ETV Bharat / state

ಸೈಟು‌ ಮಾರಾಟಕ್ಕಿದೆ‌ ಎಂದು ಬೋರ್ಡ್ ಹಾಕುವ ಮುನ್ನ ಹುಷಾರ್​.. ಈ ನಕಲಿ ಸೃಷ್ಟಿಕರ್ತನ ಕಣ್ಣಿಗೆ ಬಿದ್ರೆ ಅಷ್ಟೇ! - ಈಟಿವಿ ಭಾರತ ಕನ್ನಡ ​

ಸೈಟು ಖರೀದಿ ನೆಪದಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ವಂಚನೆ - ಐದು ವರ್ಷಗಳ ಬಳಿಕ ಆರೋಪಿ ಬಂಧನ - ವಿವಿಧ ಬ್ಯಾಂಕ್​ಗಳಲ್ಲಿ ಸೈಟಿನ ನಕಲಿ ದಾಖಲಾತಿ ನೀಡಿ ಸಾಲ ಪಡೆದಿರುವ ಆರೋಪಿ

fraud-by-creating-fake-document-in-buying-a-site-accused-arrested
ಸೈಟು‌ ಮಾರಾಟಕ್ಕಿದೆ‌ ಎಂದು ನೀವೇನಾದರೂ ಬೋರ್ಡ್ ಹಾಕಿಕೊಂಡಿದ್ದೀರಾ : ಹಾಗಾದರೆ ಈ ಸ್ಟೋರಿ‌‌ ಓದಲೇಬೇಕು ..!
author img

By

Published : Jan 30, 2023, 4:13 PM IST

ಸೈಟು‌ ಮಾರಾಟಕ್ಕಿದೆ‌ ಎಂದು ನೀವೇನಾದರೂ ಬೋರ್ಡ್ ಹಾಕಿಕೊಂಡಿದ್ದೀರಾ : ಹಾಗಾದರೆ ಈ ಸ್ಟೋರಿ‌‌ ಓದಲೇಬೇಕು ..!

ಬೆಂಗಳೂರು : ಸೈಟು‌ ಮಾರಾಟಕ್ಕಿದೆ‌ ಎಂದು ನೀವೇನಾದರೂ ಬೋರ್ಡ್ ಹಾಕಿಕೊಂಡಿದ್ದೀರಾ? ನಿವೇಶನ ಖರೀದಿ‌ ಮಾಡುವ ಸೋಗಿನಲ್ಲಿ ಯಾರಿಗಾದರೂ ದಾಖಲೆಗಳನ್ನು ಕೊಟ್ಟಿದ್ದೀರಾ ?. ಹಾಗಾದರೆ ನೀವೂ ವಂಚನೆಗೊಳಗಾಗಿದ್ದೀರಿ ಎಂದೇ ಅರ್ಥ. ಹೌದು, ಸೈಟು ಖರೀದಿ ನೆಪದಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್ ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಐದು ವರ್ಷಗಳ ಬಳಿಕ ಶೇಷಾದ್ರಿಪುರಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ತುಮಕೂರಿನ ತಿಪಟೂರು ಮೂಲದ ಲೋಕೇಶ್ ಹಾಗೂ‌ ಆತನ ಸಹಚರ ಆಯುಬ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.‌‌‌ ಆರೋಪಿ ಲೋಕೇಶ್ ಬಂಧನದಿಂದ ಶೇಷಾದ್ರಿಪುರಂ, ಶಂಕರಪುರ, ವಿದ್ಯಾರಣಪುರ ಹಾಗೂ ಜಿಗಣಿ ಸೇರಿ ವಿವಿಧ‌ ಪೊಲೀಸ್ ಠಾಣೆಗಳಲ್ಲಿ‌ ದಾಖಲಾಗಿದ್ದ ಏಳು ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಸೈಟು ಮಾರಾಟಕ್ಕಿದೆ‌ ಬೋರ್ಡ್ ಹಾಕುವವರೇ ಇವನ ಟಾರ್ಗೆಟ್ : ನಗರದಲ್ಲಿ‌ ಖಾಲಿ‌ ಸೈಟು ಮಾರಾಟಕ್ಕೆ‌ ಲಭ್ಯವಿದೆ ಎಂದು ಎಂದು ಮೊಬೈಲ್‌ ನಂಬರ್ ಸಮೇತ ಬೋರ್ಡ್ ಹಾಕಿಕೊಳ್ಳುವ ಮಾಲೀಕರನ್ನು ಆರೋಪಿ ಲೋಕೇಶ್​ ಸಂಪರ್ಕಿಸುತ್ತಿದ್ದ. ಬಳಿಕ ಸೈಟು ಖರೀದಿಸುವುದಾಗಿ ಹೇಳಿ ಮುಂಗಡವಾಗಿ ಸೈಟಿನ ಮಾಲೀಕರಿಗೆ ಹಣ ನೀಡುತ್ತಿದ್ದ. ಬಳಿಕ ತನ್ನ ವಕೀಲರಿಗೆ ಸೈಟಿನ ದಾಖಲಾತಿಗಳನ್ನು ತೋರಿಸಬೇಕೆಂದು ಮಾಲೀಕರಿಂದ ದಾಖಲೆಗಳನ್ನು ಪಡೆಯುತ್ತಿದ್ದ. ಬಳಿಕ‌ ಅಸಲಿ ದಾಖಲಾತಿ ರೀತಿಯಲ್ಲೇ ನಕಲಿ‌‌ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ. ಬಳಿಕ ನಕಲಿ ಮಾಲೀಕರನ್ನು ಸೃಷ್ಟಿಸಿ ಅವರಿಂದ‌ ನಿವೇಶ‌ನ ಖರೀದಿಸಿರುವುದಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ. ನಂತರ ಅದೇ ದಾಖಲಾತಿ ತೆಗೆದುಕೊಂಡು ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ಬ್ಯಾಂಕುಗಳಿಗೆ ವಂಚಿಸುತ್ತಿದ್ದ. ನಂತರ ಮೊದಲ ಮೂರು ತಿಂಗಳು ಬ್ಯಾಂಕ್​ಗಳಿಗೆ ಸಾಲದ ಇಎಂಐ ಹಣವನ್ನು ಕಟ್ಟಿ ನಂತರ ಸಾಲ ಪಾವತಿಸದೆ ವಂಚಿಸುತ್ತಿದ್ದ. ಇದೇ ರೀತಿ ಮಾಡಿ ಹಲವು ಬ್ಯಾಂಕ್ ಗಳಲ್ಲಿ ಇದುವರೆಗೂ ಸುಮಾರು 2 ಕೋಟಿ ರೂಪಾಯಿವರೆಗೂ ವಂಚಿಸಿರುವುದಾಗಿ ಡಿಸಿಪಿ ಮಾಹಿತಿ ನೀಡಿದ್ದಾರೆ.

ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ : ಈತನ ವಿರುದ್ಧ ಕಳೆದ ಐದು ವರ್ಷಗಳ ಹಿಂದೆ ವಂಚನೆ‌ ಪ್ರಕರಣ ದಾಖಲಾಗಿದ್ದರೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಹಳೆ ವಿಲೇವಾರಿ ಆಗದ ಪ್ರಕರಣಗಳನ್ನು ಇತ್ತೀಚಿಗೆ ಪರಿಶೀಲನೆ ನಡೆಸಿದ ಕೇಂದ್ರ ವಿಭಾಗದ ಡಿಸಿಪಿ‌ ನೀಡಿದ ಸೂಚನೆ ಮೇರೆಗೆ ಪ್ರಕರಣದ ಮರು ತನಿಖೆ‌ ನಡೆಸಿದ ಪೊಲೀಸರು ಆರೋಪಿಯನ್ನು ತಿಪಟೂರಿನಲ್ಲಿ ಬಂಧಿಸಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ 'ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡಿದರೂ ಕೇಳಲ್ಲ. ನಾನು ಮಾಡಿರುವ ಮೂರ್ನಾಲ್ಕು ಕೋಟಿ ವಂಚನೆ ಬಗ್ಗೆ ಕೇಳೋಕೆ ಬರ್ತಿರಾ..? ಅವರನ್ನೆಲ್ಲ ಏನೂ ಮಾಡಲ್ಲ. ನಮ್ಮನ್ನು ಮಾತ್ರ ಪ್ರಶ್ನೆ ಮಾಡ್ತೀರಾ. ನಾನು ನಿಮಗೆ (ಪೊಲೀಸರಿಗೆ) ವಂಚನೆ ಮಾಡಿಲ್ಲ. ಬದಲಿಗೆ ಬ್ಯಾಂಕಿನವರಿಗೆ ಮಾಡಿರೋದು. ನೀವೇಕೆ ತಲೆ ಕೆಡಿಸಿಕೊಳ್ತೀರಾ' ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳಿಂದಲೇ ತಿಳಿದುಬಂದಿದೆ.

ಇದನ್ನೂ ಓದಿ : ಜೂನಿಯರ್ ಕ್ಲರ್ಕ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಹೈದರಾಬಾದ್​ನಲ್ಲಿ 16ನೇ ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.