ETV Bharat / state

ಬೆಂಗಳೂರಲ್ಲಿ ಒಂದೇ ಪೊಲೀಸ್​​​ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ! - ಕೊರೊನಾ ಬೆಂಗಳಳೂರು

ಕಾರ್ಯನಿರತ ಬೆಂಗಳೂರು ಪೊಲೀಸರಿಗೆ ಕೊರೊನಾ ಸೋಂಕು ಬಿಡದೆ ಕಾಡತೊಡಗಿದ್ದು, ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ ತಗುಲಿದೆ.

Corona
ಸಾಂದರ್ಭಿಕ ಚಿತ್ರ
author img

By

Published : Jul 23, 2020, 1:16 PM IST

ಬೆಂಗಳೂರು: ನಗರದ ಪೊಲೀಸರಿಗೆ ಕೊರೊನಾ ಮಹಾಮಾರಿ ಬಿಡದೆ ಕಾಡತೊಡಗಿದ್ದು, ಈಗಾಗಲೇ ಹಲವಾರು ಪೊಲೀಸರು ಕೊರೊನಾಗೆ ತುತ್ತಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ಸಹ ಒಂದೇ ಠಾಣೆಯ ನಾಲ್ವರು ಪೊಲೀಸರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸದ್ಯ ನಾಲ್ಕು ಜನ ಸಿಬ್ಬಂದಿಯನ್ನ ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕಾಏಕಿ ನಾಲ್ವರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್​ಗೆ ಒಳಪಡಿಸಿ ಠಾಣೆ ಸೀಲ್ ​ಡೌನ್ ಮಾಡಲಾಗಿದೆ.

ಸೋಂಕಿತ ಸಿಬ್ಬಂದಿ ಲಾಕ್​ಡೌನ್ ಸಂದರ್ಭದಲ್ಲಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಸೋಂಕು ಅಂಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಇತರೆ ಸಿಬ್ಬಂದಿ ಸಹ ಸೋಂಕು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.