ಬೆಂಗಳೂರು: ಅನ್ಲಾಕ್ 2ನೇ ಹಂತದಲ್ಲಿ ಜೂ. 8 ರಿಂದ ಹೋಟೆಲ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು, ಕೆಲ ಮುಂಜಾಗ್ರತಾ ಕ್ರಮಗಳನ್ನು ವಿಧಿಸಿದೆ.
ಹೋಟೆಲ್ ತೆರೆಯುವುದಕ್ಕೆ ಪಾಲಿಸಬೇಕಾದ ಮುಂಜಾಗೃತಾ ಕ್ರಮಗಳು ಹೀಗಿವೆ:
- ಹೋಟೆಲ್ ಒಳಗೆ 6 ಅಡಿ ಅಂತರ ಕಾಪಾಡಬೇಕು.
- ಮಾಸ್ಕ್ ಧರಿಸುವುದು ಕಡ್ಡಾಯ.
- ಕೈ ತೊಳೆಯುವುದಕ್ಕೆ ಸಾಬೂನು ಹಾಗೂ ಸ್ಯಾನಿಟೈಸರ್ ಇರಬೇಕು.
- ಶೇ. 50 ಆಸನದ ವ್ಯವಸ್ಥೆ ಮೀರಬಾರದು.
- ಕೈ ತೊಳೆದ ಮೇಲೆ ಟಿಶ್ಯು ಬಳಕೆ ಮಾಡಬೇಕು, ಬಟ್ಟೆಯ ಟವೆಲ್ ಬೇಡ
- ವಾಲೆಟ್ ಪಾರ್ಕಿಂಗ್ ಸಿಬ್ಬಂದಿ ಮಾಸ್ಕ್ ಧರಿಸಿ, ಸ್ಟ್ರೇರಿಂಗ್ ಗೇರ್ಗಳನ್ನು ರೋಗ ನಿರೋಧಕ ದ್ರಾವದಿಂದ ಸ್ವಚ್ಛಗೊಳಿಸಬೇಕು.
- ಏಸಿ ಬಳಕೆ 24 ಡಿಗ್ರಿಯಿಂದ 30 ಡಿಗ್ರಿ ಇರಬೇಕು ಹಾಗೂ ನೈಸರ್ಗಿಕ ಗಾಳಿಗೆ ಹೆಚ್ಚು ಒತ್ತು ನೀಡಬೇಕು.
- ಸಮಯಕ್ಕೆ ಸರಿಯಾಗಿ ಹೋಟೆಲ್ ಡೋರ್ ಹಾಗೂ ಶೌಚಾಲಯಗಳನ್ನು ಶುಚಿಗೊಳಿಸಬೇಕು.
ಈ ಕ್ರಮಗಳನ್ನು ಹೊರತುಪಡಿಸಿ ಎಂದಿನಂತೆ ಮುಂಜಾಗೃತಾ ಕ್ರಮಗಳನ್ನು ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರು ವಹಿಸಬೇಕಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್ ಹಾಗೂ ಲಿಫ್ಟ್ ಬದಲು ಮೆಟ್ಟಿಲನ್ನು ಬಳಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಹೋಟೆಲ್ಗಳಲ್ಲಿ ಯಾರಿಗಾದರೂ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಸರ್ಕಾರ ನೀಡಿರುವ ಕ್ರಮ ಪಟ್ಟಿಯಲ್ಲಿ ಸ್ಪಷ್ಟಪಡಿಸಿದೆ.