ETV Bharat / state

ಡೆತ್ ನೋಟ್ ಎಫ್ಎಸ್ಎಲ್​ಗೆ ರವಾನೆ: ರಮೇಶ್​ ಮರಣೋತ್ತರ ವರದಿ ಬಳಿಕ ತನಿಖೆ

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ(ಪಿಎ) ರಮೇಶ್​ ಆತ್ಮಹತ್ಯೆ ಬಳಿಕ ದೊರೆತಿರುವ ಡೆತ್​ನೋಟ್​ ಅನ್ನು ಎಫ್​ಎಸ್​​ಎಲ್​ ತನಿಖೆಗೆ ನೀಡಲಾಗಿದೆ. ಮತ್ತೊಂದೆಡೆ ಐಟಿ ಅಧಿಕಾರಿಗಳ ವಿರುದ್ಧ ರಮೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

author img

By

Published : Oct 13, 2019, 8:02 AM IST

ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​

ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​ ಅನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ. ಡೆತ್​ ನೋಟ್​ನಲ್ಲಿನ ಕೈಬರಹ ರಮೇಶ್​ ಅವರೇ ಬರೆದಿದ್ದಾ ಎಂಬುದರ ಕುರಿತು ತನಿಖೆ ನಡೆಯಲಿದೆ.

fsl-verify-the-ramesh-death-note
ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​

ಐಟಿ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಮೇಶ್​ ಕುಟುಂಬಸ್ಥರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಘಟನಾ ಸ್ಥಳ ಪರಿಶೀಲಿಸಿರುವ ಪೊಲೀಸರು, ವೈದ್ಯರ ಮೌಖಿಕ ವರದಿ ಹಾಗೂ ಕುಟುಂಬದವರ ದೂರಿನ ಸಾರಾಂಶ ಆಧರಿಸಿ ಅಸಹಜ ಸಾವು ಎಂದು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಸದ್ಯಕ್ಕೆ ಜಿ. ಪರಮೇಶ್ವರ್ ಅವರ ಸಂಸ್ಥೆಗಳ ಮೇಲಿನ ಐಟಿ ದಾಳಿಯನ್ನು ಮೊಟಕುಗೊಳಿಸಲಾಗಿದೆ.

Intro:ಪರಮೇಶ್ವರ್ ಆಪ್ತ ಡೆತ್ ನೋಟ್ ಎಫ್ಎಸ್ಎಲ್ ಗೆ ರವಾನೆ.
ಮರಣೋತ್ತರ ವರದಿ ಬಳಿಕ ತನಿಖೆ ನೆಡೆಸಲು ಸಿದ್ಧತೆ.

ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಆತ್ಮಹತ್ಯೆಗೆ ಶರಣಾಗಿರುವ ರಮೇಶ್ ಕುಟುಂಬಸ್ಥರು ಸದ್ಯ ದೂರು ದಾಖಲು ಮಾಡಿದ್ದು ಸದ್ಯ ಪ್ರಕರಣ ಸಂಬಂಧ ಜ್ನಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ

ಸದ್ಯ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನಾ ಸ್ಥಳವನ್ನ ಪರಿಶೀಲನೆ‍ ನೆಡೆಸಿರುವ ಪೊಲೀಸರು ಸದ್ಯ ವೈದ್ಯರ ಮೌಖಿಕ ವರದಿ ಹಾಗೂ ಕುಟುಂಬದವರ ದೂರಿನ ಸಾರಾಂಶ ಆಧರಿಸಿ ಪೊಲೀಸರು ಇದೊಂದು ಅಸಹಜ ಸಾವು ಎಂದು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಜೊತೆಗೆ ರಮೇಶ್ ಬರೆದಿರುವುದು ಎನ್ನಲಾದ ಡೆತ್ ನೋಟಿನಲ್ಲಿ ಐಟಿ ಅಧಿಕಾರಿಗಳ ತನಿಖೆ ಎದುರಿಸಲಾರದೇ ಆತ್ಮಹತ್ಯೆಗೆ ಶರಣಾಗಿರುವುದಾಗಿ ಉಲ್ಲೇಖಿಸಿರುವುದರಿಂದ ಡೆತ್ ನೋಟನ್ನ ಎಫ್ಎಸ್ಎಲ್ ಗೆ ಕಳುಹಿಸಿ ಬರವಣಿಗೆ ರಮೇಶ್ ರದ್ದಾ ಎಂಬ ಬಗ್ಗೆ ಖಚಿತತೆ ಪಡೆದುಕೊಂಡಿದ್ದಾರೆ. ಹಾಗೆ ಸದ್ಯ ಮರಣೋತ್ತರ ಪರಿಕ್ಷೆ ಮುಕ್ತಾಯ ವಾಗಿದ್ದು ಅದರ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಪೊಲೀಸರು.

ಜಿ.ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಅಂತ್ಯವಾಗುತ್ತಿದ್ದಂತೆ ಇತ್ತ ಬೆಳ್ಳಂಬೆಳಿಗ್ಗೆ ಅವರ ಪಿ.ಎ ರಮೇಶ್ ಡೆತ್ ನೋಟ್ ಬರೆದಿಟ್ಟು ಜ್ಞಾನಭಾರತಿ ಬಳಿ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಐಟಿ ದಾಳಿ ಪ್ರಕರಣಕ್ಕೆ ರೋಚಕ ತಿರುವು ನೀಡಿದ್ದು ಐಟಿ ಅಧಿಕಾರಿಗಳ ವಿರುದ್ದ ಕೂಡ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Body:,KN_BNG_01_SUSIDE_7204498Conclusion:KN_BNG_01_SUSIDE_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.