಸಿಬ್ಬಂದಿ ನೇಮಕಕ್ಕೂ ಸರ್ಕಾರ ನೇಮಕಾತಿ ಮಾಡಿಕೊಳ್ಳಬೇಕಿದ್ದು, ಹಣಕಾಸು ಇಲಾಖೆಯಿಂದ ಅನುಮತಿ ಸಿಗುವುದು ಕಷ್ಟವಾಗಿದೆ.

ಹಿಂದುಳಿದ ಜಿಲ್ಲೆಗಳಾದ ಕೊಪ್ಪಳ, ಕೋಲಾರ, ಚಿತ್ರದುರ್ಗ, ಯಾದಗಿರಿ, ಚಾಮರಾಜನಗರ ಮತ್ತು ಹಾವೇರಿಗಳಲ್ಲಿ 250 ಹಾಸಿಗೆಗಳು ಮತ್ತು ಕನಿಷ್ಠ 20 ಪಿಐಸಿಯು / ಎನ್‌ಐಸಿಯು ಹೊಂದಿರುವ ವಿಶೇಷ ಮಕ್ಕಳ ಆಸ್ಪತ್ರೆ ವ್ಯವಸ್ಥೆ, ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಸಾಂದ್ರಕಗಳು ಮತ್ತು ಅಗತ್ಯ ಸಿಬ್ಬಂದಿಗಳೊಂದಿಗೆ ತಾತ್ಕಾಲಿಕ ಸ್ಥಿರೀಕರಣ ಘಟಕಗಳನ್ನು ರಚಿಸಬೇಕಿದೆ. ಇದಕ್ಕೆ ಹಣಕಾಸು ಸಮಸ್ಯೆ ಎದುರಾಗಲಿದೆ.

ಎರಡನೇ ಅಲೆಯಲ್ಲಿ ಆಮ್ಲಜನಕ ಖಾಲಿಯಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಸೋಂಕಿತರು ಮೃತಪಟ್ಟ ಘಟನೆ ಕಣ್ಮುಂದೆ ಇದೆ. ಆಮ್ಲಜನಕದ ಗರಿಷ್ಠ ಬೇಡಿಕೆ ದಿನಕ್ಕೆ 1200 ಮೆಟ್ರಿಕ್ ಟನ್ ತಲುಪಿತ್ತು. ಈಗ ಅದು 600-800 ಮೆಟ್ರಿಕ್ ಟನ್​ಗೆ ಇಳಿಕೆಯಾಗಿದ್ದರೂ ಗರಿಷ್ಠ ಪ್ರಮಾಣದ ಅಗತ್ಯ ಬಿದ್ದಾಗ ಆಮ್ಲಜನಕ ಕೊರತೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.

ಆದರೆ, ರಾಜ್ಯ ಇದಕ್ಕೆ ಕೇಂದ್ರವನ್ನೇ ಅವಲಂಭಿಸಿದ್ದು, ಸ್ವತಂತ್ರವಾಗಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಖರೀದಿ ಒಪ್ಪಂದ ಮಾಡಿಕೊಳ್ಳಬೇಕು. ಆದರೆ ಹಣಕಾಸು ಲಭ್ಯತೆ ಇದಕ್ಕೆ ಪೂರಕವಾಗಿಲ್ಲದ ಕಾರಣ ಸರ್ಕಾರಕ್ಕೆ ಇದು ದುಬಾರಿಯಾಗಿ ಪರಿಣಮಿಸಲಿದೆ. ಹಾಗಾಗಿ ಸರ್ಕಾರ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ.

ಮೂರನೇ ಅಲೆ ನಿರ್ವಹಿಸಲು ಕನಿಷ್ಠ 3000 ಶಿಶುವೈದ್ಯರು ಈಗ ಅಸ್ತಿತ್ವದಲ್ಲಿರುವವರೊಂದಿಗೆ ಅಗತ್ಯವಿದ್ದು, ಅಷ್ಟು ಸಂಖ್ಯೆಯ ಸ್ವಯಂ ಸೇವೆಗೆ ಮುಂದಾಗುವ ವೈದ್ಯರ ನೇಮಕ ಕಷ್ಟ ಸಾಧ್ಯವಾಗಲಿದೆ. ಸರ್ಕಾರ ಈಗಿನಿಂದಲೇ ಮಕ್ಕಳ ವೈದ್ಯರ ಸೇವೆ ಬಳಸಿಕೊಳ್ಳಲು ಮಾತುಕತೆ ಆರಂಭಿಸಿ ವ್ಯವಸ್ಥೆ ಮಾಡಿಕೊಳ್ಳಬೇಕು.

ಆದರೆ ಸದ್ಯದ ಮಟ್ಟಿಗೆ ಇನ್ನು ಮೂರನೇ ಅಲೆ ಬಂದಿಲ್ಲ. ಬಂದಾಗ ಈ ಬಗ್ಗೆ ಯೋಚಿಸೋಣ ಎನ್ನುವ ಅಭಿಪ್ರಾಯ ಸರ್ಕಾರಿ ವಲಯದಲ್ಲಿದೆ. ಹಾಗಾಗಿ ಸರ್ಕಾರದ ಈ ಉದಾಸೀನತೆಯಿಂದ ಶಿಶು ವೈದ್ಯರ ಕೊರತೆ ಮೂರನೇ ಅಲೆ ಎದುರಾದಾಗ ಕಾಡಲಿದೆ.

ದೈಹಿಕವಾಗಿ ಶಾಲೆಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಕೋವಿಡ್ -19 ಆರೋಗ್ಯ ವಿಮೆಯನ್ನು 2 ಲಕ್ಷ ರೂ.ವರೆಗೆ ನೀಡಬೇಕು ಎನ್ನುವುದು ಜಿಜ್ಞಾಸೆಗೆ ಕಾರಣವಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸರ್ಕಾರವೇ ವಿಮೆ ಮಾಡಿಸಲಿದೆ.

ಆದರೆ, ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಮೆ ಯಾರು ಮಾಡಿಸಬೇಕು, ಈ ವಿದ್ಯಾರ್ಥಿಗಳಿಗೂ ಸರ್ಕಾರವೇ ವಿಮೆ ಮಾಡಿಸಲಿದೆಯಾ ಅಥವಾ ಶಿಕ್ಷಣ ಸಂಸ್ಥೆಗಳು ಭರಿಸಬೇಕಾ, ಪೋಷಕರು ಭರಿಸಬೇಕಾ ಎನ್ನುವ ಗೊಂದಲ ಇದೆ. ಒಂದು ವೇಳೆ ಸರ್ಕಾರವೇ ಭರಿಸಬೇಕು ಎನ್ನುವುದಾದಲ್ಲಿ ಬಹುದೊಡ್ಡ ಆರ್ಥಿಕ ಹೊಡೆತ ಸರ್ಕಾರಕ್ಕೆ ಬೀಳಲಿದೆ.

ಮಕ್ಕಳು ರಾಜ್ಯದ ಜನಸಂಖ್ಯೆಯ ಶೇ.34 ರಷ್ಟಿದ್ದಾರೆ. ಆದ್ದರಿಂದ ಸರ್ಕಾರವು ಇರುವ ಔಷಧಗಳ ಜೊತೆ ಮಕ್ಕಳಿಗೆ ಹೊಸದಾಗಿ ದೊಡ್ಡ ಪ್ರಮಾಣದ ಔಷಧ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಎರಡನೇ ಅಲೆಯಲ್ಲಿ ಔಷಧ ಕೊರತೆ ರಾಜ್ಯಕ್ಕೆ ಕಾಡಿದ್ದು, ಮೂರನೇ ಅಲೆಯಲ್ಲಿ ಅದು ಮರುಕಳಿಸದಂತೆ ನೋಡಿಕೊಳ್ಳಬೇಕಿರುವುದು ಸರ್ಕಾರದ ಮೇಲಿರುವ ಬಹುದೊಡ್ಡ ಜವಾಬ್ದಾರಿ.

ಇಷ್ಟೆಲ್ಲ ವ್ಯವಸ್ಥೆಗಳಲ್ಲಿ ಕಟ್ಟಡ, ಯಂತ್ರೋಪಕರಣಗಳು ಹೊರತುಪಡಿಸಿದರೆ ಇತರ ಸೌಲಭ್ಯ ಕೇವಲ ಮೂರನೇ ಅಲೆಗೆ ಹಾಗೂ ಮಕ್ಕಳಿಗಾಗಿ ಮಾತ್ರವೇ ಸೀಮಿತ ಕಾಲಕ್ಕೆ ಬೇಕಾಗಿದೆ. ಹಾಗಾಗಿ ಸರ್ಕಾರ ತಾತ್ಕಾಲಿಕ ವ್ಯವಸ್ಥೆಗೆ ಚಿಂತನೆ ನಡೆಸಲಿದೆ. ಮೊದಲ ಅಲೆಗೆ ಆರಂಭಿಸಿದ್ದ ದೊಡ್ಡ ದೊಡ್ಡ ಕೋವಿಡ್ ಕೇರ್ ಸೆಂಟರ್​ಗಳು ವ್ಯರ್ಥವಾದವು. ಎರಡನೇ ಅಲೆಗೆ ಸ್ಥಾಪಿಸಿದ್ದ ಸಣ್ಣ ಕೋವಿಡ್ ಕೇರ್ ಸೆಂಟರ್​ಗಳೂ ಕೆಲವೇ ದಿನ ಕಾರ್ಯ ನಿರ್ವಹಿಸಿ ಮುಚ್ಚಲ್ಪಟ್ಟವು.

ಎರಡೂ ಅಲೆಯಲ್ಲಿ ಕೋವಿಡ್ ಕೇರ್ ಸೆಂಟರ್​ಗಳಿಗೆ ವಿನಿಯೋಗಿಸಿದ ಹಣ ಪೋಲಾಗಿದೆ. ಹೀಗಾಗಿ ಸರ್ಕಾರ ಮೂರನೇ ಅಲೆಗೆ ಹಣ ಪೋಲಾಗುವ ಭೀತಿಯಿಂದ ಅಗತ್ಯ ಪ್ರಮಾಣದ ಆರೈಕೆ ಕೇಂದ್ರಗಳ ಆರಂಭಕ್ಕೆ ಬದಲು ಕನಿಷ್ಠ ಆರೈಕೆ ಕೇಂದ್ರಗಳ ಆರಂಭಕ್ಕೆ ಚಿಂತನೆ ನಡೆಸಲಿದೆ.

ತಕ್ಷಣದ ಪರಿಹಾರ ವ್ಯವಸ್ಥೆಗೂ ಸರ್ಕಾರ ಸಿದ್ಧವಾಗಬೇಕಿದೆ

ಇದರಿಂದ ಅಲೆಯ ತೀವ್ರತೆ ಏಕಾಏಕಿ ಹೆಚ್ಚಾದರೆ ಸರ್ಕಾರ ತಕ್ಷಣ ಪರ್ಯಾಯ ವ್ಯವಸ್ಥೆಗೆ ಪರದಾಡಬೇಕಾಗಲಿದೆ‌. ಇನ್ನು ಈಗಾಗಲೇ ಎರಡು ವರ್ಷದಿಂದ ಬಜೆಟ್​ನ ಸಾಕಷ್ಟು ಹಣವನ್ನು ಕೋವಿಡ್ ನಿರ್ವಹಣೆಗೆ ಬಳಕೆ ಮಾಡಲಾಗಿದೆ. ಈಗ ಮುಂಗಾರು ಆರಂಭಗೊಂಡಿದ್ದು, ಮಳೆ ಹಾನಿಯನ್ನೂ ಸರ್ಕಾರ ಎದುರಿಸಬೇಕಿದೆ. ಹಾಗಾಗಿ ಕೋವಿಡ್​ಗಾಗಿಯೇ ಹೆಚ್ಚಿನ ಹಣ ವಿನಿಯೋಗ ಮಾಡುವುದು ಕಷ್ಟವಾಗಲಿದ್ದು, ನೆರೆ ಪರಿಹಾರ ಕಾರ್ಯಕ್ಕೂ ಹಣ ಮೀಸಲಿರಿಸಬೇಕಿದೆ.

ಮೂರನೇ ಅಲೆ ಹಾಗು ನೆರೆಹಾನಿ ಎರಡನ್ನೂ ಏಕಕಾಲಕ್ಕೆ ಎದುರಿಸಬೇಕಾದ ಸನ್ನಿವೇಶ ಬಂದೊದಗಲಿರುವ ಸಾಧ್ಯತೆಯಿಂದ ಸರ್ಕಾರಕ್ಕೆ ಹಣಕಾಸು ಕೊರತೆ ಎದುರಾಗಲಿದೆ. ಮಕ್ಕಳ ಕೊರೊನಾ ಸಮಸ್ಯೆಗಳನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ, ಆಶಾ, ಸಹಾಯಕ ಶುಶ್ರೂಷಕಿರಿಗೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಆನ್‌ಲೈನ್ ತರಬೇತಿ ವ್ಯವಸ್ಥೆ ಮಾಡಬೇಕು.

ಇದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಮೂರನೇ ಅಲೆ ಬರುವ ಮುನ್ಸೂಚನೆಯನ್ನು ತಜ್ಞರ ಸಮಿತಿ ನೀಡಿದ್ದು ಇಷ್ಟು ಕಡಿಮೆ ಸಮಯದಲ್ಲಿ ತಜ್ಞರ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕಾದ ಸನ್ನಿವೇಶ ಸರ್ಕಾರಕ್ಕೆ ಎದುರಾಗಿದೆ. ಒಂದು ಕಡೆ ಕೋವಿಡ್ ಮತ್ತೊಂದು ಕಡೆ ನೆರೆ ಭೀತಿ, ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಯಾವ ರೀತಿ ಸನ್ನದ್ಧವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.