ದೇವನಹಳ್ಳಿ: ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ರಾಜ್ಯದ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗಿದೆ. ದೇವನಹಳ್ಳಿ ಬಳಿಯ ಜೆಡಬ್ಯ್ಲೂ ಮೆರಿಯೆಟ್ ಹೋಟೆಲ್ನಲ್ಲಿ ರಾಜ್ಯದ ವಿಶೇಷತೆಗಳ ಪ್ರದರ್ಶನ ಮಾಡಲಾಗಿದೆ. ವಿದೇಶಿ ಗಣ್ಯರನ್ನು ನಮ್ಮ ಸಂಪ್ರದಾಯ ವಸ್ತುಗಳ ಪ್ರದರ್ಶನ ಗಮನ ಸೆಳೆಯುತ್ತಿವೆ.
ಹೋಟೆಲ್ನಲ್ಲಿ ಚನ್ನಪಟ್ಟಣ ಗೊಂಬೆಗಳು, ಮೈಸೂರು ದಸರಾ ಚಿತ್ರಗಳು, ನವಲಗುಂದ ಜಮಕಾನ, ಕೈನಲ್ಲಿ ಮಾಡಿದ ಬಿದರಿನ ವಸ್ತುಗಳ ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಬಗೆಯ ಗೊಂಬೆ ಮತ್ತು ವಸ್ತುಗಳಿಗೆ ವಿದೇಶಿ ಗಣ್ಯರು ಮನಸೋತಿದ್ದಾರೆ. ಹೋಟೆಲ್ನ ಟೇಬಲ್ ಸೇರಿದಂತೆ ಹಲವಡೆ ಪ್ರದರ್ಶನ ಮಾಡಿರುವ ಅಧಿಕಾರಿಗಳು ರಾಜ್ಯದ ಸಂಸ್ಕೃತಿ ಪ್ರಚುರ ಪಡಿಸುವ ಕಾರ್ಯ ಯಶಸ್ವಿಯಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜಿ20 ಶೃಂಗಸಭೆ: ಆನೆಗಳಿಂದ ಗಣ್ಯರಿಗೆ ಸ್ವಾಗತ.. ಕಪ್ಪು ಪಟ್ಟಿ ಪ್ರದರ್ಶಿಸಲು ಬಂದ ರೈತರು ವಶಕ್ಕೆ