ETV Bharat / state

ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ‌ ಹಣ ಪಡೆದು ವಂಚನೆ: ಮೂವರ ಬಂಧನ - etv bharat kannada

ಆರ್ಯುವೇದ ಚಿಕಿತ್ಸೆ ನೀಡುವ ವೈದ್ಯನೆಂದು ನಂಬಿಸಿ 8 ಲಕ್ಷ ರೂ. ಹಣ ಪಡೆದು ವಂಚನೆ - ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರಿಂದ ನಕಲಿ ವೈದ್ಯ ಸಹಿತ ಮೂವರು ಆರೋಪಿಗಳ ಬಂಧನ.

Fraud by taking money name of Ayurvedic treatment
ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ‌ ಹಣ ಪಡೆದು ವಂಚಿನೆ: ಮೂವರ ಬಂಧನ
author img

By

Published : Jan 3, 2023, 3:13 PM IST

Updated : Jan 3, 2023, 5:23 PM IST

ಬೆಂಗಳೂರು: ಆರ್ಯುವೇದ ಚಿಕಿತ್ಸೆ ನೀಡುವ ವೈದ್ಯನೆಂದು ನಂಬಿಸಿ ಹಣ ಪಡೆದು ವಂಚಿಸಿದ್ದ ನಕಲಿ ವೈದ್ಯನ ಸಹಿತ ಮೂವರು ಆರೋಪಿಗಳನ್ನ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ರಾಜಸ್ಥಾನ ಮೂಲದ ಮೊಹಮ್ಮದ್ ಸಮೀನ್, ಶೈಫ್ ಅಲಿ ಹಾಗೂ ಮೊಹಮ್ಮದ್ ರಹೀಸ್ ಬಂಧಿತ ಆರೋಪಿಗಳು.

ಪಂಕಜ್ ರಾಥೋಡ್ ಎಂಬುವವರ 70 ವರ್ಷ ವಯಸ್ಸಿನ ತಾಯಿ ಕಾಲು ನೋವಿನಿಂದ ಬಳಲುತ್ತಿದ್ದರು. ವಿಚಾರವನ್ನ ತಿಳಿದುಕೊಂಡ ಆರೋಪಿಗಳು ಮೊದಲು ಬನ್ಸಾಲ್ ಎಂಬ ಹೆಸರಿನಲ್ಲಿ ಪಂಕಜ್ ತಂದೆ ಸಂಪರ್ಕಿಸಿ ಕಾಲು ನೋವಿಗೆ ಚಿಕಿತ್ಸೆ ನೀಡುವ ಮಲ್ಲಿಕ್ ಎಂಬ ವೈದ್ಯರು ತಮಗೆ ಗೊತ್ತಿದ್ದಾರೆ ಎಂದು ತಿಳಿಸಿ ನಂಬರ್ ನೀಡಿದ್ದರು. ಅದರಂತೆ ಆರೋಪಿ ನಕಲಿ ವೈದ್ಯನಿಗೆ ಕರೆ ಮಾಡಿದ್ದ ಪಂಕಜ್ ಡಿಸೆಂಬರ್ 16ರಂದು ಮನೆಗೆ ಕರೆಸಿಕೊಂಡಿದ್ದರು.

ಮಲ್ಲಿಕ್ ಹೆಸರಿನಲ್ಲಿ ಮನೆಗೆ ಬಂದು ಪರಿಶೀಲಿಸಿದ್ದ ಮೊಹಮ್ಮದ್ ಸಮೀನ್ ಕಾಲಿನಲ್ಲಿ ಕೀವು ಇದ್ದು ಒಂದು ಹನಿ ಹೊರತೆಗೆಯಲು 4 ಸಾವಿರ ಖರ್ಚಾಗುತ್ತದೆ ಎಂದು ನಂಬಿಸಿದ್ದ. ಆರೋಪಿಯ ಮಾತಿನಂತೆ ಪಂಕಜ್ ಕುಟುಂಬ ಎಂಟು ಲಕ್ಷ ಹಣವನ್ನ ಚಿಕಿತ್ಸಾ ವೆಚ್ಚವಾಗಿ ನೀಡಿತ್ತು. ಅಸಲಿಗೆ ಯಾವುದೇ ಚಿಕಿತ್ಸೆ ನೀಡದೇ, ಹಣ ಪಡೆದು ಆರೋಪಿ ಪರಾರಿಯಾಗಿದ್ದ. ಮೋಸ ಹೋದ ಪಂಕಜ್ ರಾಥೋಡ್ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ನೆಲಮಂಗಲ ಬಳಿ ರಸ್ತೆ ಬದಿಯಲ್ಲಿ ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ಶೆಡ್ ಹಾಕಿಕೊಂಡಿದ್ದ ಮೊಹಮ್ಮದ್ ಸಮೀನ್, ಶೈಫ್ ಅಲಿ ಹಾಗೂ ಮೊಹಮ್ಮದ್ ರಹೀಸ್ ನನ್ನ ಬಂಧಿಸಿದ್ದಾರೆ‌. ಬಂಧಿತರಿಂದ 4 ಕಾರು 3 ಬೈಕ್ 3.50 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ‌ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್

Last Updated : Jan 3, 2023, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.