ETV Bharat / state

ಬೆಂಗಳೂರಿನಲ್ಲಿ ನಡೆಯಲಿದೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ಫೆಬ್ರವರಿ 5ರಿಂದ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ ನಡೆಯಲಿದೆ. ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

g20-energy-transition-working-group-meeting-at-bengaluru
Etv ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ
author img

By

Published : Jan 31, 2023, 6:14 AM IST

Updated : Jan 31, 2023, 1:34 PM IST

ಬೆಂಗಳೂರು : "ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ (ಇಟಿಡಬ್ಲ್ಯುಜಿ) ಸಭೆ ಆಯೋಜಿಸಲು ಬೆಂಗಳೂರು ಸಜ್ಜಾಗಿದೆ. ಈ ಸಭೆಯು ಫೆಬ್ರವರಿ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ನಡಯಲಿದೆ" ಎಂದು ಕೇಂದ್ರದ ಶಕ್ತಿ ಇಲಾಖೆಯ ಕಾರ್ಯದರ್ಶಿ ಅಲೋಕ್ ಕುಮಾರ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ: "ಜಿ20 ಸದಸ್ಯ ರಾಷ್ಟ್ರಗಳೂ ಸೇರಿದಂತೆ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್‌ಲ್ಯಾಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ, ಯುಎಇ ಮತ್ತು ಸ್ಪೇನ್ ಸೇರಿ ಒಂಬತ್ತು ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ದಿ ವರ್ಲ್ಡ್ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ), ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ), ಕ್ಲೀನ್ ಎನರ್ಜಿ ಮಿನಿಸ್ಟ್ರಿ (ಸಿಇಎಂ), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ), ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಮುಂತಾದ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು (ಐಎಸ್‌ಎ), ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎನ್‌ಐಡಿಒ), ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ಯುಎನ್‌ಇಎಸ್‌ಸಿಎಪಿ), ಆರ್‌ಡಿ 20 ಸಭೆಯ ಭಾಗವಾಗಲಿದ್ದಾರೆ. ಸಂಬಂಧಪಟ್ಟ ಸಚಿವಾಲಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಇಟಿಡಬ್ಲ್ಯುಜಿ ಸಭೆಯಲ್ಲಿ ಉಪಸ್ಥಿತರಿರುವರು" ಎಂದು ಅವರು ತಿಳಿಸಿದರು.

ಇನ್ಫೋಸಿಸ್-ಸೋಲಾರ್ ಪಾರ್ಕ್‌ಗೆ ಭೇಟಿ: "ಮೊದಲ ಇಟಿಡಬ್ಲ್ಯೂಜಿ ಸಭೆಯ ಭಾಗವಾಗಿ ಪಾಲ್ಗೊಳ್ಳುವ ಪ್ರತಿನಿಧಿಗಳು ಇನ್ಫೋಸಿಸ್ ಗ್ರೀನ್ ಬಿಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡ ಸೋಲಾರ್ ಪಾರ್ಕ್‌ಗೆ ಭೇಟಿ ನೀಡಲಿದ್ದಾರೆ. ನವೀಕರಿಸಬಹುದಾದ ಕ್ಷೇತ್ರದತ್ತ ಭಾರತದ ಪ್ರೇರಣೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸುವ ಪ್ರಯತ್ನಗಳನ್ನು ನೇರವಾಗಿ ಅವರು ವೀಕ್ಷಿಸುವರು. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಲೆ, ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನೂ ಸಹ ಅನುಭವಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.

ವಿವಿಧೆಡೆ ಕಾರ್ಯಕ್ರಮಗಳು: "ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ ಇಟಿಡಬ್ಲ್ಯುಜಿಗಾಗಿ ನೋಡಲ್ ಸಚಿವಾಲಯವಾಗಿದೆ. ಕೇಂದ್ರೀಕೃತ ಆದ್ಯತೆಯ ಕ್ಷೇತ್ರಗಳಲ್ಲಿ ಚರ್ಚೆಗಳು ಮತ್ತು ಮಾತುಕತೆಗಳನ್ನು ಮುನ್ನಡೆಸಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಾಲ್ಕು ಇಟಿಡಬ್ಲ್ಯುಜಿ ಸಭೆಗಳು, ವಿವಿಧ ಕಡೆ ಕಾರ್ಯಕ್ರಮಗಳು ಮತ್ತು ಸಚಿವರ ಸಭೆಯನ್ನು ಯೋಜಿಸಲಾಗಿದೆ" ಎಂದರು. ಪಿಐಬಿ ಬೆಂಗಳೂರು ಎಡಿಜಿ ಎಸ್.ಜಿ.ರವೀಂದ್ರ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಉಚಿತವಾಗಿ ವಿದ್ಯುತ್ ಯೋಜನೆಗಳು ಮಾರಕ : ಉಚಿತವಾಗಿ ವಿದ್ಯುತ್ ಒದಗಿಸಿದರೆ ಇಂಧನ ಉಳಿತಾಯ ಕಾರ್ಯಕ್ರಮಗಳು ವಿಫಲವಾಗುವ ಸಾಧ್ಯತೆ ಇದೆ. ಇಂಧನ ಉಳಿತಾಯಕ್ಕಾಗಿ ಸರ್ಕಾರಗಳು ದೊಡ್ಡ ಮೊತ್ತದ ವೆಚ್ಚ ಮಾಡುತ್ತವೆ. ಉಚಿತವಾಗಿ ವಿದ್ಯುತ್ ಪೂರೈಸಿದರೆ ಮಿತ ಬಳಕೆಯ ಕುರಿತು ಜನರು ಯೋಚಿಸುವುದಿಲ್ಲ ಎಂದರು.

ವಿದ್ಯುತ್ ಕಂಪನಿಗಳು ನಷ್ಟದ ಸುಳಿಗೆ : ಉಚಿತವಾಗಿ ವಿದ್ಯುತ್ ಪೂರೈಸುವುದು ಸೇರಿದಂತೆ ವಿದ್ಯುತ್ ಕ್ಷೇತ್ರದಲ್ಲಿ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಆದರೆ, ಉಚಿತವಾಗಿ ಪೂರೈಸುವ ವಿದ್ಯುತ್‌ನ ವೆಚ್ಚವನ್ನು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಕಾಲಕ್ಕೆ ಪಾವತಿಸಬೇಕು. ಇಲ್ಲವಾದರೆ ಆ ಕಂಪನಿಗಳು ನಷ್ಟದ ಸುಳಿಗೆ ಸಿಲುಕುತ್ತವೆ ಎಂದು ಅಭಿಪ್ರಾಯಪಟ್ಟರು.

ಕಿರು ವಿದ್ಯುತ್ ಯೋಜನೆ ಅನುಮತಿಗೆ ಬೇಡಿಕೆ : ಅರುಣಾಚಲಪ್ರದೇಶ, ಹಿಮಾಚಲಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಕಿರು ಜಲ ವಿದ್ಯುತ್ ಯೋಜನೆಗಳಿಗೆ ತ್ವರಿತವಾಗಿ ಅನುಮತಿ ನೀಡುವಂತೆ ಹಾಗೂ ಹೆಚ್ಚು ಸಹಾಯಧನ ನೀಡುವಂತೆ ಬೇಡಿಕೆ ಇಟ್ಟಿವೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಿಐಬಿ ಬೆಂಗಳೂರು ಎಡಿಜಿ ಎಸ್.ಜಿ. ರವೀಂದ್ರ ಉಪಸ್ಥಿತರಿದ್ದರು.

ಭಾರತವು ಡಿಸೆಂಬರ್ 1, 2022 ರಿಂದ 30 ನವೆಂಬರ್ 2023 ರವರೆಗೆ ಒಂದು ವರ್ಷದವರೆಗೆ G20 ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ ಮತ್ತು ದೇಶಾದ್ಯಂತ 200 ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ. G20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10, 2023 ರಂದು ನವದೆಹಲಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: ಮುರುಘಾ ಮಠಕ್ಕೆ ಸರ್ಕಾರ ನೀಡಿರುವ ಅನುದಾನದ ಮಾಹಿತಿ ಕೊಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Last Updated : Jan 31, 2023, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.