ಬೆಂಗಳೂರು: ನಗರದ ಪಿಜಿಯೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ತನಿಖೆಗೆ ಇಳಿದಾಗ ರೋಚಕ ಕಹಾನಿ ಬೆಳಕಿಗೆ ಬಂದಿದೆ.
ಯಡಿಯೂರಿನ ಟಾಟಾ ಸಿಲ್ಕ್ ಫಾರಂ ಪಿಜಿಯಲ್ಲಿ ಎರಡು ತಿಂಗಳಿನಿಂದ ವಾಸವಿದ್ದ ವಿದ್ಯಾರ್ಥಿನಿ ನಿನ್ನೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೂಲತಃ ತಮಿಳುನಾಡಿನವಳಾದ ಈಕೆ ಜಯನಗರದ ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನಲ್ಲಿ ಟಾಪರ್ ಕೂಡ ಆಗಿದ್ದಳು.
ಪಿಜಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಿಯತಮನೊಂದಿಗಿನ ಚಿಕ್ಕ ಗಲಾಟೆ:
ಈ ಹದಿಹರೆಯದ ವಯಸ್ಸಿನಲ್ಲಿ ಗಾಯತ್ರಿ ತಮಿಳುನಾಡು ಮೂಲದ ಸುದರ್ಶನ್ ಎಂಬುವವನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು , ಆತ ಕೂಡ ಜಯನಗರದ ಪಿಜಿ ಯೊಂದರಲ್ಲಿ ವಾಸವಾಗಿದ್ದ.
ಸುದರ್ಶನ ಹಾಗೂ ಯುವತಿ ಒಂದೇ ಊರಿನವರಾಗಿದ್ದು, ನಿನ್ನೆ ಮುಂಜಾನೆಯಿಂದ ಸಂಜೆ ವರೆಗೂ ಇಬ್ಬರೂ ಒಟ್ಟಿಗೆ ಸುತ್ತಾಡಿ ಪಿಜಿಗೆ ಬಂದ ನಂತರ ಮತ್ತೇ ಹೊರಗಡೆ ಸುತ್ತಾಡಲು ಗಾಯತ್ರಿ ಸುದರ್ಶನನ್ನು ಕರೆದಿದ್ದಾಳೆ. ಇದಕ್ಕೆ ಸುದರ್ಶನ್ ಒಲ್ಲೆ ಎಂದಿದ್ದಕ್ಕೆ ನೀ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಂದೇಶ ಕಳುಹಿಸಿದ್ದಾಳೆ.
ಇದಕ್ಕೆ ಕೋಪಗೊಂಡ ಸುದರ್ಶನ್, ಆಕೆಯ ನಂಬರ್ ಬ್ಲಾಕ್ ಮಾಡಿದ್ದ. ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಬನಶಂಕರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.