ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2020-21ನೇ ಸಾಲಿನ ಎರಡನೇ ಕಂತಿನಲ್ಲಿ 155.30 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಮೊದಲನೇ ಕಂತಿನಲ್ಲಿ ಈಗಾಗಲೇ 225 ವಿಧಾನಸಭಾ ಕ್ಷೇತ್ರಗಳು ಮತ್ತು 59 ವಿಧಾನ ಪರಿಷತ್ ಸದಸ್ಯರುಗಳ ಕ್ಷೇತ್ರಗಳಿಗೆ ತಲಾ 50 ಲಕ್ಷ ರೂ. ನಂತೆ ಬಿಡುಗಡೆ ಮಾಡಲಾಗಿತ್ತು. ಇದೀಗ ಎರಡನೇ ಕಂತಿನಲ್ಲಿ 225 ವಿಧಾನಸಭಾ ಕ್ಷೇತ್ರಗಳು ಮತ್ತು 71 ವಿಧಾನ ಪರಿಷತ್ ಸದಸ್ಯರುಗಳ ಕ್ಷೇತ್ರಗಳಿಗೆ 50 ಲಕ್ಷ ರೂ. ನಂತೆ ಬಿಡುಗಡೆ ಮಾಡಿ ಆದೇಶಿಸಲಾಗಿದೆ.