ETV Bharat / state

ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಬ್ರೇಕ್​ ಹಾಕಲು ಸರ್ಕಾರದ ಚಿಂತನೆ: ನಷ್ಟದ ಭೀತಿಯಲ್ಲಿ ಹೋಟೆಲ್ ಉದ್ಯಮ

author img

By

Published : Dec 3, 2020, 7:04 PM IST

ಕ್ರಿಸ್ಮಸ್, ಹೊಸ ವರ್ಷ ಆಚರಣೆಯ ವೇಳೆ ಹೆಚ್ಚು ಆದಾಯದ ನಿರೀಕ್ಷೆಯಲ್ಲಿ ಹೋಟೆಲ್​ ಉದ್ಯಮಿಗಳು ಇದ್ದರು. ಆದರೆ ಇದೀಗ ಸರ್ಕಾರ ಆಚರಣೆಗೆ ಬ್ರೇಕ್ ಹಾಕುವ ಚಿಂತನೆಯಲ್ಲಿದೆ. ಹಾಗಾಗಿ ಆತಿಥ್ಯ ವಲಯ ನಷ್ಟದ ಭೀತಿಯಲ್ಲಿದೆ.

ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್

ಬೆಂಗಳೂರು: ಕೋವಿಡ್-19 ಮಹಾಮಾರಿ 2ನೇ ಅಲೆ ಡಿ. 2ನೇ ವಾರದಿಂದ ರಾಜ್ಯದಲ್ಲಿ ಆರಂಭವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಕಾರಣದಿಂದ ಹೊಸ ವರ್ಷ ಆಚರಣೆಗೆ ಸರ್ಕಾರ ಬ್ರೇಕ್ ಹಾಕುವ ಚಿಂತನೆಯಲ್ಲಿದೆ. ಒಂದು ವೇಳೆ ಸರ್ಕಾರ ಹೊಸ ವರ್ಷ ಆಚರಣೆಗೆ ಬ್ರೇಕ್​ ಹಾಕಿದ್ರೆ, ಹೋಟೆಲ್ ಹಾಗೂ ಪಬ್-ಬಾರ್​ಗಳಿಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.

2020 ಮಾರ್ಚ್​ನಿಂದ ಆರಂಭವಾದ ಕೊರೊನಾ ಮಹಾಮಾರಿಯಿಂದ ನಷ್ಟದಲ್ಲಿದ್ದ ಆತಿಥ್ಯ ವಲಯ, ಸೆಪ್ಟೆಂಬರ್ ತಿಂಗಳಿಂದ ಕೊಂಚ ಮಟ್ಟಿಗೆ ಚೇತರಿಕೆ ಕಂಡಿತ್ತು. ಹಾಗಾಗಿ ಕ್ರಿಸ್ಮಸ್, ಹೊಸ ವರ್ಷ ಆಚರಣೆ ವೇಳೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಟಾಸ್ಕ್ ಫೋರ್ಸ್ ವರದಿ ಗಮನಿಸಿದ ಸರ್ಕಾರ ರಾತ್ರಿ ಕರ್ಫ್ಯೂ ಜೊತೆಗೆ ಬ್ರಿಗೇಡ್ ರೋಡ್ ಹಾಗೂ ಇತರ ಪಾರ್ಟಿಗಳಿಗೆ ನಿಷೇಧ ಹೇರುವ ಚಿಂತೆಯಲ್ಲಿದೆ. ಇದರಿಂದ ಆತಿಥ್ಯ ವಲಯ ಇನ್ನಷ್ಟು ನಷ್ಟ ಎದುರಿಸಬೇಕಾಗಬಹುದು.

ಎಚ್​.ವಿಶ್ವನಾಥ್​ಗೆ 25 ಕೋಟಿ ರೂ.ನೀಡಿದ ಆರೋಪ: ಎಸಿಬಿಗೆ ದೂರು ನೀಡಿದ ಕಾಂಗ್ರೆಸ್ ಪ್ರಚಾರ ಸಮಿತಿ

ನಗರದ ಬಹುತೇಕ ಹೋಟೆಲ್, ಪಬ್ - ಬಾರ್​ಗಳು ಕ್ರಿಸ್ಮಸ್, ಹೊಸ ವರ್ಷದ ಸಮಯದಲ್ಲಿ ವಿವಿಧ ರೀತಿಯ ಪಾರ್ಟಿಗಳನ್ನು ಆಯೋಜಿಸಿ, ಒಂದೇ ದಿನಕ್ಕೆ ಉತ್ತಮ ಲಾಭಗಳಿಸುತ್ತಿದ್ದರು. ಇದೀಗ ರಾಜ್ಯ ಸರ್ಕಾರದ ಚಿಂತನೆಗೆ ಇವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಗರದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್, ಪಬ್ ಹೋಟೆಲ್​ಗಳಲ್ಲಿ ಹೊಸ ವರ್ಷ ಆಚರಣೆಯಿಂದ ಕೋವಿಡ್ ಹರಡುವ ಸಂಭವ ಕಡಿಮೆ ಇದೆ. ರಾಜ್ಯ ಸರ್ಕಾರ ಹಬ್ಬದ ಆಚರಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.