ETV Bharat / state

ಚಂದ್ರಯಾನ 1 ರ ಮುಂದುವರಿದ ಭಾಗವೇ  ಚಂದ್ರಯಾನ-2: ಎ.ಎಸ್​ ಕಿರಣ್​ಕುಮಾರ್​​ - Chandrayaan-2

ಚಂದ್ರಯಾನ-1ರಲ್ಲಿ ನೀರಿನ ಇರುವಿಕೆಯನ್ನು ಪತ್ತೆಹಚ್ಚಿದ ಕೀರ್ತಿ ಇಸ್ರೋಗೆ ಸಲ್ಲುತ್ತದೆ. ಅದೇ ರೀತಿಯಾಗಿ ಚಂದ್ರಯಾನ-2 ರಲ್ಲಿ ಹೆಚ್ಚಿನ ಉಪಕರಣಗಳನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿ ಅಧ್ಯಯನ ನಡೆಸಲಾಗುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಹೇಳಿದ್ದಾರೆ.

ಚಂದ್ರಯಾನ-1 ರಲ್ಲಿ ಮುಂದುವರಿದ ಅಧ್ಯಯನ ಚಂದ್ರಯಾನ-2 ರಲ್ಲಿ: ಎ.ಎಸ್​.ಕಿರಣ್ ಕುಮಾರ್
author img

By

Published : Aug 10, 2019, 5:00 PM IST

ಬೆಂಗಳೂರು: ಚಂದ್ರಯಾನ-1ರಲ್ಲಿ ನೀರಿನ ಇರುವಿಕೆಯನ್ನು ಪತ್ತೆಹಚ್ಚಿದ ಕೀರ್ತಿ ಇಸ್ರೋಗೆ ಸಲ್ಲುತ್ತದೆ. ಅದೇ ರೀತಿಯಾಗಿ ಚಂದ್ರಯಾನ-2 ರಲ್ಲಿ ಹೆಚ್ಚಿನ ಉಪಕರಣಗಳನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿ ಅಧ್ಯಯನ ನಡೆಸಲಾಗುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ತಿಳಿಸಿದರು.

ಚಂದ್ರಯಾನ-1 ರಲ್ಲಿ ಮುಂದುವರಿದ ಅಧ್ಯಯನ ಚಂದ್ರಯಾನ-2 ರಲ್ಲಿ: ಎ.ಎಸ್​.ಕಿರಣ್ ಕುಮಾರ್

ಯಲಹಂಕದ ನಿಟ್ಟೆ ಇನ್ಸಿಟ್ಯೂಟ್​ ಆಫ್​​ ಟೆಕ್ನಾಲಜಿಯ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗಬೇಕು. ಅದು ಕೇವಲ ಸ್ವಂತಕ್ಕೆ ಬಳಕೆಯಾಗುವುದಲ್ಲದೇ ನಮ್ಮ ದೇಶ, ವಿದೇಶಗಳಿಗೂ ಸಹಕಾರಿಯಾಗಬೇಕು ಎಂದರು. ಇದೇ ವೇಳೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಾಧನೆಗಳ ಕುರಿತು ವಿವರಿಸಿದ ಅವರು, ಪ್ರಪಂಚದಲ್ಲೇ ಅತೀ ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿ ಇಸ್ರೋ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸಿ ಅಧ್ಯಯನ ನಡೆಸಿದೆ.

ಚಂದ್ರಯಾನ-2 ಜಿಎಸ್​ಎಲ್​ವಿ ಮಾರ್ಕ್ 3 ಈಗಾಗಲೇ 1 ಲಕ್ಷ 40 ಸಾವಿರ ಕಿ.ಮೀ ದೂರ ಕ್ರಮಿಸಿದ್ದು, ಆಗಸ್ಟ್ 14ರಂದು ಚಂದ್ರನ ಕಕ್ಷೆ ಕಡೆಗೆ ತಿರುಗುತ್ತದೆ. ಬಳಿಕ 21ರಂದು ಚಂದ್ರನ ಕಕ್ಷೆಗೆ ಮಿಷನ್ ತಲುಪುತ್ತದೆ. ಸೆಪ್ಟೆಂಬರ್ 7ರಂದು ಮುಂಜಾನೆ ರೋವರ್ ಚಂದ್ರನ ಮೇಲ್ಮೈನಲ್ಲಿ ಇಳಿಯಲಿದೆ. ಅನೇಕ ಉಪಕರಣಗಳನ್ನು ಚಂದ್ರನ ಮೇಲ್ಮೈನಲ್ಲಿ ಇಳಿಸಿ, ನೀರಿನ ಇರುವಿಕೆ ಬಗ್ಗೆ ಅಧ್ಯಯನ ಮಾಡಲಿದೆ ಎಂದರು.

ಉಪಗ್ರಹಗಳು, ರಾಕೆಟ್​ಗಳ ನಿರ್ಮಾಣ ಮಾಡಿ ಬಾಹ್ಯಾಕಾಶ ಅಧ್ಯಯನ ನಡೆಸುತ್ತಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಗತ್ಯ ಮಾಹಿತಿಗಳನ್ನು ನೀಡಬಹುದು. ದೇಶದ ಜನರ ರಕ್ಷಣೆ ಸಂವಹನಕ್ಕೆ ಬೇಕಾದ ಸೌಕರ್ಯಗಳು ಸಿಗಲಿವೆ ಎಂದರು.

ಆದರೆ, ಅಮೆರಿಕದಂತಹ ದೇಶಗಳು ಗೂಗಲ್ ಮ್ಯಾಪಿಂಗ್​ಗಾಗಿ 25 ರಿಂದ 32 ಉಪಗ್ರಹಗಳನ್ನು ಬಳಸಿವೆ. ಮುಂದುವರಿದ ದೇಶಗಳು ಸಾಕಷ್ಟು ಸಾಧನೆಗಳನ್ನು ಮಾಡುತ್ತಿರುವಾಗ ಭಾರತದಂತಹ ದೇಶವು ತನಗಿರುವಷ್ಟು ಸಂಪನ್ಮೂಲಗಳನ್ನು ಬಳಸಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬಹುದು. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಬಹುದು ಎಂದು ಕಿರಣ್​ಕುಮಾರ್​ ವಿವರಿಸಿದರು.

Intro:ನೀರಿನ ಇರುವಿಕೆ ಪತ್ತೆಹಚ್ಚಿದ ಚಂದ್ರಯಾನ-೧ ರ ಮುಂದುವರಿದ ಅಧ್ಯಯನ ಚಂದ್ರಯಾನ 2 ರಲ್ಲಿ..- ಎ ಎಸ್ ಕಿರಣ್ ಕುಮಾರ್ ..

ಬೆಂಗಳೂರು- ಚಂದ್ರಯಾನ ೧ ರಲ್ಲಿ ನೀರಿನ ಇರುವಿಕೆಯನ್ನು ಪತ್ತೆಹಚ್ಚಿದ ಕೀರ್ತಿ ಇಸ್ರೋಗೆ ಸಲ್ಲುತ್ತದೆ. ಅದೇ ರೀತಿಯಾಗಿ ಚಂದ್ರಯಾನ-೨ ರಲ್ಲಿ ಹೆಚ್ಚಿನ ಉಪಕರಣಗಳನ್ನು ಚಂದ್ರನ ದಕ್ಷಿಣ ಧ್ರುವಲ್ಲಿ ಇಳಿಸಿ ಅಧ್ಯಯನ ನಡೆಸಲಾಗುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ತಿಳಿಸಿದರು.
ಯಲಹಂಕದ ನಿಟ್ಟೆ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗಬೇಕು. ಅದು ಕೇವಲ ಸ್ವಂತಕ್ಕೆ ಬಳಕೆಯಾಗುವುದಲ್ಲದೆ ನಮ್ಮ ದೇಶಕ್ಕೆ ನೆರೆಯ ದೇಶಗಳಿಗೂ ಸಹಕಾರಿಯಾಗಬೇಕು ಎಂದರು.
ಇದೇ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಧನೆಗಳ ಕುರಿತು ವಿವರಿಸಿದ ಅವರು, ಪ್ರಪಂಚದಲ್ಲೇ ಅತೀ ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿ ಇಸ್ರೋ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸಿ ಅಧ್ಯಯನಗಳನ್ನು ನಡೆಸಿದೆ. ಚಂದ್ರಯಾನ-೨ ಜಿಎಸ್ ಎಲ್ ವಿ ಮಾರ್ಕ್ 3, ಈಗಾಗಲೇ 1 ಲಕ್ಷ 40 ಸಾವಿರ ಕಿ.ಮೀ ದೂರ ಕ್ರಮಿಸಿದೆ. ಆಗಸ್ಟ್ 14 ರಂದು, ಚಂದ್ರನ ಕಕ್ಷೆ ಕಡೆಗೆ ತಿರುಗುತ್ತದೆ ಬಳಿಕ 21 ರಂದು ಚಂದ್ರನ ಕಕ್ಷೆಗೆ ಮಿಷನ್ ತಲುಪುತ್ತದೆ. ಸೆಪ್ಟೆಂಬರ್ 7 ರಂದು ಮುಂಜಾನೆ ರೋವರ್ ಚಂದ್ರನ ಮೇಲ್ಮೈನಲ್ಲಿ ಇಳಿಯಲಿದೆ. ಅನೇಕ ಉಪಕರಣಗಳನ್ನು (instrument) ಚಂದ್ರನ ಮೇಲ್ಮೈನಲ್ಲಿ ಇಳಿಸಿ, ಚಂದ್ರಯಾನ ಒಂದರ ಮುಂದುವರಿದ ಭಾಗದ ಅಧ್ಯಯನ ಮಾಡಲಿದೆ ಎಂದರು.

ನಮ್ಮ ದೇಶ ಈ ರೀತಿಯ ಬಾಹ್ಯಾಕಾಶ ಸಾಧನೆಗಳನ್ನು ಮಾಡಿಕೊಂಡು ಬಂದಿದೆ. ಉಪಗ್ರಹಗಳು, ರಾಕೆಟ್ ಗಳ ನಿರ್ಮಾಣ, ಮಾಡಿ ಬಾಹ್ಯಾಕಾಶದ ಅಧ್ಯಯನ ನಡೆಸುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ ಅಗತ್ಯ ಮಾಹಿತಿಗಳನ್ನು ನೀಡಬಹುದು. ದೇಶದ ಜನರ ರಕ್ಷಣೆ, ಸಂವಹನಕ್ಕೆ ಬೇಕಾದ ಸೌಕರ್ಯಗಳು ಸಿಗಲಿವೆ. ನಾವಿಕ್ ತಂತ್ರಜ್ಞಾನವೂ ಕೂಡಾ ಭಾರತ ಕೇವಲ ಏಳು ಉಪಗ್ರಹಗಳನ್ನು ಬಳಸಿ ಮಾಡಿರುವ ಸಾಧನೆ. ಆದ್ರೆ ಅಮೇರಿಕಾದಂತಹ ದೇಶಗಳು ಗೂಗಲ್ ಮ್ಯಾಪಿಂಗ್ ಗಾಗಿ 25 ರಿಂದ 32 ಉಪಗ್ರಹಗಳನ್ನು ಬಳಸಿವೆ ಎಂದರು.
ಮುಂದುವರಿದ ದೇಶಗಳು ಸಾಕಷ್ಟು ಸಾಧನೆಗಳನ್ನು ಮಾಡುತ್ತಿರುವಾಗ, ಭಾರತದಂತಹ ದೇಶವು ತನಗಿರುವಷ್ಟು ಸಂಪನ್ಮೂಲಗಳನ್ನು ಬಳಸಿ, ಹೊಸ ಹೊಸ ಆವಿಷ್ಕಾರಗಳನ್ನು ಮಾಡಬಹುದು. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಬಹುದು. ಹವಾಮಾನ ವೈಪರೀತ್ಯಗಳಿಂದ ಜನರನ್ನು ರಕ್ಷಿಸಬಹುದು ಎಂದು ಸಧ್ಯ ರಾಜ್ಯದ ಸ್ಥಿತಿಯ ಉದಾಹರಣೆಗಳನ್ನು ನೀಡಿದರು.

ಸೌಮ್ಯಶ್ರೀ
Kn_Bng_02_kirankumar_speech_7202707Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.