ಬೆಂಗಳೂರು: ಕಳೆದ ಒಂದೂವರೆ ತಿಂಗಳಿಂದ ರಾಜ್ಯದೆಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿತ್ತು. ನಾಳೆಯಿಂದ ಅನ್‌ಲಾಕ್ ಆರಂಭವಾಗಿದ್ದು, ಆಟೋ ಹಾಗೂ ಟ್ಯಾಕ್ಸಿಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಹಲವು ನಿಬಂಧನೆಗಳನ್ನೂ ವಿಧಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಚಾಲಕರ ಕಷ್ಟಗಳನ್ನು ಅರಿತು ಸಹಾಯ ಮಾಡಬೇಕೆಂದು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಮನವಿ ಮಾಡಿದ್ದಾರೆ.
ದಿನದ ದುಡಿಮೆ ಮೇಲೆ ಅವಲಂಬಿತವಾಗಿರುವ ವರ್ಗ ಇದಾಗಿದ್ದು, ಸಂಪೂರ್ಣವಾಗಿ ಒಬ್ಬರ ಮೇಲೆಯೇ ಮನೆ ನಡೆಯುತ್ತಿದೆ. ಹೀಗಿರುವಾಗ ಕಳೆದ ಒಂದೂವರೆ ತಿಂಗಳಿಂದ ಚಾಲಕರು ದುಡಿಮೆ ಇಲ್ಲದೇ ಮನೆಯಲ್ಲೆ ಕುಳಿತಿದ್ದಾರೆ. ಕಳೆದ ವರ್ಷವೂ ಇದೇ ಸಮಯದಲ್ಲಿ ಲಾಕ್‌ಡೌನ್ ಆಗಿದ್ದು, ಇದೇ ಸಂಕಷ್ಟ ಎದುರಿಸಿದ್ದಾರೆ. ಮತ್ತು ಅನ್‌ಕಾಲ್ ಪ್ರಕ್ರಿಯೆ ಆರಂಭವಾದಾಗಲೂ ಆಟೋ- ಟ್ಯಾಕ್ಸಿ ಚಾಲಕರ ದುಡಿಮೆಯಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ.
ಹೀಗಾಗಿ ಸರ್ಕಾರ ಇವರ ಮೇಲೆ ಗಮನಹರಿಸಿ ಸಾಲದ ಹೊರೆ ಕಡಿಮೆ ಮಾಡಬೇಕು. ಸಾಲದ ಬಡ್ಡಿ ದರವನ್ನು ಕಡಿತಗೊಳಿಸಬೇಕು ಎಂದು ತನ್ವೀರ್ ಮನವಿ ಮಾಡಿದ್ದಾರೆ.