ETV Bharat / state

ನಾಳೆಯಿಂದ ಜಿ20 ಸಭೆ: ತಾಜ್ ವೆಸ್ಟ್ ಎಂಡ್ ಸುತ್ತಮುತ್ತ ತಾತ್ಕಾಲಿಕ ಹಾರಾಟ ನಿಷಿದ್ಧ, ನಿಷೇಧಾಜ್ಞೆ - ETV Bharath Kannada news

G-20 summit in Bengaluru: ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಯುವ ಪ್ರದೇಶದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

g 20 meeting
ನಾಳೆಯಿಂದ ಜಿ20 ಸಭೆ
author img

By

Published : Aug 15, 2023, 12:21 PM IST

ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಹಾಗೂ ಡಿಜಿಟಲ್ ಎಕಾನಮಿ ಮಿನಿಸ್ಟರ್ಸ್​ ನಾಲ್ಕನೇ ಸಭೆ ನಡೆಯಲಿದ್ದು, ಸಭೆ ಸೇರಲಿರುವ ತಾಜ್ ವೆಸ್ಟ್ಎಂಡ್ ಹೋಟೆಲ್ ಸುತ್ತಮುತ್ತಲಿನ ಪ್ರದೇಶವನ್ನು 'ತಾತ್ಕಾಲಿಕ ಹಾರಾಟ ನಿಷಿದ್ಧ ವಲಯ' ಎಂದು ಘೋಷಿಸಿ ಹಾಗೂ ನಿಷೇಧಾಜ್ಞೆ ವಿಧಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶಿಸಿದ್ದಾರೆ.

ಆಗಸ್ಟ್ 16 ರಿಂದ 20ರ ವರೆಗೂ ಸಭೆ ನಡೆಯಲಿದ್ದು, ಸಾಕಷ್ಟು ವಿದೇಶಿ ಪ್ರತಿನಿಧಿಗಳು, ವಿವಿಐಪಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸುರಕ್ಷತಾ ಕ್ರಮವಾಗಿ ಆಗಸ್ಟ್ 15ರ ಬೆಳಗ್ಗೆ 8 ರಿಂದ ಆಗಸ್ಟ್ 20ರ ಮದ್ಯಾಹ್ನ 2 ಗಂಟೆಯವರೆಗೆ ಹೋಟೆಲ್ ಸುತ್ತಮುತ್ತಲಿನ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡ್ರೋನ್​, ಮಾನವರಹಿತ ವೈಮಾನಿಕ ವಾಹನ, ಗ್ಲೈಡರ್, ಲಘು ವಿಮಾನ, ಪೂರ್ವ ನಿಗದಿಯಾಗದ ಎಲ್ಲಾ ರೀತಿಯ ಲಘು ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಭಾರತಕ್ಕೆ ಜಿ20ಯ ಅಧ್ಯಕ್ಷತೆ ದೊರೆತಿದೆ. ಇದರ ನಂತರ ಭಾರತ ನಾನಾ ಕಡೆಗಳಲ್ಲಿ ಜಿ20 ಶೃಂಗಸಭೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಒಂದು ವರ್ಷಗಳ ಕಾಲ ಭಾರತದ ಬಳಿ ಈ ಅಧ್ಯಕ್ಷತೆ ಇರಲಿದೆ. ನವೆಂಬರ್​ 16 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ಅಲ್ಲಿನ ಅಧ್ಯಕ್ಷ ಜೋಕೊ ವಿಡೋಡೊ ಅವರು ಜಿ 20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿದರು.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷ ಡಿಸೆಂಬರ್​ನಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಜುಲೈನಲ್ಲಿ ಹಂಪಿಯಲ್ಲಿ 8 ದಿನಗಳ ಕಾಲ ಜಿ 20 ಶೃಂಗಸಭೆ ನಡೆದಿತ್ತು. 'ವಸುದೈವ ಕುಟುಂಬಕಂ' ಎಂಬ ಧ್ಯೇಯದಡಿ, 'ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ' ಎಂಬ ಘೋಷವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿಯೂ 4 ದಿನಗಳ ಕಾಲ ಜಿ20 ಸಭೆ ನಡೆಸಲಾಗಿತ್ತು.

ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ಜಿ20 ಕಾರ್ಯಕ್ರಮ ಮೊದಲ ಸಭೆಯಾಗಿತ್ತು. ಇದರಲ್ಲಿ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಕಾರಿ ಗುಂಪು (ಇಸಿಎಸ್​​ಡಬ್ಲ್ಯುಜಿ) ವಿಷಯದ ಬಗ್ಗೆ ಮೂರು ದಿನಗಳ ಕಾಲ ಚರ್ಚೆ ನಡೆಯಲಿದೆ. ಇದರಲ್ಲಿ ಸಂಪನ್ಮೂಲಗಳ ಮಿತಿಮೀರಿದ ಬಳಕೆ ತಡೆಯುವ ವಿಷಯದ ಮತ್ವದ ಚರ್ಚೆಗಳಾದವು. ಈ ಬಾರಿಯ ಸಭೆಯಲ್ಲಿ ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಹಾಗೂ ಡಿಜಿಟಲ್ ಎಕಾನಮಿ ಮಿನಿಸ್ಟರ್ಸ್ ಸಭೆ ನಡೆಯಲಿದೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಜಿ20 ನಾಯಕರ ಶೃಂಗಸಭೆ ನಡೆಯಲಿದೆ.

ಇದನ್ನೂ ಓದಿ: Independence Day 2023: ತ್ರಿವರ್ಣ ರಂಗಿನಿಂದ ರಾರಾಜಿಸುತ್ತಿದೆ ಭಾರತ... ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.