ETV Bharat / state

ಬಾಡಿಗೆಗೆ ಇದ್ದ ಮನೆಯನ್ನೇ ಭೋಗ್ಯಕ್ಕೆ ಕೊಟ್ರು: ಆರೋಪಿಗಳಿಂದ ಒರೋಬ್ಬರಿ 80 ಮಂದಿಗೆ ವಂಚನೆ - ಬಾಡಿಗೆ ಮನೆ ಸೀಸ್​ಗೆ ಕೊಟ್ಟ ಆರೋಪಿ

ತಾನು ವಾಸವಿದ್ದ ಮನೆಯನ್ನು ಮಾಲೀಕರಿಗೆ ಗೊತ್ತಾಗದಂತೆ ಲೀಸ್​ಗೆ ಕೊಟ್ಟು ಹಣ ಸಮೇತ ಪರಾರಿಯಾದ ವ್ಯಕ್ತಿ ಬರೋಬ್ಬರಿ 80ಕ್ಕೂ ಅಧಿಕ ಮಂದಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

frauds gives lease for rental house
ಬಾಡಿಗೆಗೆ ಇದ್ದ ಮನೆಯನ್ನೇ ಭೋಗ್ಯಕ್ಕೆ ಕೊಟ್ಟ ಭೂಪ
author img

By

Published : Oct 19, 2020, 9:05 AM IST

ಬೆಂಗಳೂರು: ತಾನು ವಾಸವಿದ್ದ ಮನೆಯನ್ನು ಮಾಲೀಕರಿಗೆ ಗೊತ್ತಾಗದಂತೆ ಲೀಸ್​ಗೆ ಕೊಟ್ಟು ಹಣ ಸಮೇತ ಪರಾರಿಯಾದ ವ್ಯಕ್ತಿಯ ಸುಳಿವು ಇನ್ನೂ ಕೂಡ ಪತ್ತೆಯಾಗಿಲ್ಲ. ಆದರೆ ಮನೆ ಕಳೆದುಕೊಳ್ಳುವ ಸ್ಥಿತಿಯಲ್ಲಿರೋ ಮಂದಿ ಪ್ರತಿದಿನ ಠಾಣೆ ಮುಂಭಾಗ ಬಂದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಆರೋಪಿಗಳು ಬೆಂಗಳೂರಿನ ನಾನಾ ಕಡೆ ಇದೇ ರೀತಿ ವಂಚಿಸಿ ರಾಯಲ್ ಆಗಿ ಲೈಫ್ ಲೀಡ್ ಮಾಡ್ತಿದ್ದಾರೆ. ಆದ್ರೆ ಆತನಿಂದ ಮೋಸ ಹೋದವರು ಬಾಣಸವಾಡಿ ಪೊಲೀಸ್ ಠಾಣೆಯ ಮುಂಭಾಗ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮನೋಹರ್ ಹಾಗೂ ಆತನ ಪತ್ನಿ ಸೇರಿದಂತೆ ಬ್ರೋಕರ್ ರಂಜನ್ ವಿರುದ್ಧ ದೂರು ನೀಡಿದ್ರೂ ಇಲ್ಲಿಯವರೆಗೆ ಎಲ್ಲಿದ್ದಾನೆ ಅನ್ನೋ ಮಾಹಿತಿ ಸಿಕ್ಕಿಲ್ಲ.

ಸದ್ಯ ಈತನಿಂದ ಮೋಸ ಹೋದವರು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 80ಕ್ಕೂ ಅಧಿಕ ಮಂದಿ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿಯಿಂದ ಮನೆ ಲೀಸ್​ಗೆ ತೆಗೆದುಕೊಂಡವರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಮನೆ ಮಾಲೀಕರ ಟಾರ್ಚರ್ ಕೂಡ ತಡೆಯೋಕೆ ಆಗುತ್ತಿಲ್ಲ. ಒಂದೇ ಸಮನೆ ಮನೆ ಖಾಲಿ ಮಾಡಿ ಅಂತ ಓನರ್​ಗಳು ಹಿಂದೆ ಬಿದ್ದಿದ್ದಾರೆ. ಬ್ಯಾಂಕ್​ಗಳಿಂದ ಲೋನ್ ಪಡೆದು ಹಣ ನೀಡಿದ್ದ ಅನೇಕ ಮಂದಿ ಪರಾದಾಟ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ:

ಬಾಣಸವಾಡಿಯ ನಾನ್ಸಿ ಕುಟುಂಬ ಮನೆಗಾಗಿ ಹುಡುಕಾಟ ನಡೆಸ್ತಿದ್ರು. ಈ ವೇಳೆ ಬ್ರೋಕರ್ ರಂಜನ್ ಎಂಬುವವನ ಮೂಲಕ ಮನೋಹರ್ ಎಂಬಾತನ ಪರಿಚಯವಾಗಿತ್ತು. ಆತ 2018ರಲ್ಲಿ ಹೊರಮಾವು ಬಳಿಯ ಜಯಂತಿ ನಗರದಲ್ಲಿರುವ ಮನೆಯನ್ನ ತೋರಿಸಿದ್ದ. ಆ ವೇಳೆ 36 ಲಕ್ಷದ 50 ಸಾವಿರ ಹಣಕ್ಕೆ ಮನೆಯನ್ನ ನಾನ್ಸಿ ಕುಟುಂಬ ಲೀಸ್​ಗೆ ಪಡೆದಿತ್ತು. ಸದ್ಯ ಮನೆ ಮಾಲೀಕ ಮನೆ ಖಾಲಿ ಮಾಡಿ ಅಂದಾಗ ದಂಪತಿಗೆ ಫುಲ್ ಶಾಕ್ ಆಗಿದೆ. ಯಾಕಂದ್ರೆ ಆರೋಪಿ ಮನೋಹರ್ ಅದೇ ಮನೆಯನ್ನ ಬಾಡಿಗೆಗೆ ಪಡೆದುಕೊಂಡಿದ್ದ. ಆದರೆ ಆತ ಅಲ್ಲಿ ವಾಸವಿರದೆ ಆ ಮನೆಯನ್ನ ನಾನ್ಸಿ ದಂಪತಿಗೆ ಲೀಸ್​ಗೆ ಕೊಟ್ಟಿದ್ದ.

ಇತ್ತ ಮನೋಹರ್ ದೂರದಲ್ಲಿರೋ ಮನೆ ಮಾಲೀಕರಿಗೆ ಕಳೆದ 6 ತಿಂಗಳಿನಿಂದ ಬಾಡಿಗೆ ಕೊಟ್ಟಿಲ್ಲ. ಇದರಿಂದ ಅನುಮಾನಗೊಂಡ ಮಾಲೀಕರು ಮನೆ ಬಳಿ ಬಂದಾಗ ಫುಲ್ ಶಾಕ್ ಆಗಿದೆ. ತಾವು ಮನೆ ಬಾಡಿಗೆ ಕೊಟ್ಟಿದ್ದ ವ್ಯಕ್ತಿಯೇ ಬೇರೆ, ಈಗ ಇರುವವರೇ ಬೇರೆ ಎಂದು ಕ್ಯಾತೆ ತೆಗೆದಾಗ, ಆರೋಪಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಕೃತ್ಯ ಬಯಲಾದ ನಂತರ ಬಾಣಸವಾಡಿ ಠಾಣೆಗೆ ದೂರು ನೀಡಿದಾಗ ಇದೇ ರೀತಿ 80 ಮಂದಿ ಮೊಸ ಹೋಗಿರುವುದು ಬೆಳಕಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.