ETV Bharat / state

ಎಚ್ಚರ.. ಕರ್ಕಶ ಸೈಲೆನ್ಸರ್​ ಹಾಕಿ ಕೊಡುವ ಗ್ಯಾರೇಜ್​ ಮಾಲೀಕರಿಗೂ ಕಾದಿದೆ ಶಿಕ್ಷೆ.. ! - ಬಸವನಗುಡಿ ಪೊಲೀಸರಿಂದ ವೀಲಿಂಗ್ ಮಾಡುತ್ತಿದ್ದವರ ಬಂಧನ

ವೀಲಿಂಗ್ ಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ವಿನೂತನ ಪ್ಲ್ಯಾನ್ ಮಾಡಿದ್ದಾರೆ. ವೀಲಿಂಗ್ ಮಾಡುವ ಬೈಕ್​ಗಳಿಗೆ ಸೈಲೆನ್ಸರ್ ಹಾಕಿಕೊಡುವ ಗ್ಯಾರೇಜ್ ಮಾಲೀಕರಿಗೆ ದಂಡ ವಿಧಿಸೋಕೆ ಮುಂದಾಗಿದ್ದಾರೆ.

wheeling
ಗ್ಯಾರೇಜ್​
author img

By

Published : Oct 25, 2020, 6:20 PM IST

ಬೆಂಗಳೂರು : ನಗರದಲ್ಲಿ ವೀಲಿಂಗ್​ಗೆ ಬ್ರೇಕ್ ಹಾಕಲು ಪೊಲೀಸರು ವಿನೂತನ ಪ್ಲ್ಯಾನ್ ಮಾಡಿದ್ದಾರೆ. ಇತ್ತೀಚೆಗೆ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ಕಶ ಶಬ್ದ ಬರುವ ಸೈಲೆನ್ಸರ್​​ ಅಳವಡಿಸಿಕೊಂಡು ತಿರುಗಾಡುತ್ತಿರುತ್ತಾರೆ. ಹಾಗಾಗಿ ಸೈಲೆನ್ಸರ್ ಹಾಕಿಕೊಡುವ ಗ್ಯಾರೇಜ್ ಮಾಲೀಕರಿಗೂ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ವೀಲಿಂಗ್ ಮಾಡಿದ್ದ 16 ಜನರನ್ನು ಬಂಧಿಸಿರುವ ಬಸವನಗುಡಿ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಬಗ್ಗೆ ಟ್ರಾಫಿಕ್ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ನಗರ ಪೊಲೀಸ್ ಆಯುಕ್ತ ಕಮಲ್ ​ಪಂತ್​​​​ಗೆ ಮಾಹಿತಿ ನೀಡಿದ್ದರು.

ಬೆಂಗಳೂರಲ್ಲಿ ಮಿತಿ ಮೀರಿದ ವೀಲಿಂಗ್​ ಹಾವಳಿ

ವರದಿಯನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್, ಕೇವಲ ವೀಲಿಂಗ್ ಮಾಡುವವರು ಅಷ್ಟೇ ಅಲ್ಲ, ಇನ್ಮುಂದೆ ಸೈಲೆನ್ಸರ್ ಅಳವಡಿಕೊಡುವ ಗ್ಯಾರೇಜ್ ಮಾಲೀಕರನ್ನು ಹಿಡಿದು ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.