ETV Bharat / state

ಗುಡ್​ನ್ಯೂಸ್​: ನಿಗಾದಲ್ಲಿರುವ 43 ಸಾವಿರ ಜನರಲ್ಲಿ 33 ಸಾವಿರ ಜನ ಬಹುತೇಕ ಸೇಫ್ ?

ರಾಜ್ಯದಲ್ಲಿ ಕೊರೊನಾ ಸೋಂಕು ಶಂಕೆಯಿಂದ ಪ್ರತ್ಯೇಕವಾಗಿ ಇರಿಸಲ್ಪಟ್ಟ 42,929 ಜನರಲ್ಲಿ 33,033 ಜನ 14 ದಿನಗಳ ನಿಗಾ ಸಮಯವನ್ನು ಪೂರ್ಣಗೊಳಿಸಿದ್ದು, ಅರ್ಧ ಅವಧಿ ಮುಗಿಸಿದ್ದಾರೆ. ಕೊರೊನಾ ಶಂಕಿತರಿಗೆ ಎಲ್ಲಾ ಕಡೆ 14 ದಿನಗಳ ಕ್ವಾರಂಟೈನ್ ಇದ್ದರೆ, ನಮ್ಮ ರಾಜ್ಯದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಅದನ್ನು 28 ದಿನಕ್ಕೆ‌ ನಿಗದಿಪಡಿಸಲಾಗಿದೆ. ಹಾಗಾಗಿ ಬಹುತೇಕ ಈ ಎಲ್ಲರೂ ಸೋಂಕಿನಿಂದ ಮುಕ್ತಾವಾಗುವುದು ಖಚಿತವಾಗಿದೆ. ಇನ್ನು 2,502 ಜನರು 28 ದಿನಗಳ ನಿಗಾ ಮುಗಿಸಿದ್ದು, ಸೋಂಕಿನಿಂದ ಪಾರಾಗಿದ್ದಾರೆ ಎನ್ನುವ ಸಂತಸದ ಸುದ್ದಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ.

ಕೊರೊನಾ
ಕೊರೊನಾ
author img

By

Published : Mar 30, 2020, 10:13 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿ ಮುಟ್ಟುವ ಸನಿಹಕ್ಕೆ ತಲುಪಿರುವ ನಡುವೆಯೇ ಆರೋಗ್ಯ ಇಲಾಖೆ ಸಂತಸದ ಸುದ್ದಿ ನೀಡಿದೆ, 33 ಸಾವಿರ ಜನ 14 ದಿನಗಳ ನಿಗಾ ಮುಗಿಸಿದ್ದು, 2.5 ಸಾವಿರ ಜನ 28 ದಿನಗಳ ನಿಗಾ ಪೂರ್ಣಗೊಳಿಸಿದ್ದಾರೆ ಎನ್ನುವ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಶಂಕೆಯಿಂದ ಪ್ರತ್ಯೇಕವಾಗಿ ಇರಿಸಲ್ಪಟ್ಟ 42,929 ಜನರಲ್ಲಿ 33,033 ಜನ 14 ದಿನಗಳ ನಿಗಾ ಸಮಯವನ್ನು ಪೂರ್ಣಗೊಳಿಸಿದ್ದು ಅರ್ಧ ಅವಧಿ ಮುಗಿಸಿದ್ದಾರೆ. ಕೊರೊನಾ ಶಂಕಿತರಿಗೆ ಎಲ್ಲ ಕಡೆ 14 ದಿನಗಳ ಕ್ವಾರಂಟೈನ್ ಇದ್ದರೆ, ನಮ್ಮ ರಾಜ್ಯದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಅದನ್ನು 28 ದಿನಕ್ಕೆ‌ ನಿಗದಿಪಡಿಸಲಾಗಿದೆ. ಹಾಗಾಗಿ ಬಹುತೇಕ ಈ ಎಲ್ಲರೂ ಸೋಂಕಿನಿಂದ ಮುಕ್ತವಾಗುವುದು ಖಚಿತವಾಗಿದೆ. ಇನ್ನು 2,502 ಜನರು 28 ದಿನಗಳ ನಿಗಾ ಮುಗಿಸಿದ್ದು ಸೋಂಕಿನಿಂದ ಪಾರಾಗಿದ್ದಾರೆ ಎನ್ನುವ ಸಂತಸದ ಸುದ್ದಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ.

ಕೊರೊನಾ ಶಂಕೆ ಹಿನ್ನೆಲೆ ಇಂದು ಹೊಸದಾಗಿ‌ 456 ಜನರನ್ನು ಅವಲೋಕನಕ್ಕಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನಕ್ಕೆ ಒಳಪಟ್ಟವರ ಸಂಖ್ಯೆ 42,929ಕ್ಕೆ ತಲುಪಿದೆ. 14 ದಿನಗಳ ನಿಗಾ ಇಂದು ಪೂರ್ಣಗೊಳಿಸಿದವರ ಸಂಖ್ಯೆ 2,585 ಆಗಿದ್ದು ಈವರೆಗೆ 33,033 ಜನ ಪೂರ್ಣಗೊಳಿಸಿದಂತಾಗಿದೆ. 28 ದಿನಗಳ ನಿಗಾ ಇಂದು‌ ಪೂರ್ಣಗೊಳಿಸಿದವರ ಸಂಖ್ಯೆ 133 ಆಗಿದ್ದು‌ ಈವರೆಗೆ 2,502 ಜನ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

Good news from health department
ಆರೋಗ್ಯ ಇಲಾಖೆಯ ಕೊರೊನಾ ಬುಲ್ಲೆಟಿನ್​

ಇಂದು 790 ಜನರಿಗೆ ಹೋಂ ಕ್ವಾರಂಟೈನ್ ಸ್ಟಾಂಪ್ ಮಾಡಿದ್ದು, ಈವರೆಗೆ 23,152 ಜನರಿಗೆ ಸ್ಟ್ಯಾಂಪ್ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ‌ ಇಂದು‌ 40 ಜನರನ್ನು ಇರಿಸಿದ್ದು ಒಟ್ಟು 193 ಜನರನ್ನು ಐಸೋಲೇಷನ್​ನಲ್ಲಿ ಇರಿಸಿದಂತಾಗಿದೆ. ಇಂದು 172 ಜನರ ಮಾದರಿ ಸಂಗ್ರಹ ಮಾಡಿದ್ದು‌ ಈವರೆಗೆ 3,243 ಮಾದರಿ ಸಂಗ್ರಹ ಮಾಡಿದಂತಾಗಿದೆ. ಇಂದು 207 ವರದಿಗಳು ಕೊರೊನಾ ನೆಗಟಿವ್ ಬಂದಿದ್ದು ಈವರೆಗೆ 3,025 ವರದಿ ನೆಗಟಿವ್ ಬಂದಿದೆ. ಇಂದು 5 ವರದಿ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 88ಕ್ಕೆ ತಲುಪಿದೆ.

ಯಾವ ಆಸ್ಪತ್ರೆಯಲ್ಲಿ ಎಷ್ಟು ಶಂಕಿತರು:

ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 5 ,ಬೆಂಗಳೂರಿನ ಇತರ ಆಸ್ಪತ್ರೆಯಲ್ಲಿ 20, ದಕ್ಷಿಣ ಕನ್ನಡದಲ್ಲಿ 33, ಬಳ್ಳಾರಿ 10, ಕಲಬುರಗಿ 33, ಕೊಡಗು 1, ಉಡುಪಿಯಲ್ಲಿ 23, ಬೀದರ್ 10, ಗದಗ 6, ಉತ್ತರ ಕನ್ನಡ 10, ಧಾರವಾಡ 4, ಹಾಸನ 3, ಚಾಮರಾಜನಗರ 0, ಚಿತ್ರದುರ್ಗ 1, ದಾವಣಗೆರೆ 4, ಮೈಸೂರು 12, ರಾಯಚೂರು 0, ಶಿವಮೊಗ್ಗ 4, ಮಂಡ್ಯ 0, ತುಮಕೂರು 34, ಚಿಕ್ಕಮಗಳೂರು 0, ಚಿಕ್ಕಬಳ್ಳಾಪುರ 8, ವಿಜಯಪುರ 3, ಯಾದಗಿರಿ 1, ಬಾಗಲಕೋಟೆ 1 ಸೇರಿ ಒಟ್ಟು 226 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು 51 ಜನರನ್ನು ಬಿಡುಗಡೆಗೊಳಿಸಲಾಗಿದೆ. ಇನ್ನು 49 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.

ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು‌ 1,28,274 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು‌ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಗೆ ಸಹಕರಿಸಿ ಎಂದು ಮನವಿ ಮಾಡಿದೆ.

ಜನರು ನೀಡುವ ದೂರುಗಳನ್ನು ಆಧರಿಸಿ ಹೋಂ ಕ್ವಾರಂಟೈನ್ ಜಾರಿ ಪಡೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದವರನ್ನು ನಿಗದಿತ ಸಂಸ್ಥೆಗಳಲ್ಲಿನ ಕ್ವಾರಂಟೈನ್​ಗೆ ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದೆ. ಹೊಸದಾಗಿ 22 ಜನರನ್ನು ಸ್ಥಳಾಂತರ ಮಾಡಲಾಗಿದೆ. ಈವರೆಗೂ 144 ಜನರನ್ನು ಈ ರೀತಿ ಸ್ಥಳಾಂತರ ಮಾಡಿದಂತಾಗಿದೆ.

ಇನ್ನು ಕ್ವಾರಂಟೈನ್ ನಂತಹ ಪ್ರತ್ಯೇಕ ವ್ಯವಸ್ಥೆಯಲ್ಲಿ ಸುದೀರ್ಘ ಕಾಲ ಸಂಯಮದಿಂದ ಇರಲು ಮಾನಸಿಕ ಸ್ಥೈರ್ಯದ ಅಗತ್ಯವಿದ್ದು, ಅಂತಹ 1,029 ರೋಗಿಗಳಿಗೆ ಮತ್ತು ಸಂಪರ್ಕಿತರಿಗೆ ಹೊಸದಾಗಿ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆ ನಡೆಸಲಾಗಿದೆ. ಇಲ್ಲಿಯವರೆಗೆ ಒಟ್ಟು 13,687 ಜನರಿಗೆ ಕೌನ್ಸೆಲಿಂಗ್ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.