ETV Bharat / state

ಬೆಂಗಳೂರಲ್ಲಿ ನಾಲ್ಕು ಕೊರೊನಾ ಪ್ರಕರಣ ಪತ್ತೆ... ಪೊಲೀಸ್ ಇಲಾಖೆ ಅಲರ್ಟ್ - ಸ್ಯಾನಿಟೈಜರ್ ಬಳಕೆ

ಸಿಲಿಕಾನ್ ಸಿಟಿಯಲ್ಲಿ ನಾಲ್ಕು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನಲೆ ಇಂದು ನಗರ ಪೊಲೀಸ್​ ಆಯುಕ್ತರು ಹಿರಿಯ ಅಧಿಕಾರಿಗಳ ಸಭೆ ಕರೆದು ಜಾಗೃತಿ ಕುರಿತು ಚರ್ಚೆ ನಡೆಸಿದರು.

bhaskar rao
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
author img

By

Published : Mar 10, 2020, 4:23 PM IST

ಬೆಂಗಳೂರು: ನಗರದಲ್ಲಿ ನಾಲ್ಕು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನಲೆ ಇಂದು ಪೊಲೀಸ್​ ಕಮಿಷನರ್ ಭಾಸ್ಕರ್​ ರಾವ್​ ಅವರು ಹಿರಿಯ ಅಧಿಕಾರಿಗಳ ಸಭೆ ಕರೆದು ಜಾಗೃತಿ ಕುರಿತು ಚರ್ಚಿಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಯುವಿಕೆ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ಈಗಾಗ್ಲೇ ಸೂಚಿಸಿದ್ದಾರೆ‌. ‌ಪೊಲೀಸ್ರು ಸದಾ ಜನರೊಂದಿಗೆ ಬೆರೆಯುವುದರಿಂದ ಅವರು ಮಾಸ್ಕ್ ಬಳಸಬೇಕು, ದೂರುದಾರರ ಬಳಿ ಮಾತನಾಡುವಾಗ ದೂರ ನಿಂತುಕೊಳ್ಳಬೇಕು, ಇಲಾಖೆಯ ಸಿಬ್ಬಂದಿ ಹೊರಗಿನ ಕೆಲಸ ಮುಗಿಸಿ ಬಂದ ನಂತ್ರ ಸ್ಯಾನಿಟೈಜರ್ ಬಳಸಬೇಕು. ಹಾಗೆಯೇ ಯಾವುದೇ ಕಾಯಿಲೆ ಬಂದರೂ ಸಿಬ್ಬಂದಿಗೆ ತಕ್ಷಣ ರಜೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಲ್ಲಿ ನಾಲ್ಕು ಕೊರೊನಾ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಪೊಲೀಸ್ ಇಲಾಖೆ ಫುಲ್​ ಅಲರ್ಟ್​

ನಗರದಲ್ಲಿ ಕೆಲವೊಮ್ಮೆ ಪ್ರತಿಭಟನೆಗಳು ಕೂಡ ನಡೆಯುತ್ತವೆ. ಈ ವೇಳೆ ಭದ್ರತೆ ಒದಗಿಸಬೇಕಾಗುತ್ತೆ. ಪ್ರತಿಭಟನಾಕಾರರು ನೂರಾರು ಜನರು ಸೇರುವುದರಿಂದ ಇಲ್ಲೂ ಇದು ಹರಡುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಭಟನಾಕಾರರು ಸದ್ಯಕ್ಕೆ ಯಾವುದೇ ರೀತಿ ಪ್ರತಿಭಟನೆ ಮಾಡದಂತೆ ಮನವಿ ಮಾಡ್ತಿದ್ದಿನಿ. ಹಾಗೆಯೇ ಸುಳ್ಳು ಸುದ್ದಿಗಳನ್ನ ಹರಡುವವರ ವಿರುದ್ಧ ಕ್ರಮ ಕ್ರೈಗೊಳ್ಳಲಾಗುವುದು. ಪ್ರತಿಯೊಬ್ಬ ಪೊಲೀಸರು ಕೊರೊನಾ ಬಗ್ಗೆ ಜಾಗೃತಿ ವಹಿಸಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.