ಬೆಂಗಳೂರು: ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ (ಬಿಸಿಐಸಿ) ಸಂಸ್ಥೆಯು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ಪಾಲಿಕೆಯ ಸಹಯೋಗದೊಂದಿಗೆ ನಗರದಲ್ಲಿ ಕೋವಿಡ್-19 ಲಸಿಕಾ ಅಭಿಯಾನದ ಅಂಗವಾಗಿ ಮನೆ-ಮನೆಗೆ ಲಸಿಕೆ ಯೋಜನೆ ಸಂಬಂಧ ಮುಖ್ಯ ಆಯುಕ್ತ ಗೌರವ್ ಗುಪ್ತ ಒಡಂಬಡಿಕೆ ಮಾಡಿಕೊಂಡರು.
ಮನೆ ಮನೆಗೆ ಲಸಿಕಾ ಯೋಜನೆಗೆ ಸದಸ್ಯ ಸಂಸ್ಥೆಗಳಾದ ವೋಲ್ವೊ ಗ್ರೂಪ್ ಇಂಡಿಯಾ ಪ್ರೈ. ಲಿ, ಇಂಟರ್‌ನ್ಯಾಶನಲ್ ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್(ಐಎಎಂಪಿಎಲ್) ಮತ್ತು ಕನ್ವರ್ಜೆಂಟ್ ವೈರ್‌ಲೆಸ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಸಿಎಸ್‌ಆರ್ ಅಡಿಯಲ್ಲಿ ಎರಡು ತಿಂಗಳ ಕಾಲ ಲಸಿಕಾಕರಣವನ್ನು ನೀಡಲು 5 ತಂಡಗಳನ್ನು ನಿಯೋಜಿಸಿವೆ. ಸಂಭವ್ ಫೌಂಡೇಶನ್ನಿಂದ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು.
ಇದನ್ನೂ ಓದಿ: ಬಜೆಟ್ 2022: ಕೇಂದ್ರದ ಬಜೆಟ್‌ನಲ್ಲಿ ಕೊರೊನಾ ವಾರಿಯರ್ಸ್ ನಿರೀಕ್ಷೆಗಳಿವು..
6 ಮಂದಿಯನ್ನೊಳಗೊಂಡ 5 ತಂಡಗಳಲ್ಲಿ, 2 ವ್ಯಾಕ್ಸಿನೇಟರ್ಸ್, 2 ಡಿಇಒ(ಡೇಟಾ ಎಂಟ್ರಿ ಆಪರೇಟರ್), 1 ಮೇಲ್ವಿಚಾರಕ, 1 ಮೊಬಿಲೈಸರ್ ಇರಲಿದ್ದಾರೆ. ನಗರದಲ್ಲಿ ಆಯಾ ವಾರ್ಡ್ಗಳ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳದೇ ಇರುವವರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಎಲ್ಲರೂ ಕೋವಿಡ್ ಲಸಿಕೆ ಪಡೆಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಜಿಒಗಳ ಜೊತೆ ಒಡಂಬಡಿಕೆ: ನಗರದಲ್ಲಿ ಇದುವರೆಗೆ ಒಟ್ಟು 1,67,58,143 ಡೋಸ್ ಲಸಿಕೆ ನೀಡಲಾಗಿದ್ದು, ಶೇ.97 ರಷ್ಟು ಮೊದಲನೇ ಡೋಸ್ ಹಾಗೂ ಶೇ. 82 ರಷ್ಟು ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಹಲವಾರು ಎನ್‌ಜಿಒ ಸಂಸ್ಥೆಗಳು ಪಾಲಿಕೆಯ ಜೊತೆ ಕೈಜೋಡಿಸಿ ವಾಹನಗಳು ಹಾಗೂ ಲಸಿಕೆ ನೀಡಲು ಅಗತ್ಯ ಸಿಬ್ಬಂದಿಯ ವ್ಯವಸ್ಥೆ ಮಾಡುತ್ತಿವೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ