ಬೆಂಗಳೂರು : ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಪರಿಷತ್ನಲ್ಲಿ ನಡೆದ ಘಟನೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ನಲ್ಲಿ ಇಂತಹ ಘಟನೆಗಳು ನಡೆಯೋದು ಸಹಜ. ಆದರೆ, ಇದೇ ಘಟನೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲು ಆಗುವುದಿಲ್ಲ. ನಾನು ಸಭಾಧ್ಯಕ್ಷನಾದಾಗ ಇಂತಹ ಘಟನೆಗಳು ನಡೆದಿವೆ.
ನಾನು ಯಾವತ್ತೂ ಆ ರೀತಿಯ ಬೆಳವಣಿಗೆಗೆ ಕುಗ್ಗಿಲ್ಲ. ಹಾಗಾಗಿ ಈಗಿನ ರಾಜಕೀಯ ಬೆಳವಣಿಗೆಯಿಂದ ಧರ್ಮೇಗೌಡ ಅವರು ದುರ್ಬಲಗೊಂಡಿಲ್ಲ, ಅವರ ಸಾವಿಗೆ ಪರಿಷತ್ ಗಲಾಟೆ ಕಾರಣ ಎಂದು ಹೇಳಲು ಆಗುವುದಿಲ್ಲ. ಆದರೆ, ತನಿಖೆಯಿಂದ ಮಾತ್ರ ಆ ಬಗೆಗಿನ ಸತ್ಯಾಸತ್ಯತೆ ತಿಳಿಯಬೇಕು ಎಂದರು.
ಓದಿ: ಡೆತ್‌ನೋಟ್‌ನಲ್ಲಿ ಆಸ್ತಿ ಹಂಚಿಕೆ ಕುರಿತು ಬರೆದಿದ್ದಾರೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳುವೆ- ಸಿಎಂ ಬಿಎಸ್‌ವೈ
ಇನ್ನು, ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು. ಆದರೆ, ರಾಜಕಾರಣಿಗಳು ಆದಂತಹ ನಾವುಗಳು ಸಾವಿನ ಬಗ್ಗೆ ಚಿಂತನೆ ಮಾಡಿಕೊಳ್ಳಬೇಕು ಎಂದರು.