ಬೆಂಗಳೂರು: ನಗರದ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಡೆದಿರುವ ಘಟನೆಯೊಂದು ಬೆಂಗಳೂರಿಗರಿಗೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಕುಮಾರ್ ಎಂಬಾತನ ಮನೆಗೆ ನುಗ್ಗಿದ್ದ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿ ಹೋಗಿದ್ದಾನೆ. ರಾತ್ರೋರಾತ್ರಿ ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಹಣ, ಚಿನ್ನಾಭರಣ ಕದ್ದೊಯ್ದಿದ್ದಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮನೆ ಮಾಲೀಕ ಕುಮಾರ್ ನೈಟ್ ಶಿಫ್ಟ್ ಅಂತಾ ಕೆಲಸಕ್ಕೆ ಹೋಗಿದ್ದರು. ಪ್ರತಿದಿನ ರಾತ್ರಿ 9.30ರ ಸುಮಾರಿಗೆ ಮನೆಯನ್ನು ಲಾಕ್ ಮಾಡಿ ಆಫೀಸ್ಗೆ ಹೋಗುತ್ತಾರೆ. ಅದರಂತೆ ಮೊನ್ನೆ ಕೂಡ ಕುಮಾರ್ ಮನೆ ಲಾಕ್ ಮಾಡಿ ಕಚೇರಿಗೆ ಹೋಗಿ ಬೆಳಗ್ಗೆ ಮರಳಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದಿದೆ.
ಮನೆಯ ಬಾಗಿಲನ್ನು ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದ್ದನ್ನು ತಿಳಿದು, ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆ ರಸ್ತೆ ಬಳಿ ಕಳ್ಳ ಓಡಾಡಿರೋ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ವಿಡಿಯೋ ಆಧರಿಸಿ ಆತನ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ರಸ್ತೆ ದಾಟುವಾಗ ಬಾಲಕನಿಗೆ ಡಿಕ್ಕಿ ಹೊಡೆದ ಮರಳಿನ ಟಿಪ್ಪರ್ : ಉದ್ರಿಕ್ತರಿಂದ ವಾಹನಕ್ಕೆ ಬೆಂಕಿ