ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಅವರ ಪತ್ನಿ ಚೆನ್ನಮ್ಮ ಹಾಗೂ ಅವರ ಕುಟುಂಬ ಸದಸ್ಯರೆಲ್ಲರೂ ಸೇರಿ ಇಂದು ಬೆಳಗ್ಗೆ ಸ್ವರ್ಣ ಗೌರಿ ವ್ರತವನ್ನು ಆಚರಿಸಿ, ಗೌರಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಗೌಡರು, ಓಂ ಹೇ ಗೌರಿ ಶಂಕರಾರ್ಧಾಂಗಿ ಯಥಾ ತ್ವಂ ಶಂಕರಪ್ರಿಯೇ| ತಥಾ ಮಾಂ ಕುರು ಕಲ್ಯಾಣಿ ಕಾಂತಕಾಂತಂ ಸುದುರ್ಲಭಾಂ|| ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಗೌರಿಯ ಅನುಗ್ರಹದಿಂದ ಸರ್ವರಿಗೂ ಆರೋಗ್ಯ ಸುಖ ಶಾಂತಿ ನೆಮ್ಮದಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಗೌರಿಹಬ್ಬದ ಶುಭಾಶಯಗಳು. ಆ ತಾಯಿ ಗೌರಿ ಸರ್ವರ ದುಃಖದುಮ್ಮಾನಗಳನ್ನು ನಿವಾರಿಸಿ ಸಿರಿಸಂಪತ್ತು, ಆಯುರಾರೋಗ್ಯ, ಸುಖಶಾಂತಿ ದಯಪಾಲಿಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಸಿಗದಂತೆ ಖರ್ಗೆ ಕೆಲಸ ಮಾಡುತ್ತಿದ್ದಾರೆ: ಹೆಚ್. ಡಿ ದೇವೇಗೌಡ