ETV Bharat / state

ಬೆಂಗಳೂರಲ್ಲಿ ಇ-ಸಂಚಾರ ಸಾಫ್ಟ್​ವೇರ್ ಇಂಜಿನಿಯರಿಂಗ್​​ ಕೇಂದ್ರ ಆರಂಭಕ್ಕೆ ಜಿಕೆಎನ್​ ​- ಟಾಟಾ ಟೆಕ್ನಾಲಜಿಸ್ ತಯಾರಿ

2020ರ ಅಂತ್ಯದ ಒಳಗಾಗಿ 100ಕ್ಕೂ ಹೆಚ್ಚು ವಿಶ್ವದರ್ಜೆಯ ಸಾಫ್ಟ್​​ವೇರ್ ಇಂಜಿನಿಯರಿಂಗ್ ಪಟುಗಳು ಮತ್ತು ಬೆಂಬಲ ಸಿಬ್ಬಂದಿಯ ತಂಡವನ್ನು ರೂಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. 12,650 ಚದರ ಅಡಿ ವಿಸ್ತೀರ್ಣದ ಈ ಕೇಂದ್ರವು ಡಿಸೈನ್ ಸ್ಟುಡಿಯೊ, ಲ್ಯಾಬ್ ಸ್ಟೇಷನ್, ಮೀಟಿಂಗ್ ಮತ್ತು ಸಮ್ಮೇಳನ ಸಭಾಂಗಣ, ಸುಕ್ಷೇಮ ಕೇಂದ್ರವನ್ನು ಇದು ಒಳಗೊಂಡಿರಲಿದೆ.

GKN-TCS Preparation for E-Traffic Software Engineering Center Launch in Silicon City
ಸಿಲಿಕಾನ್ ಸಿಟಿಯಲ್ಲಿ ಇ-ಸಂಚಾರ ಸಾಫ್ಟ್​ವೇರ್​ ಇಂಜನಿಯರಿಂಗ್ ಕೇಂದ್ರ ಆರಂಭಕ್ಕೆ ಜಿಕೆಎನ್​​-ಟಿಸಿಎಸ್​​ ತಯಾರಿ
author img

By

Published : Oct 8, 2020, 7:17 PM IST

Updated : Oct 9, 2020, 12:35 PM IST

ಬೆಂಗಳೂರು: ಟಾಟಾ ಟೆಕ್ನಾಲಜಿಸ್ ಮತ್ತು ಡ್ರೈವ್‍ಲೈನ್ ಸಿಸ್ಟಮ್ & ಅತ್ಯಾಧುನಿಕ ಇ-ಪವರ್‍ಟ್ರೇನ್ ಜಿಕೆಎನ್ ಆಟೊಮೋಟಿವ್, ಅತ್ಯಾಧುನಿಕ ಜಾಗತಿಕ ಇ-ಸಂಚಾರ ಸಾಫ್ಟ್​​​ವೇರ್ ಇಂಜಿನಿಯರಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಘೋಷಿಸಿವೆ.

ಈ ಹೊಸ ಕೇಂದ್ರವು ಟಾಟಾ ಟೆಕ್ನಾಲಜಿಯ ಎಲೆಕ್ಟ್ರಿಕ್ ಹಾಗೂ ಎಂಬೇಡೆಡ್ ಸಿಸ್ಟಮ್‍ಗಳ ಪರಿಣತಿ ಮತ್ತು ಜಿಕೆಎನ್ ಆಟೊಮೋಟಿವ್‍ನ ಮುಂದಿನ ಪೀಳಿಗೆಯ ಇ-ಡ್ರೈವ್ ತಂತ್ರಜ್ಞಾನಗಳತ್ತ ಕೆಲಸ ಮಾಡಲು ಭಾರತದ ಸಾಫ್ಟ್​​​ವೇರ್ ಇಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನ ಬಳಸಿಕೊಂಡು, ಭವಿಷ್ಯದ ಸುಸ್ಥಿರ ಇ-ಸಂಚಾರ ವ್ಯವಸ್ಥೆಯನ್ನು ಮರು ರೂಪಿಸಲಿದೆ.

2020ರ ಅಂತ್ಯದ ಒಳಗಾಗಿ 100ಕ್ಕೂ ಹೆಚ್ಚು ವಿಶ್ವದರ್ಜೆಯ ಸಾಫ್ಟ್​​ವೇರ್ ಇಂಜಿನಿಯರಿಂಗ್ ಪಟುಗಳು ಮತ್ತು ಬೆಂಬಲ ಸಿಬ್ಬಂದಿಯ ತಂಡವನ್ನು ರೂಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಜಾಗತಿಕ ಆಟೊಮೋಟಿವ್ ಉತ್ಪಾದಕ ಕಂಪನಿಗಳಿಗೆ ಭವಿಷ್ಯದ ಅತ್ಯಾಧುನಿಕ ಇ-ಪವರ್‍ಟ್ರೇನ್ ಅಭಿವೃದ್ಧಿಪಡಿಸುವ ಜಿಕೆಎನ್ ಆಟೊಮೋಟಿವ್‍ನ ಗುರಿಗೆ ಪೂರಕವಾಗಿ ಭಾರತದ ಅತ್ಯುತ್ತಮ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ವೇಗ ಸಿಕ್ಕಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟೆಕ್ನಾಲಜಿಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಾರ್ರನ್ ಹ್ಯಾರೀಸ್, "ಇಂಜಿನಿಯರಿಂಗ್ ಎ ಬೆಟರ್ ವಲ್ರ್ಡ್' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಟಾಟಾ ಟೆಕ್ನಾಲಜೀಸ್, ಜಾಗತಿಕ ಒಇಎಂಗಳು ಮತ್ತು ಒಂದನೇ ಸ್ಥರದ ಉತ್ಪಾದಕರಿಗೆ ತನ್ನ ಉತ್ಪನ್ನ ವಿನ್ಯಾಸ ಮತ್ತು ಇಂಜಿನಿಯರಿಂಗ್ ಸಾಮರ್ಥ್ಯದ ಮೂಲಕ ಉತ್ಪನ್ನಗಳ ಉತ್ಪಾದನೆಗೆ ಸಶಕ್ತಗೊಳಿಸಲಿದೆ. ಜಿಕೆಎನ್ ಆಟೊಮೋಟಿವ್ ಜತೆಗಿನ ಸಹಭಾಗಿತ್ವದಿಂದಾಗಿ, ಸುಸ್ಥಿರ ಹಾಗೂ ಹಸಿರು ವಿಶ್ವವನ್ನು ಸಾಧಿಸಲು ನೆರವಾಗುವ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಗಣನೀಯ ಕೊಡುಗೆ ನೀಡಲು ಸಾಧ್ಯವಾಗಲಿದೆ" ಎಂದು ಬಣ್ಣಿಸಿದರು.

ಜಿಕೆಎನ್ ಆಟೊಮೋಟಿವ್‍ನ ಸಿಇಒ ಲಿಯಾಮ್ ಬಟರ್‍ವರ್ಥ್ ಮಾತನಾಡಿ, ಇದು ಜಿಕೆಎನ್ ಆಟೊಮೋಟಿವ್ ಪಾಲಿಗೆ ಅತ್ಯಂತ ಮಹತ್ವದ ಉಪಕ್ರಮವಾಗಿದೆ. ಟಾಟಾ ಟೆಕ್ನಾಲಜೀಸ್ ಜತೆಗಿನ ಸಹಭಾಗಿತ್ವವು ನಮಗೆ ಭಾರತದಲ್ಲಿರುವ ವಿಶ್ವದರ್ಜೆಯ ಸಾಫ್ಟ್​​ವೇರ್​​​ ಇಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಟಾಟಾ ಟೆಕ್ನಾಲಜೀಸ್‍ನ ಉತ್ಪನ್ನ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮಹತ್ವದ ಹೆಜ್ಜೆ ಎನಿಸಲಿದೆ. ನಮ್ಮ ಇ - ಚಾಲನೆ ತಂತ್ರಜ್ಞಾನ ಈಗಾಗಲೇ ನಮ್ಮನ್ನು ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿದ್ದು, ಈ ಉಪಕ್ರಮವು ನಮ್ಮ ಮತ್ತಷ್ಟು ಬೆಳವಣಿಗೆ ಮತ್ತು ವಿಸ್ತರಣೆಗೆ ಕಾರಣವಾಗಲಿದೆ ಹಾಗೂ ನಮ್ಮ ತಂತ್ರಜ್ಞಾನ ಸಾಮರ್ಥ್ಯ ಸುಧಾರಿಸಿಕೊಳ್ಳಲೂ ನೆರವಾಗಲಿದೆ ಎಂದರು.

12,650 ಚದರ ಅಡಿ ವಿಸ್ತೀರ್ಣದ ಈ ಕೇಂದ್ರವು ಡಿಸೈನ್ ಸ್ಟುಡಿಯೊ, ಲ್ಯಾಬ್ ಸ್ಟೇಷನ್, ಮೀಟಿಂಗ್ ಮತ್ತು ಸಮ್ಮೇಳನ ಸಭಾಂಗಣ, ಸುಕ್ಷೇಮ ಕೇಂದ್ರವನ್ನು ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅಸಾಧಾರಣ ಸವಾಲುಗಳು ಎದುರಾಗಿರುವ ಹೊರತಾಗಿಯೂ, ಈ ಕೇಂದ್ರದ ರೂಪುರೇಷೆಯಿಂದ ಹಿಡಿದು ನಿರ್ಮಾಣದವರೆಗೆ ಎಲ್ಲ ಕಾಮಗಾರಿಗಳನ್ನು ಕೇವಲ 6 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದು ಹಂತಹಂತವಾಗಿ ಆರಂಭವಾಗಲಿದ್ದು, ಟಾಟಾ ಟೆಕ್ನಾಲಜೀಸ್‍ನ ಎಲ್ಲ ಕೇಂದ್ರಗಳಂತೆ ಕಟ್ಟುನಿಟ್ಟಾಗಿ ನೈರ್ಮಲ್ಯ, ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರ ಕಾಪಾಡುವ ನಿಯಮಗಳನ್ನು ಅನುಸರಿಸಲಾಗುತ್ತದೆ.

Last Updated : Oct 9, 2020, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.