ETV Bharat / state

ಸರ್ಕಾರಿ ಉಪಕರಣಾಗಾರ- ತರಬೇತಿ ಕೇಂದ್ರದ ಟೆಂಡರ್​ನಲ್ಲಿ ಅಕ್ರಮ : ಕಾಂಗ್ರೆಸ್ ಗಂಭೀರ ಆರೋಪ - ಮಾಜಿ ಸಂಸದ ವಿ.ಎಸ್ ಉಗ್ರಪ್ಪ

ಹಿಂದೆ ಕೂಡ ಲ್ಯಾಪ್​​ಟಾಪ್ ಖರೀದಿಯಲ್ಲಿ ಅಕ್ರಮದ ಬಗ್ಗೆ ನಾವು ಸದನದಲ್ಲೂ ಧ್ವನಿ ಎತ್ತಿದ್ದೆವು. ನಮ್ಮ ಸರ್ಕಾರ ಇದ್ದಾಗ ವಿದ್ಯಾರ್ಥಿಗಳಿಗೆ ನೀಡಲು 18 ಸಾವಿರದಲ್ಲಿ ಏಸರ್ ಕಂಪನಿ ಲ್ಯಾಪ್‌ಟಾಪ್ ಖರೀದಿ ಮಾಡಿದ್ದೆವು. ಇದೇ ಅಶ್ವತ್ಥ್ ನಾರಾಯಣ ಬಂದಾಗ ಅದೇ ಕಂಪನಿ ಲ್ಯಾಪ್‌ಟಾಪ್​ಗೆ 28 ಸಾವಿರ ರೂ. ಹಣ ಕೊಟ್ಟು 1 ಲಕ್ಷ ಯುನಿಟ್ ಖರೀದಿ ಮಾಡಿದ್ದಾರೆ..

VS Ugrappa
ಮಾಜಿ ಸಂಸದ ವಿ.ಎಸ್ ಉಗ್ರಪ್ಪ
author img

By

Published : Sep 11, 2021, 7:44 PM IST

Updated : Sep 11, 2021, 7:58 PM IST

ಬೆಂಗಳೂರು : ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ)ದ ಟೆಂಡರ್​​ನಲ್ಲಿ ಕೋಟ್ಯಂತರ ರೂ. ಮೊತ್ತದ ಅವ್ಯವಹಾರ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈ ಬಗ್ಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಸಚಿವ ಅಶ್ವತ್ಥ ನಾರಾಯಣ​ ಸಂಬಂಧಿ ಜಿಟಿಟಿಸಿ ಎಂಡಿ ಹೆಚ್ ರಾಘವೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ. ಜಿಟಿಟಿಸಿಯಲ್ಲಿ ಉಪಕರಣ ಖರೀದಿಗೆ ₹60 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ.

ಒಟ್ಟು 8 ಟೆಂಡರ್​​ಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಇದಲ್ಲದೇ ಇನ್ನು 8 ಟೆಂಡರ್​ಗಳು ಬಹುತೇಕ ಅಂತಿಮ ಹಂತದಲ್ಲಿವೆ. ಇವು ಸಹ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಮೊತ್ತ ಕೂಡ 40 ಕೋಟಿ ರೂ. ಮೀರಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಉಪಕರಣಾಗಾರ-ತರಬೇತಿ ಕೇಂದ್ರ ಟೆಂಡರ್​ನಲ್ಲಿ ಅಕ್ರಮ : ಕಾಂಗ್ರೆಸ್ ಗಂಭೀರ ಆರೋಪ

1 ಕೋಟಿಗೂ ಅಧಿಕ ಮೊತ್ತದ ಬಿಡ್‌ಗಳಿಗೆ ಪ್ರಿಬಿಡ್ ಮೀಟಿಂಗ್ ಕರೆಯಬೇಕು. ಆದರೆ, 8 ಟೆಂಡರ್​​ಗಳು ಅದಕ್ಕಿಂತ ದೊಡ್ಡ ಮಟ್ಟದ್ದಾಗಿವೆ. ಟೆಂಡರ್ ಪೂರ್ವ ಸಭೆ ಕರೆಯದೇ ಅಂತಿಮಗೊಳಿಸಲಾಗಿದೆ. ಕೇವಲ 2 ಕಂಪನಿಗಳು ಮಾತ್ರ ಟೆಂಡರ್​ನಲ್ಲಿ ಭಾಗವಹಿಸಿದ್ದರೂ, ರೀ ಟೆಂಡರ್ ಮಾಡದೇ ಖರೀದಿ ಮಾಡಲು ಅವಕಾಶ ನೀಡಲಾಗಿದೆ.

ಲ್ಯಾಪ್​​ಟಾಪ್ ಖರೀದಿಯಲ್ಲೂ ಅಕ್ರಮ ಆರೋಪ : 2019ರಲ್ಲಿ ಒಂದು ಸಿಎನ್​​ಸಿ ಮಷಿನ್​​ಗೆ ₹28 ಲಕ್ಷ ನೀಡಿ ಖರೀದಿ ಮಾಡಿದ್ದಾರೆ. 2020ರಲ್ಲಿ ಸಿಎನ್​​ಸಿ ಮಷಿನ್​ಗೆ 31ಲಕ್ಷ‌ ರೂ. ಕೊಟ್ಟು ಖರೀದಿಸಲಾಗಿದೆ. ಅದೇ ಮಷಿನ್​ಗೆ ಜಿಟಿಟಿಸಿಯಿಂದ 99 ಲಕ್ಷ ರೂ. ಕೊಟ್ಟು ಸಿಎನ್​ಸಿ ಮಷಿನ್ ಖರೀದಿ ಮಾಡಲಾಗಿದೆ.

ಅಕ್ರಮ ಟೆಂಡರ್ ನಡೆಸಲು ಟೆಂಡರ್ ನಿಯಮಗಳನ್ನು ಮುಚ್ಚಿಟ್ಟು ಪ್ರಕ್ರಿಯೆ ನಡೆಸಲಾಗಿದೆ. ಅಶ್ವತ್ಥ ನಾರಾಯಣ​​ ಯಾಕೆ ರೈಲ್ವೆ ಇಲಾಖೆಯಿಂದ ರಾಘವೇಂದ್ರ ಅವರನ್ನು ಇಲಾಖೆಗೆ ಕರೆಸಿಕೊಂಡರು? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಸದನದಲ್ಲಿ ಧ್ವನಿ ಎತ್ತಿದ್ದೆವು

ಹಿಂದೆ ಕೂಡ ಲ್ಯಾಪ್​​ಟಾಪ್ ಖರೀದಿಯಲ್ಲಿ ಅಕ್ರಮದ ಬಗ್ಗೆ ನಾವು ಸದನದಲ್ಲೂ ಧ್ವನಿ ಎತ್ತಿದ್ದೆವು. ನಮ್ಮ ಸರ್ಕಾರ ಇದ್ದಾಗ ವಿದ್ಯಾರ್ಥಿಗಳಿಗೆ ನೀಡಲು 18 ಸಾವಿರದಲ್ಲಿ ಏಸರ್ ಕಂಪನಿ ಲ್ಯಾಪ್‌ಟಾಪ್ ಖರೀದಿ ಮಾಡಿದ್ದೆವು. ಇದೇ ಅಶ್ವತ್ಥ ನಾರಾಯಣ ಬಂದಾಗ ಅದೇ ಕಂಪನಿ ಲ್ಯಾಪ್‌ಟಾಪ್​ಗೆ 28 ಸಾವಿರ ರೂ. ಹಣ ಕೊಟ್ಟು 1 ಲಕ್ಷ ಯುನಿಟ್ ಖರೀದಿ ಮಾಡಿದ್ದಾರೆ ಎಂದಿದ್ದಾರೆ.

ಎಲ್‌ ಅಂಡ್​ ಟಿ ಟೆಕ್ವಿಪ್‌ಮೆಂಟ್ ಖರೀದಿ ಮಾರುಕಟ್ಟೆ ಮೌಲ್ಯ ₹4.50 ಕೋಟಿ. ಆದರೆ, ಖರೀದಿಸಿರುವುದು 9.48 ಕೋಟಿ ರೂಪಾಯಿಗೆ. ಅಕ್ಯುರಾ ಟೆಕ್ವಿಪ್‌ಮೆಂಟ್ ಖರೀದಿಯಲ್ಲೂ ಅವ್ಯವಹಾರ ಆಗಿದೆ. ಟೆಂಡರ್​​ನಲ್ಲಿ ಭಾಗಿಯಾದವರು ಉತ್ಪಾದನೆ ಮಾಡುವವರಲ್ಲ.

ನಿರಂತರವಾಗಿ ಪೂರೈಕೆ ಮಾಡುವವರೂ ಅಲ್ಲ. ಹಾಗಾದರೆ, ಇಂಥವರಿಗೆ ಟೆಂಡರ್ ಕೊಟ್ಟಿದ್ದೇಕೆ? ಪಾರದರ್ಶಕ ಟೆಂಡರ್ ಕಾಯ್ದೆ ಅನ್ವಯವಾಗಿಲ್ಲ. ಮೋದಿ ತಿನ್ನೋಕೆ ಬಿಡಲ್ಲ ಅಂತಾರೆ. ಆದರೆ, ತರಬೇತಿ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉಗ್ರಪ್ಪ ಆರೋಪಿಸಿದ್ದಾರೆ.

ಇದನ್ನೂ ಓದಿ: ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ... ಬಿಜೆಪಿಗೆ ಹಿಂದುತ್ವ ರಕ್ಷಣೆಯ ನೆ‌ನಪಾಗಲಿಲ್ಲವೇ?: ಸಿದ್ದರಾಮಯ್ಯ ಕಿಡಿ

Last Updated : Sep 11, 2021, 7:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.