ಬೆಂಗಳೂರು: ಪರೀಕ್ಷೆ ಬರೆದು ಫಲಿತಾಂಶಕ್ಕೆ ಎದುರು ನೋಡುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಶುಭ ಕೋರಿದ್ದು ಉತ್ತೀರ್ಣ, ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ಸಲಹೆ ನೀಡಿದ್ದಾರೆ.
ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶದಲ್ಲಿ ಉತ್ತೀರ್ಣ, ಅನುತ್ತೀರ್ಣ ಎಲ್ಲವೂ ಇದ್ದದ್ದೆ. ಅವರವರ ಶ್ರಮಕ್ಕೆ ತಕ್ಕ ಫಲಿತಾಂಶ ಸಿಕ್ಕೇ ಸಿಗುತ್ತದೆ. ಈ ಫಲಿತಾಂಶ ಪ್ರಮುಖವಾಗಿದೆ, ಆದರೆ ಅದೇ ಅಂತಿಮವಲ್ಲ. ಅನುತ್ತೀರ್ಣರಾದವರಿಗೆ ಮತ್ತೆ ಅವಕಾಶವೂ ಇದೆ ಹಾಗಾಗಿ ಸಮಾನವಾಗಿ ಸ್ವೀಕರಿಸಿ ಎಂದು ಕರೆ ನೀಡಿದ್ದಾರೆ.
-
ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಅನಗತ್ಯ ಭಯ ಬೇಡ. ಉತ್ತೀರ್ಣ, ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ. ಬದುಕು ದೊಡ್ಡದಿದೆ. ಎಲ್ಲರಿಗೂ ಶುಭವಾಗಲಿ.#AllTheBest pic.twitter.com/7ah4DQ60IE
— B Sriramulu (@sriramulubjp) July 13, 2020 " class="align-text-top noRightClick twitterSection" data="
">ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಅನಗತ್ಯ ಭಯ ಬೇಡ. ಉತ್ತೀರ್ಣ, ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ. ಬದುಕು ದೊಡ್ಡದಿದೆ. ಎಲ್ಲರಿಗೂ ಶುಭವಾಗಲಿ.#AllTheBest pic.twitter.com/7ah4DQ60IE
— B Sriramulu (@sriramulubjp) July 13, 2020ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಅನಗತ್ಯ ಭಯ ಬೇಡ. ಉತ್ತೀರ್ಣ, ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ. ಬದುಕು ದೊಡ್ಡದಿದೆ. ಎಲ್ಲರಿಗೂ ಶುಭವಾಗಲಿ.#AllTheBest pic.twitter.com/7ah4DQ60IE
— B Sriramulu (@sriramulubjp) July 13, 2020
ಇನ್ನು ಯಾವುದೇ ಫಲಿತಾಂಶ ಬಂದರೂ ಫಲಿತಾಂಶದ ಬಗ್ಗೆ ಆತಂಕ, ಗಾಬರಿ ಬೇಡ. ಕೊರೊನಾ ಭಯದ ನಡುವೆ ಪರೀಕ್ಷೆ ಎದುರಿಸುವ ನಮಗೆಲ್ಲರಿಗೂ ಮುಂದೆ ಉತ್ತಮ ಭವಿಷ್ಯವಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.