ETV Bharat / state

ದ್ವಿತೀಯ ಪಿಯುಸಿ ಪಾಸ್ ಔಟ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಡಿಜಿ ಲಾಕರ್​ನಲ್ಲಿ ಅಂಕಪಟ್ಟಿ ಲಭ್ಯ

ದ್ವಿತೀಯ ಪಿಯುಸಿ ಪಾಸ್ ಔಟ್ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿ ಲಾಕರ್​ನಲ್ಲಿ ಅಪ್ಲೋಡ್​​ ಮಾಡಲಾಗಿದೆ.

ಡಿಜಿ ಲಾಕರ್
ಡಿಜಿ ಲಾಕರ್
author img

By

Published : Jul 3, 2023, 10:29 PM IST

ಬೆಂಗಳೂರು : 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 5,24,128 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಅಂಕಪಟ್ಟಿಯನ್ನ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

2023ರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಜೂನ್ 26 ರಿಂದಲೇ ಡಿಜಿ ಲಾಕರ್​​ಗೆ ಅಪ್ಲೋಡ್​​ಗೆ ಮಾಡಲಾಗಿದೆ. ಹಾಗಾಗಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎನ್ಎಡಿ ಡಿಜಿಲಾಕರ್ ವೆಬ್ ಸೈಟ್ www.nad.digilocker.gov.in ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿದ ಮೊಬೈಲ್ ಗೆ ಬರುವ ಒಟಿಪಿ ನಮೂದಿಸಿ ಲಾಗಿನ್ ಆದ ನಂತರ 2023ರ ಮುಖ್ಯ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ಹಾಗೂ ಪರೀಕ್ಷೆ ಉತ್ತೀರ್ಣರಾದ ಅವಧಿ ನಮೂದಿಸಿ ತಮ್ಮ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ : ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ

ಇದೇ ಮಾದರಿಯಲ್ಲಿ ತಮ್ಮ ಮೊಬೈಲ್ ನಲ್ಲಿಯೂ ಸಹ ಡಿಜಿಲಾಕರ್ ಆ್ಯಪ್ ಬಳಸಿ ಆಧಾರ್ ಸಂಖ್ಯೆ ಮೂಲಕ ನೋಂದಾಯಿಸಿಕೊಂಡು ತಮ್ಮ ಡಿಜಿಲಾಕರ್ ಆ್ಯಪ್ ನಲ್ಲಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದ್ದು, 2023ರ ಮುಖ್ಯ ಪರೀಕ್ಷೆಯ ಹಾಗೂ ಪೂರಕ ಪರೀಕ್ಷೆಯ ಭೌತಿಕ ಅಂಕಪಟ್ಟಿಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದ್ದು, ಹೀಗಾಗಿ ತಮ್ಮ ವ್ಯಾಸಂಗ ಮಾಡಲಾಗಿದ್ದ ಕಾಲೇಜುಗಳಿಗೆ ತಲುಪಿಸಲಾಗುತ್ತದೆ ಎಂದು ಮಂಡಳಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಶೇ.32 ರಷ್ಟು ಫಲಿತಾಂಶ ಬಂದಿದ್ದು, ಇದರಲ್ಲೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

SSLC ಪೂರಕ ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ : ಜೂನ್ ತಿಂಗಳಿನಲ್ಲಿ ನಡೆದಿದ್ದ ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ಇಲಾಖೆಯ ಅಧಿಕೃತ ವೆಬ್​ಸೈಟ್ ಮೂಲಕ ತಾತ್ಕಾಲಿಕ ಅಂಕಪಟ್ಟಿ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 1,11,781 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 46,270 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ. 41.39ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ಅಧಿಕೃತ ವೆಬ್​ಸೈಟ್​ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಎಸ್ಎಂಎಸ್ ಮೂಲಕವೂ ವಿದ್ಯಾರ್ಥಿಗಳಿಗೆ ಫಲಿತಾಂಶ ಕಳುಹಿಸಿಕೊಡಲಾಗುತ್ತದೆ ಎಂದು ಮಂಡಳಿ ತಿಳಿಸಿತ್ತು.

ಇನ್ನೊಂದೆಡೆ ಹಾಜರಾತಿ ಕೊರತೆಯಿಂದಾಗಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಲಾದ ವಿದ್ಯಾರ್ಥಿಗಳ ಫಲಿತಾಂಶ ಕೂಡ ಪ್ರಕಟವಾಗಿತ್ತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 2,446 ಅಭ್ಯರ್ಥಿಗಳಲ್ಲಿ 2,020 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 108 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಶೇ.5.35ರಷ್ಟು ಫಲಿತಾಂಶ ಪ್ರಕಟವಾಗಿದೆ ಎಂದು ಮಂಡಳಿ ವಿವರಿಸಿತ್ತು.

ಇದನ್ನೂ ಓದಿ : SSLC ಪೂರಕ ಪರೀಕ್ಷಾ ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.