ETV Bharat / state

ಪ್ರಗತಿ ಗ್ರೂಪ್ ಅಡಿಯಲ್ಲಿ ಅಶ್ವತ್ಥ ನಾರಾಯಣರಿಂದ ಅಕ್ರಮ ಭೂ ಮಾರಾಟ: ಗೌರವ್ ವಲ್ಲಭ್ - ಗೌರವ್ ವಲ್ಲಭ್ ಆರೋಪ

ಕಾಂಗ್ರೆಸ್​​ ವಕ್ತಾರ ಗೌರವ್​ ವಲ್ಲಭ್​ ಮತ್ತು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಜಂಟಿ ಸುದ್ದಿಗೋಷ್ಟಿ ನಡೆಸಿ ಸಚಿವ ಡಾ.ಅಶ್ವತ್ಥ ನಾರಾಯಣ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದರು.

gaurav-vallabh-has-made-corruption-allegations-against-ashwath-narayan
ಅಶ್ವತ್ಥನಾರಾಯಣ ತಮ್ಮ ಇಲಾಖೆ ಮೂಲಕ ಅಕ್ರಮವಾಗಿ ಭೂ ಮಾರಾಟ ಮಾಡಿದ್ದಾರೆ: ಗೌರವ್ ವಲ್ಲಭ್ ಆರೋಪ
author img

By

Published : Apr 30, 2023, 3:46 PM IST

Updated : Apr 30, 2023, 4:05 PM IST

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಅವರು ತಮ್ಮ ಪ್ರಗತಿ ಗ್ರೂಪ್ ಅಡಿಯಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಜತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.

ಅಶ್ವಥ್ ನಾರಾಯಣ ತಮ್ಮ ಇಲಾಖೆಯಡಿ ಪ್ರಗತಿ ಗ್ರೂಪ್‌ಗೆ 40 ಎಕರೆ ಭೂಮಿಯನ್ನು 199 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. 120 ಕೋಟಿ ರೂ. ಮಾತ್ರ ಟಿಡಿಎಸ್ ತೋರಿಸಿದ್ದಾರೆ. ಆದರೆ ಸೇಲ್ ಡೀಡ್ 199 ಕೋಟಿ ರೂ ಎಂದು ನಮೂದಿಸಿದ್ದಾರೆ. ಹಾಗಾದರೆ, ಉಳಿದ ಹಣ ಎಲ್ಲಿ ಹೋಯ್ತು? ಉಳಿದ ಹಣಕ್ಕೆ ಟಿಡಿಎಸ್ ಮೋಸ ಮಾಡಿದ್ದಾರೆ. ಆದಾಯ ತೆರಿಗೆಯಲ್ಲಿಯೂ ಕೂಡ ತೋರಿಸಿಲ್ಲ. ಮೂರು ಸೇಲ್ಸ್ ಡೀಡ್ ಮಾಡಿದ್ದಾರೆ ಎಂದು ಅವರು ದೂರಿದರು.

ಇವರು ಚೆಕ್​​ನಲ್ಲಿ ಹಣ ಕೊಟ್ಟಿದ್ದಾರೆ. ಆದರೂ ಟಿಡಿಎಸ್ ಹಣ ಕಡಿಮೆ ಮಾಡಿದ್ದಾರೆ. ಉಳಿದ 79 ಕೋಟಿ‌ ರೂ ಎಲ್ಲಿ ಹೋಯ್ತು ಎಂದು ಗೌರವ್ ವಲ್ಲಭ್ ಪ್ರಶ್ನಿಸಿದರು. ಅದು ಬ್ಲಾಕ್ ಮನೀನಾ ಅಥವಾ ಮನಿ ಲಾಂಡರಿಂಗ್​ ಮಾಡಲಾಗಿದೆಯೇ ಎಂಬುದಕ್ಕೆ ಅಶ್ವಥ್ ನಾರಾಯಣ ಉತ್ತರಿಸಬೇಕು. ಐಟಿ, ಇಡಿ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ?. 40 ಪರ್ಸೆಂಟ್​​​ ಕಮಿಷನ್ ದಾಖಲೆ ಕೇಳ್ತಾರೆ. ನಾವು ದಾಖಲೆ ಇಟ್ಟು‌ ಮಾತನಾಡುತ್ತಿದ್ದೇವೆ. ಪ್ರಗತಿ ಗ್ರೂಪ್​​ನಲ್ಲಿ‌ ಅಶ್ವಥ್ ನಾರಾಯಣ ಹಾಗು ಕುಟುಂಬದ ಪಾಲುದಾರಿಕೆ ಇದೆ. ಇದರ ಬಗ್ಗೆ ನಮ್ಮ‌ ಬಳಿ ದಾಖಲೆಗಳಿವೆ. ಹಗರಣದ ಬಗ್ಗೆ ನಾವು ದೂರು ದಾಖಲಿಸುತ್ತೇವೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ನಿನ್ನೆಯಿಂದ ರಾಜ್ಯದಲ್ಲಿ ಮತಪ್ರಚಾರ ಮಾಡುತ್ತಿರುವ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅವರು ಕಾಂಗ್ರೆಸ್ ಅಂಬೇಡ್ಕರ್​​ಗೆ ಅವಮಾನ ಮಾಡಿದೆ ಎಂದು ಹೇಳಿದ್ದು ಸರಿಯಲ್ಲ. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದೆ ಅನ್ನುವುದು ನಿಜ. ಆದರೆ, ದುರುದ್ದೇಶದಿಂದ ಸೋಲಿಸಿಲ್ಲ. ಎದುರಾಳಿ ಅಭ್ಯರ್ಥಿ ಅಂತ ಸೋಲಿಸಲಾಗಿದೆ. ಇದನ್ನೇ ಅಂಬೇಡ್ಕರ್​​ಗೆ ಅವಮಾನ‌ ಮಾಡಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ ಎಂದರು.

ಅಂಬೇಡ್ಕರ್ ಹೊರ ದೇಶದಲ್ಲಿ ಓದಿ ಬಂದವರು. ಅವರ ಜೊತೆ ಸಾವರ್ಕರ್ ಹೋಲಿಕೆ ಸರಿಯಲ್ಲ. ಇಬ್ಬರ ಹೋಲಿಕೆ ಮಾಡಿದರೆ ಅಂಬೇಡ್ಕರ್​​ಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಸಾವರ್ಕರ್ ಹಿಂದುತ್ವ ಪ್ರತಿಪಾದಿಸಿದವರು. ಆದರೆ ಅಂಬೇಡ್ಕರ್ ಅವರು ಹಿಂದುತ್ವದ ಪರ ಇರಲಿಲ್ಲ. ಅಂಬೇಡ್ಕರ್ ತತ್ವಗಳನ್ನು ಕಾಂಗ್ರೆಸ್ ಮಾತ್ರ ಜಾರಿಗೆ ತಂದಿದೆ. ಜಾತ್ಯತೀತ ಭಾರತ ಕಟ್ಟಲು ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನಿಂದ ನನಗೆ ಧಮ್ಕಿ.. ಶಿವನ ಕೊರಳಿಗೆ ನಾಗಸರ್ಪವೇ ಶೋಭೆ.. ಜನತೆಯೇ ಈಶ್ವರ ಸ್ವರೂಪಿ: ಮೋದಿ

Last Updated : Apr 30, 2023, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.