ETV Bharat / state

ಹಾಜರಾತಿ ಕೊರತೆಯಿಂದ SSLC ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! - ಮುಖ್ಯ ಪರೀಕ್ಷೆಯಿಂದ ಹೊರಗುಳಿದಿರುವ ವಿದ್ಯಾರ್ಥಿ

ಹಾಜರಾತಿ ಕೊರತೆಯಿಂದ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿಹಿ ಸುದ್ದಿ ಕೊಟ್ಟಿದೆ.

SSLC exam due to lack of attendance  Good news for those students  who did not write the SSLC exam  ಎಸ್ಎಸ್ಎಲ್ಸಿ ಪರೀಕ್ಷೆ ಬರೆಯದ ವಿದ್ಯಾರ್ಥಿ  ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್  ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ಕಡಿಮೆ ಹಾಜರಾತಿ ಕಾರಣ  ಮುಖ್ಯ ಪರೀಕ್ಷೆಯಿಂದ ಹೊರಗುಳಿದಿರುವ ವಿದ್ಯಾರ್ಥಿ  ವಿದ್ಯಾರ್ಥಿಗಳಿಂದ ಸ್ವೀಕರಿಸಿದ ನೋಂದಣಿ ಶುಲ್ಕ
ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ
author img

By

Published : May 24, 2023, 11:01 AM IST

ಬೆಂಗಳೂರು: ಕಡಿಮೆ ಹಾಜರಾತಿ ಕಾರಣದಿಂದಾಗಿ ಎಸ್ಎಸ್ಎಲ್​ಸಿ ಮುಖ್ಯ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶಿಸಿದೆ. ಕೂಡಲೇ ಅಂತಹ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

2022 -23ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿಕೊಂಡು ನಿಯಮಾನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕೊರತೆಯಿಂದಾಗಿ ರಾಜ್ಯಾದ್ಯಂತ ಅಂದಾಜು 26,900 ವಿದ್ಯಾರ್ಥಿಗಳ ನೋಂದಣಿಯನ್ನು ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ರದ್ದುಪಡಿಸಿದ್ದರು. ಹೀಗಾಗಿ, 2022 -23ನೇ ಸಾಲಿನ ಮುಖ್ಯ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಠಿಯಿಂದ ಹಾಗೂ ಸದರಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗದಿಂದ ವಂಚಿತರಾಗದಂತೆ ಕ್ರಮ ವಹಿಸುವ ಸಲುವಾಗಿ ಇಂತಹ ವಿದ್ಯಾರ್ಥಿಗಳಿಗೆ ಮಾತ್ರ ಜೂನ್ 2023ರಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ನೋಂದಾಯಿಸಲು ಅವಕಾಶ ನೀಡಲಾಗಿದೆ.

ಜೂನ್ 2023 ರ ಪೂರಕ ಪರೀಕ್ಷೆಯು ಈ ಅಭ್ಯರ್ಥಿಗಳಿಗೆ ಪ್ರಥಮ ಪ್ರಯತ್ನವಾಗಿದ್ದು, ಉತ್ತೀರ್ಣರಾಗಲು ಈ ಪರೀಕ್ಷೆಯಿಂದ ಸತತ ಆರು ಪ್ರಯತ್ನಗಳ ಅವಕಾಶ ಕಲ್ಪಿಸಲಾಗಿರುತ್ತದೆ. ಈ ವಿದ್ಯಾರ್ಥಿಗಳು ಮಾರ್ಚ್ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ. ಆದ್ದರಿಂದ ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗಲು ನೋಂದಣಿ ಶುಲ್ಕ ರೂ. 205/ ಮಾತ್ರ ಪಾವತಿಸಿಬೇಕಿದೆ. ಈ ವಿದ್ಯಾರ್ಥಿಗಳ ನೋಂದಣಿಗೆ ದಿ: 23.05.2023 ರಿಂದ 26.05.2023 ರವರೆಗೆ ಅವಕಾಶವಿದೆ.

ವಿದ್ಯಾರ್ಥಿಗಳಿಂದ ಸ್ವೀಕರಿಸಿದ ನೋಂದಣಿ ಶುಲ್ಕವನ್ನು ಮಂಡಳಿಯ NEFT ಚಲನ್‌ನಲ್ಲಿ ಭರ್ತಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಜಮೆ ಮಾಡಲು ದಿ: 27.05.2023 ರಿಂದ 29.05.2023ರ ವರೆಗೆ ಅವಕಾಶವಿದೆ. ಮಂಡಳಿ ಜಾಲತಾಣದ ಶಾಲಾ ಲಾಗಿನ್​ನಲ್ಲಿ ಇಂತಹ ಅರ್ಹ ವಿದ್ಯಾರ್ಥಿಗಳನ್ನು ಕೂಡಲೇ ನಿಯಮಾನುಸಾರ ನೋಂದಾಯಿಸಿ ಮತ್ತು ನೋಂದಣಿ ಶುಲ್ಕವನ್ನು ಬ್ಯಾಂಕಿಗೆ ಪಾವತಿಸುವುದು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಜವಾಬ್ದಾರಿ. ಅಂತಿಮ ದಿನಾಂಕದ ನಂತರ ನೋಂದಣಿಗೆ ಅವಕಾಶವಿಲ್ಲ. ಒಂದು ವೇಳೆ ಅಂತಿಮ ದಿನಾಂಕದ ನಂತರವೂ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ನೋಂದಣಿ ಮತ್ತು ಶುಲ್ಕ ಪಾವತಿ ಕುರಿತ ವಿವರವಾದ ಸುತ್ತೋಲೆ ಮಂಡಳಿ ಜಾಲತಾಣದಲ್ಲಿ ಲಭ್ಯವಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆಗಳ ವಿಭಾಗದ ನಿರ್ದೇಶಕ ಹೆಚ್.​ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ಬಡತನ ಮಧ್ಯೆಯೂ ಧೃತಿಗೆಡದೇ ಯಶಸ್ಸು ಸಾಧಿಸಿದ ಮುದ್ದೇಬಿಹಾಳ ತಾಂಡಾದ ಯಲಗೂರೇಶ ನಾಯಕ: ಯುಪಿಎಸ್​ಸಿಯಲ್ಲಿ 890ನೇ ರ‍್ಯಾಂಕ್

ಪೂರಕ ಪರೀಕ್ಷೆಯ ವೇಳಾಪಟ್ಟಿ: ಸೋಮವಾರ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಜೂನ್ 12 ರಿಂದ ಜೂನ್ 19ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

ಜೂನ್ 12 ರಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯಲಿದೆ. 13 ರಂದು ಕೋರ್ ವಿಷಯಗಳಾದ ವಿಜ್ಞಾನ ಮತ್ತು ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆ ನಡೆಯಲಿದೆ. ಜೂನ್ 14 ರ ಬುಧವಾರ ದ್ವಿತೀಯ ಭಾಷೆ ಇಂಗ್ಲಿಷ್, ಜೂನ್ 15 ರಂದು ಕೋರ್ ವಿಷಯ ಸಮಾಜ ವಿಜ್ಞಾನ, ಜೂನ್ 16 ರಂದು ಹಿಂದಿ, ಜೂನ್ 17ರಂದು ಕೋರ್ ವಿಷಯಗಳಾದ ಗಣಿತ ಮತ್ತು ಸಮಾಜಶಾಸ್ತ್ರ, ಜೂನ್ 19 ರಂದು ಅರ್ಥಶಾಸ್ತ್ರ ಸೇರಿದಂತೆ ಇತರ ಕೋರ್ ವಿಷಯಗಳ ಪರೀಕ್ಷೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.