ETV Bharat / state

ಪೊಲೀಸ್​​ ಹಿರಿಯಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ವಂಚಕರು! - bangalore cyber crime

ಪೊಲೀಸ್ ಯೂನಿಫಾರ್ಮ್ ಹಾಕಿರುವ ಫೋಟೋವನ್ನು ಪ್ರೊಫೈಲ್​​​ನಲ್ಲಿ ಬಳಕೆ ಮಾಡಿ ಡಿಸಿಪಿ ಶರಣಪ್ಪ ಅವರ ನಕಲಿ ಖಾತೆ ತೆರೆದಿದ್ದಾರೆ. ಖಾತೆಯಲ್ಲಿ ಶರಣಪ್ಪ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೆ‌ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಬಹಳ ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ರವಾನೆ ಮಾಡಿದ್ದಾರೆ..

Frauds open a fake Facebook account in the name of a police officer sharanappa
ಪೊಲೀಸ್​​ ಹಿರಿಯಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ವಂಚಕರು!
author img

By

Published : Nov 14, 2020, 9:07 AM IST

ಬೆಂಗಳೂರು : ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರದು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.

ಪೊಲೀಸ್ ಯೂನಿಫಾರ್ಮ್ ಹಾಕಿರುವ ಫೋಟೋವನ್ನು ಪ್ರೊಫೈಲ್​​​ನಲ್ಲಿ ಬಳಕೆ ಮಾಡಿ ನಕಲಿ ಖಾತೆ ತೆರೆದಿದ್ದಾರೆ. ಹಾಗೆ ಖಾತೆಯಲ್ಲಿ ಶರಣಪ್ಪ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೆ‌ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಬಹಳ ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ರವಾನೆ ಮಾಡಿದ್ದಾರೆ. ಈ ವಿಚಾರ ಡಿಸಿಪಿ ಶರಣಪ್ಪ ಅವರಿಗೆ ತಿಳಿದ ಕೂಡಲೇ ಅಲರ್ಟ್ ಆಗಿ ನಕಲಿ ಖಾತೆ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Frauds open a fake Facebook account in the name of a police officer sharanappa
ಡಿಸಿಪಿ ಶರಣಪ್ಪ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ವಂಚಕರು!

ಇದು ನನ್ನ ಅಧಿಕೃತ ಅಕೌಂಟ್ ಅಲ್ಲ, ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ. ಯಾರೇ ಈ ನಕಲಿ ಖಾತೆ ಮೂಲಕ ಮೆಸೇಜ್ ಅಥವಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ನಂಬಬೇಡಿ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ, ಐಪಿಎಸ್ ಹಾಗೂ ಎಸಿಪಿ, ಇನ್ಸ್​​ಪೆಕ್ಟರ್​​ ಹೆಸರಿನ ನಕಲಿ ಫೇಸ್​ಬುಕ್ ಖಾತೆ ತೆರೆದು ಪರಿಚಯಸ್ತರಲ್ಲಿ ಹಣಕ್ಕೆ ಬೇಡಿಕೆ ಇಡ್ತಿದ್ರು. ಇದೀಗ ಮತ್ತೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಅಕೌಂಟ್ ಕೂಡ ನಕಲಿ ಕ್ರಿಯೇಟ್ ಆಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.