ETV Bharat / state

ಬೆಂಗಳೂರು: ವಾಹನ ಖರೀದಿ ನೆಪದಲ್ಲಿ ವಂಚಿಸುತ್ತಿದ್ದವನ ಬಂಧನ - ವಾಹನ ಮಾಲೀಕರನ್ನು ವಂಚಿಸುತ್ತಿದ್ದ ಆರೋಪಿ ಮಂಜುನಾಥ್​ ಬಂಧನ

ಕಾರು, ಬೈಕ್ ಮಾರಾಟ ಮಾಡುವ ಡೀಲರ್ ಎಂದು ಆರೋಪಿ ಮಂಜುನಾಥ್​​ ವಾಹನ ಮಾಲೀಕರನ್ನು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಸ್ವಲ್ಪ ಮುಂಗಡ ಹಣ ಕೊಟ್ಟು ಒಎಲ್ಎಕ್ಸ್​ನಿಂದ ಜಾಹೀರಾತು ಡಿಲಿಟ್ ಮಾಡಿಸಿ, ಆಮೇಲೆ ಹಣ ನೀಡದೇ ಕಡಿಮೆ ಬೆಲೆಗೆ ಮಾರಾಟ ಮಾಡಿ ಎಸ್ಕೇಪ್ ಆಗುತ್ತಿದ್ದ.

Manjunath arrested for defrauding vehicle owner
ಖಾಕಿ ಬಲೆಗೆ ಖರೀದಿ ನೆಪದಲ್ಲಿ ವಂಚಿಸುತ್ತಿದ್ದ ವಂಚಕ
author img

By

Published : Jun 16, 2022, 4:57 PM IST

ಬೆಂಗಳೂರು: ಒಎಲ್ಎಕ್ಸ್​ನಲ್ಲಿ ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ. ಕನಕಪುರ ಮೂಲದ ಮಂಜುನಾಥ್ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ನಿರುದ್ಯೋಗಿಗಳನ್ನು ಸಂಪರ್ಕಿಸಿ ಕೆಲಸ ಕೊಡಿಸುವುದಾಗಿ ಹೇಳಿ ದಾಖಲಾತಿಗಳನ್ನು ಪಡೆದುಕೊಳ್ಳುತ್ತಿದ್ದ. ಅದೇ ದಾಖಲಾತಿಗಳನ್ನು ಬಳಸಿ ಸಿಮ್ ಕಾರ್ಡ್ ಖರೀದಿ ಮಾಡುತ್ತಿದ್ದನಂತೆ.

ಆರೋಪಿಯು ವಂಚನೆ ಕೃತ್ಯಕ್ಕಾಗಿ ಕಡಿಮೆ ಬೆಲೆಗೆ ಮೊಬೈಲ್​ ಖರೀದಿಸಿ, ಅದರ ಮೂಲಕ ಒಎಲ್ಎಕ್ಸ್​ನಲ್ಲಿ ಕಾರು ಮಾರಾಟಕ್ಕಿಟ್ಟವರನ್ನು ಸಂಪರ್ಕಿಸುತ್ತಿದ್ದ. ತಾನು ಕಾರು, ಬೈಕ್ ಮಾರಾಟ ಮಾಡೋ ಡೀಲರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಸ್ವಲ್ಪ ಮುಂಗಡ ಹಣ ಕೊಟ್ಟು ಜಾಹೀರಾತು ಡಿಲಿಟ್ ಮಾಡಿಸಿ ನಂತರ ಮಾಲೀಕರಿಂದ ದಾಖಲಾತಿ ಮತ್ತು ವಾಹನ ಪಡೆಯುತ್ತಿದ್ದನು. ಆಮೇಲೆ ಹಣ ನೀಡದೇ ಕಡಿಮೆ ಬೆಲೆಗೆ ಮಾರಾಟ ಮಾಡಿ ಎಸ್ಕೇಪ್ ಆಗುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ನಗರದ ವಿವಿಧ ಠಾಣೆಗಳಲ್ಲಿ ಈತನ 9 ಪ್ರಕರಣಗಳು ಬಯಲಿಗೆ ಬಂದಿವೆ. 3 ಕಾರು, ಒಂದು ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸ್ತಿದ್ದ ಐದು ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್; ಕರುಳು ಬಳ್ಳಿಯನ್ನ ಕಿಟಿಕಿಯಿಂದ ಎಸೆದದ್ದು ಹೆತ್ತಮ್ಮನೇ ಅಂತೆ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.