ಬೆಂಗಳೂರು : ಜುಲೈಯಲ್ಲಿ ಉಂಟಾದ ಅತಿವೃಷ್ಟಿ, ಪ್ರವಾಹದಿಂದ ನೀರು ನುಗ್ಗಿದ ಮನೆಗಳ ಗೃಹೋಪಯೋಗಿ ವಸ್ತುಗಳು ಮತ್ತು ಮನೆಗಳು ಹಾನಿಯಾದಂಥ ಸಂತ್ರಸ್ತ ಕುಟುಂಬಗಳಿಗೆ ನೀಡಲಾಗುವ ಪರಿಹಾರ ದರವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಈ ಕೆಳಕಂಡಂತೆ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.
ಜುಲೈನಲ್ಲಿ ಬಿದ್ದ ಭಾರೀ ಮಳೆಯಿಂದ ರಾಜ್ಯದ ಹಲವೆಡೆ ಅತಿವೃಷ್ಟಿಯಿಂದ ಜಾನುವಾರು, ಮನೆ, ಬೆಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅತಿವೃಷ್ಟಿ ಪ್ರವಾಹದಿಂದ ಮನೆ ಹಾನಿ ಹಾಗೂ ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರದ ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಪರಿಷ್ಕೃತ ದರದಂತೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪರಿಷ್ಕೃತ ದರ ಹೀಗಿದೆ :
ಗೃಹೋಪಯೋಗಿ ವಸ್ತು, ಬಟ್ಟೆ ಬರೆ ಹಾನಿ - 10,000 ರೂ.
75%ಗಿಂತ ಹೆಚ್ಚಿನ ಮನೆ ಹಾನಿ- 5 ಲಕ್ಷ ರೂ.
25%-75%ರಷ್ಟು ತೀವ್ರ ಮನೆ ಹಾನಿ - 5 ಲಕ್ಷ ರೂ.
25%-75%ರಷ್ಟು ಮನೆಹಾನಿ (ದುರಸ್ತಿ)- 3 ಲಕ್ಷ ರೂ.
ಭಾಗಶಃ ಮನೆ ಹಾನಿ - 50,000 ರೂ.
ಇದನ್ನೂ ಓದಿ: MLA ಕಾರಿಗೆ ಬೆಂಕಿ ಪ್ರಕರಣ- ಮೂವರ ಬಂಧನ: ಕೃತ್ಯಕ್ಕೆ ಕಾರಣವಾಯ್ತು ಶಾಸಕರ ಶ್ರೀಮಂತಿಕೆ!