ಬೆಂಗಳೂರು : ಭಾರತದ ಕ್ರೀಡೆಯ ಭವಿಷ್ಯ ತರಬೇತುದಾರರ ಕೈಯಲ್ಲಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಅಥ್ಲೀಟ್ಗಳಿಗೆ ಉತ್ತಮ ತರಬೇತಿ ನೀಡಿ ಪೋಷಿಸುವ ಸಂಕಲ್ಪ ಮಾಡೋಣ ಮತ್ತು ಒಲಿಂಪಿಯನ್ ಮಾನದಂಡದಂತೆ ತಾರಾ ಅಥ್ಲೀಟ್ಗಳನ್ನು ರೂಪಿಸುವುದುನ್ನು ಖಾತ್ರಿಪಡಿಸೋಣ ಎಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
![Future of Indian athletes is in the hands of coaches: Anurag Thakur](https://etvbharatimages.akamaized.net/etvbharat/prod-images/kn-bng-04-central-minister-program-script-7208077_05092021183512_0509f_1630847112_19.jpg)
ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ನೇತಾಜಿ ಸುಭಾಷ್ ಸದರನ್ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕ್ರೀಡಾ ತರಬೇತಿಯಲ್ಲಿ ಎನ್ಐಎಸ್ ಡಿಪ್ಲೊಮಾದ 58ನೇ ಬ್ಯಾಚ್ನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ಪುನರುಚ್ಛರಿಸಿದರು. ಇತ್ತೀಚೆಗೆ ಮುಕ್ತಾಯವಾದ ಟೋಕಿಯೊ ಬೇಸಿಗೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಉತ್ಸಾಹಪೂರ್ಣ ಸಾಧನೆ ಪ್ರದರ್ಶನ ನಮಗೆ ಮತ್ತಷ್ಟು ಪುಷ್ಟಿ ನೀಡಿದೆ ಎಂದರು.
ಉತ್ತಮ ತರಬೇತಿ : ಬೆಂಗಳೂರಿನ ಎಸ್ಎಐ ಕೇಂದ್ರದಲ್ಲಿ ಸದ್ಯ ಎನ್ಸಿಒಇ ಯೋಜನೆ ಅಡಿ ಐದು ವಿಭಾಗಗಳಲ್ಲಿ 160 ಅಥ್ಲೀಟ್ ಗಳು ಉತ್ತಮ ಸಾಧನೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ 168 ತರಬೇತಿ ಪಡೆಯುತ್ತಿರುವ ಕೋಚ್ ಗಳು 9 ಕ್ರೀಡಾವಿಭಾಗಗಳಲ್ಲಿ ಕ್ರೀಡಾ ತರಬೇತಿಯ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ ಮತ್ತು ಸದ್ಯದಲ್ಲೇ ಅವರು ತರಬೇತಿ ಪೂರ್ಣಗೊಳಿಸಿ, ಯುವ ಕೋಚ್ ಗಳಾಗಿ ಕೇಂದ್ರದಿಂದ ಹೊರ ಬರಲಿದ್ದಾರೆ.
ಆಧುನಿಕ, ವೈಜ್ಞಾನಿಕ ವಿಧಾನ ಮತ್ತು ಇತ್ತೀಚಿನ ಸಂಶೋಧನೆಗಳೊಂದಿಗೆ ತರಬೇತಿ ಪ್ರಕ್ರಿಯೆಗಳನ್ನು ಬೆಂಬಲಿಸಲು ಯುವ ಕ್ರೀಡಾ ವಿಜ್ಞಾನಿಗಳ ತಂಡವನ್ನು ಇತ್ತೀಚೆಗೆ ಸೇರ್ಪಡೆ ಮಾಡಿಕೊಂಡಿರುವುದು ಉನ್ನತ ಕಾರ್ಯಕ್ಷಮತೆಯ ತರಬೇತಿಯಸಲ್ಲಿ ಎಸ್ಎಐಗೆ ಕ್ರೀಡಾ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನೂ ತೋರ್ಪಡಿಸುತ್ತದೆ ಎಂದು ತಿಳಿಸಿದರು.
![Future of Indian athletes is in the hands of coaches: Anurag Thakur](https://etvbharatimages.akamaized.net/etvbharat/prod-images/kn-bng-04-central-minister-program-script-7208077_05092021183512_0509f_1630847112_479.jpg)
ಇದಕ್ಕೂ ಮುನ್ನ ಸಚಿವರ ಭೇಟಿ ಬೆಂಗಳೂರು ಎಸ್ಎಐನ ಆಡಳಿತ ಕಚೇರಿಯಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಎಸ್ಎಐನ ಮಹಾನಿರ್ದೇಶಕರಾದ ಸಂದೀಪ್ ಪ್ರಧಾನ್ ಮತ್ತು ಎಸ್ಎಐ ಬೆಂಗಳೂರು ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ರಿತು ಪಾಠಿಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.